ಅಭಿಗೆ ಅವಿವಾ ಕೊಟ್ಟ ಗಿಫ್ಟ್ ಏನು? ಸೊಸೆಗೆ ಸುಮಲತಾ ಕೊಟ್ಟ ವಜ್ರಾಭರಣದ ಮೌಲ್ಯ ಎಷ್ಟು ಕೋಟಿ?
ಅಭಿಷೇಕ್ ಅಂಬರೀಶ್ ಹಾಗೂ ಬಿಡಪ ಜೋಡಿಯ ಮದುವೆ ಅದ್ಧೂರಿಯಾಗಿ ನೆರವೇರಿದೆ. ಅಕ್ಕ ಪಕ್ಕದ ಇಂಡಸ್ಟ್ರಿ ಸೂಪರ್ ಸ್ಟಾರ್ಸ್ ಬಂದು ನವಜೋಡಿಗೆ ಶುಭ ಹಾರೈಸಿದ್ದಾರೆ. ಅತಿಥಿಗಳಿಂದ ವಧು, ವರರಿಗೆ ಭರ್ಜರಿ ಉಡುಗೊರೆಗಳು ಸಿಕ್ಕಿದೆ. ಇದೀಗ ಎರಡೂ ಕುಟುಂಬಗಳ ನಡುವೆ ದುಬಾರಿ ಉಡುಗೊರೆಗಳನ್ನು ಕೊಟ್ಟು ಕೊಳ್ಳುವುದು ನಡೆದಿದೆ. ಅದರ ಬೆಲೆ ಕೇಳಿದವರು ಶಾಕ್ ಆಗಿದ್ದಾರೆ.
ರೆಬಲ್ ಸ್ಟಾರ್ ಅಂಬರೀಶ್ ಕನಸಿನಂತೆ ಪುತ್ರನ ಕಲ್ಯಾಣ ನೆರವೇರಿದೆ. ರಜನಿಕಾಂತ್, ಮೋಹನ್ ಬಾಬು, ವೆಂಕಯ್ಯ ನಾಯ್ಡು, ಸುಹಾಸಿನಿ, ಯಶ್ ದಂಪತಿ, ಸುದೀಪ್ ಸುದೀಪ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಸಾಕಷ್ಟು ಗಣ್ಯರು ಅಭಿ- ಅವಿವಾ ವಿವಾಹ ಮಹೋತ್ಸವಕ್ಕೆ ಹಾಜರಾಗಿದ್ದರು. ಪ್ಯಾಲೇಸ್ ಗ್ರೌಂಡ್‌ನಲ್ಲಿರುವ ಮಾಣಿಕ್ಯ ಚಾಮರವಜ್ರ ಹಾಲ್‌ನಲ್ಲಿ ಒಕ್ಕಲಿಗ ಸಂಪ್ರದಾಯಗಳಂತೆ ಮದುವೆ ನೆರವೇರಿದೆ. ಬುಧವಾರ ಅದ್ಧೂರಿ ಆರತಕ್ಷತೆ, ಜೂನ್ 16ಕ್ಕೆ ಮಂಡ್ಯದಲ್ಲಿ ಬೀಗರೂಟ ಕಾರ್ಯಕ್ರಮಗಳಿಗಾಗಿ ತಯಾರಿ ನಡೀತಿದೆ.

ಹಲವು ದಿನಗಳಿಂದ ನಟಿ ಸುಮಲತಾ ಪುತ್ರನ ಮದುವೆಗೆ ತಯಾರಿ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾಕಷ್ಟು ಗಣ್ಯರನ್ನು ವಿವಾಹ ಮಹೋತ್ಸವಕ್ಕೆ ಆಹ್ವಾನಿಸಿದ್ದರು. ಖುದ್ದು ಅಭಿಷೇಕ್ ಹೋಗಿ ಕೆಲ ಗಣ್ಯರನ್ನು ತಮ್ಮ ಮದುವೆಗೆ ಕರೆದಿದ್ದರು. ಕಳೆದ ಮೂರ್ನಾಲ್ಕು ದಿನಗಳಿಂದ ಮದುವೆ ಶಾಸ್ತ್ರ, ಸಂಪ್ರದಾಯಗಳು ಅಂಬಿ ಮನೆಯಲ್ಲಿ ನೆರವೇರಿತ್ತು. ಇಂದು(ಜೂನ್ 5) ಕಲ್ಯಾಣ ಮಂಟಪಕ್ಕೆ ಅಭಿ ದುಬಾರಿ ಕಾರ್ ಏರಿ ಆಗಮಿಸಿದ್ದರು.
ಪತಿಗೆ ಅವಿವಾ ಕಾರ್ ಗಿಫ್ಟ್
ನಟ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಹಸೆಮಣೆ ಏರಿದ್ದಾರೆ. ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ ಪುತ್ರಿ ಅವಿವಾ ಬಿಡಪ. ಇನ್ನು ಮದುವೆ ಸಮಯದಲ್ಲೇ ಪತಿಗೆ ಅವಿವಾ ಮನೆಯಿಂದ BMW X 7 ಕಾರು ಉಡುಗೊರೆಯಾಗಿ ಸಿಕ್ಕಿದೆ. ಅಂದಹಾಗೆ ಈ ಕಾರಿನ ಬೆಲೆ ಅಂದಾಜು ಒಂದೂವರೆ ಕೋಟಿ ರೂಪಾಯಿ ಎನ್ನಲಾಗ್ತಿದೆ. ಇದೇ ಬಿಳಿ ಬಣ್ಣದ BMW ಕಾರ್ ಏರಿ ಅಭಿಷೇಕ್ ಮದುವೆ ಮನೆಗೆ ಆಗಮಿಸಿದ್ದರು.

