'ವೆಲ್ ಕಮ್ ಟು ಗೋವಾ' ಮೆಚ್ಚಿದ ಸ್ಯಾಂಡಲ್ ವುಡ್ ನಿರ್ದೇಶಕರು
ಹೊಸ ಹೊಸ ಹುಡುಗರು ತಮ್ಮ ಕಿರು ಚಿತ್ರಗಳ ಎಲ್ಲರ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅದೇ ರೀತಿ ಈಗ ಬಂದಿರುವ ಒಂದು ಕಿರುಚಿತ್ರ ನೋಡಿ ಸ್ಯಾಂಡಲ್ ನಿರ್ದೇಶಕರು ಮೆಚ್ಚಿಕೊಂಡಿದ್ದಾರೆ.
'ವೆಲ್ ಕಮ್ ಟು ಗೋವಾ' ಎಂಬ ಶಾರ್ಟ್ ಮೂವಿಯ ಟ್ರೇಲರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ. ಯೂ ಟ್ಯೂಬ್ ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಈ ಟ್ರೇಲರ್ ಅನ್ನು ಸ್ಟಾರ್ ನಿರ್ದೇಶಕರು ಸಹ ವೀಕ್ಷಿಸಿದ್ದಾರೆ.

ನಿರ್ದೇಶಕ ಸಿಂಪಲ್ ಸುನಿ, ಎ ಹರ್ಷ, ರಿಷಬ್ ಶೆಟ್ಟಿ, ಅಲೆಮಾರಿ ಸಂತು, ನಟ ಅನೂಪ್ ಭಂಡಾರಿ ಸೇರಿದಂತೆ ಚಿತ್ರರಂಗದ ಕೆಲವು ಗಣ್ಯರು 'ವೆಲ್ ಕಮ್ ಟು ಗೋವಾ' ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ.

ರಾಕೇಶ್ ಪ್ರತಾಪ್ ಈ ಕಿರುಚಿತ್ರದ ನಿರ್ದೇಶನ ಮಾಡಿದ್ದಾರೆ. ಪ್ರಥ್ವಿ ಕಾಂತ್, ಪವನಪುತ್ರ, ಆರ್ಯನ್ ತ್ರಿಶೂಲ್, ನವೀನ್ ದಾಂಡೋಟಿ, ಕುಬರ್ ರವಿ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಗೋವಾಗೆ ಹೋಗುವ ಪ್ಲಾನ್ ಮಾಡುವ ಸ್ನೇಹಿತರ ನಡುವೆ ಏನಾಗುತ್ತದೆ ಎಂಬ ಕಥೆಯನ್ನು ಇಲ್ಲಿ ಹಾಸ್ಯ ರೂಪದಲ್ಲಿ ತೋರಿಸಿದ್ದಾರೆ.
English summary
'Welcome To Goa' kannada short movie trailer released


Click it and Unblock the Notifications