ಅವಿವಾಗೆ ಅತ್ತೆ ದುಬಾರಿ ಬಹುಮಾನ
ಇನ್ನು ಸುಮಲತಾ ಅಂಬರೀಶ್ ತಮ್ಮ ಸೊಸೆ ಅವಿವಾಗೆ ಬರೋಬ್ಬರಿ 3 ಕೋಟಿ ರೂ. ಮೌಲ್ಯದ ವಜ್ರಾಭರಣಗಳನ್ನು ಉಡುಗೊರೆಯಾಗಿ ನೀಡಿದ್ದಾರಂತೆ. ಅಂದಹಾಗೆ ಅವಿವಾ ಕೂಡ ಫ್ಯಾಷನ್ ಡಿಸೈನರ್. ಜೊತೆ ಮಾಡೆಲ್ ಹಾಗೂ ನಟಿ ಅನ್ನೋದು ವಿಶೇಷ. ಬ್ಯುಸಿನೆಸ್ ವುಮೆನ್ ಕೂಡ ಆಗಿದ್ದು ಅಂತರಾಷ್ಟ್ರೀಯ ಕಂಪನಿಗಳ ಜೊತೆ ಟೈ ಅಪ್ ಆಗಿ ಉದ್ಯಮ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದಾರೆ. ತಮ್ಮದೇ ಸ್ವಂತ ಸ್ವಿಮ್‌ವೇರ್ ಬ್ರ್ಯಾಂಡ್ ಕೂಡ ಇದೆ.
ಅಭಿಗಿಂತ ಅವಿವಾ ದೊಡ್ಡವರು
ಪ್ರೀತಿಗೇ ಆಗಲಿ, ಮದುವೆಗೆ ವಯಸ್ಸಿನ ಜೊತೆ ಸಂಬಂಧ ಇಲ್ಲ ಎಂದು ಕೆಲವರು ಹೇಳುತ್ತಾರೆ. ಸೆಲೆಬ್ರೆಟಿಗಳ ಮದುವೆ ಅಂದಾಕ್ಷಣ ಕೆಲವೊಮ್ಮೆ ಇಬ್ಬರು ವಯಸ್ಸಿನ ಅಂತರ ಎಷ್ಟು ಎನ್ನುವ ಮಾತು ಬರುತ್ತದೆ. ಅಭಿಷೇಕ್‌ಗಿಂತ ಅವಿವಾ ವಯಸ್ಸಿನಲ್ಲಿ ಒಂದು ವರ್ಷ ದೊಡ್ಡವರು. ಲಂಡನ್‌ನಲ್ಲಿ ಓದುವಾಗ ಇಬ್ಬರ ನಡುವೆ ಪರಿಚಯವಾಗಿ ನಂತರ ಪ್ರೀತಿ ಬಿದ್ದಿದ್ದರು. ಈಗ ಹಸೆಮಣೆ ಏರಿದ್ದಾರೆ.

ಅಂಬಿ ಹುಟ್ಟುಹಬ್ಬಕ್ಕೆ ಟ್ರಿಬ್ಯೂಟ್
ಇತ್ತೀಚೆಗೆ ರೆಬಲ್ ಸ್ಟಾರ್ ಅಂಬರೀಶ್ ಜಯಂತೋತ್ಸವಕ್ಕೆ ಅಭಿಷೇಕ್ ಹಾಗೂ ಅವಿವಾ ಜೋಡಿ ಸ್ಪೆಷಲ್ ಟ್ರಿಬ್ಯೂಟ್ ನೀಡಿದ್ದರು. ಅಂಬಿ ನಟನೆಯ ಸೂಪರ್ ಹಿಟ್ ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕಿದ್ದರು.'ಚಳಿ ಚಳಿ ತಾಳೆನು', 'ಒಲವಿನ ಉಡುಗೊರೆ', 'ಮಂಡ್ಯದ ಗಂಡು' ಸಾಂಗ್‌ಗಳನ್ನು ರೀಕ್ರಿಯೇಟ್ ಮಾಡಿದ್ದರು. ಆ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು.


Click it and Unblock the Notifications











