ಕೆಜಿಎಫ್ ಮೂಲಕ ಕನ್ನಡಿಗರ ಹೃದಯ ಗೆದ್ದ ಯ್ಯೂಟ್ಯೂಬರ್ ಇನ್ನು ನೆನಪು ಮಾತ್ರ
ನಿಜಾ .. ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ. ಹುಟ್ಟು ಸಾವಿನ ನಡುವಿನ ಹೋರಾಟವೇ ಜೀವನ. ಇದು ಪ್ರಕತಿ ನಿಯಮ. ಮನುಷ್ಯನ ಸಾವು ಅನಿವಾರ್ಯವಾದರೂ ಮತ್ಯುವಿನ ಅವತಾರಗಳು ಅನೇಕ. ಜಗತ್ತಿನಲ್ಲಿ ಯಾವುದೂ ಮಾನವನಿಗೆ ಸಮಾನವಾಗಿ ದಕ್ಕುವುದಿಲ್ಲ. ಬಯಸಿದ ಬದುಕು ದೊರೆಯುವುದಿಲ್ಲ. ಇದಕ್ಕೆ ಆ್ಯಂಗ್ರಿ ರ್‍ಯಾಂಟ್‌ಮ್ಯಾನ್ ಅವರ ಅಕಾಲಿಕ ನಿಧನ ಸಾಕ್ಷಿ
ಹೌದು, ಆ್ಯಂಗ್ರಿ ರ್‍ಯಾಂಟ್‌ಮ್ಯಾನ್, ಯುಟ್ಯೂಬ್ ಪ್ರಪಂಚದ ಖ್ಯಾತ ಹೆಸರು. ತಮ್ಮದೇ ಆದ ವಿಚಿತ್ರ ಶೈಲಿಯಲ್ಲಿ ಸಿನಿಮಾ ವಿಮರ್ಶೆಯನ್ನ ಮಾಡ್ತಿದ್ದ ಇವರ ನಿಜವಾದ ಹೆಸರು ಅಭ್ರದೀಪ್ ಸಾಹಾ. ಸಿನಿಮಾ ಯಾವುದೇ ಭಾಷೆಯದ್ದಾಗಿರಲಿ.. ಆ ಚಿತ್ರಕ್ಕೆ ಸ್ಟಾರ್ ಯಾರೇ ಇರಲಿ.. ಯಾರ ಮುಲಾಜನ್ನೂ ನೋಡದೇ, ತಮ್ಮ ವಿಮರ್ಶೆಯ ಮೂಲಕ ಜನಮನ ಗೆದ್ದಿದ್ದ ಆ್ಯಂಗ್ರಿ ರ್‍ಯಾಂಟ್‌ಮ್ಯಾನ್ ಕೇವಲ 27ರ ಪ್ರಾಯದಲ್ಲಿಯೇ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ.

ಆ್ಯಂಗ್ರಿ ರ್‍ಯಾಂಟ್‌ಮ್ಯಾನ್ ಅವರ ನಿಧನಕ್ಕೆ ನಿಖರವಾದ ಕಾರಣವೇನು ಅನ್ನುವುದು ಇನ್ನೂ ಬಹಿರಂಗವಾಗದೇ ಇದ್ದರೂ, ಕಳೆದ ಕೆಲ ದಿನಗಳ ಹಿಂದೆ.. ಒಪನ್ ಹಾರ್ಟ್ ಸರ್ಜರಿಗೆ ಆ್ಯಂಗ್ರಿ ರ್‍ಯಾಂಟ್‌ಮ್ಯಾನ್ ಒಳಗಾಗಿದ್ದರು ಅನ್ನುವ ಸುದ್ದಿ ಇದೆ. ಇನ್ನೂ ಕೆಲವರ ಪ್ರಕಾರ, ಬಹು ಅಂಗಾಂಗ ವೈಫಲ್ಯದಿಂದ ಇವರು ಬಳಲುತ್ತಿದ್ದರು. ಚಿಕಿತ್ಸೆಯನ್ನ ಪಡೆಯುತ್ತಿದ್ದರು.
ಆದರೆ, ಕಳೆದೆರಡು ದಿನಗಳಿಂದ ಆ್ಯಂಗ್ರಿ ರ್‍ಯಾಂಟ್‌ಮ್ಯಾನ್, ಆರೋಗ್ಯ ಚಿಂತಾಜನಕವಾಗಿತ್ತು. ಎರಡು ದಿನಗಳ ಹಿಂದೆ ವೆಂಟಿಲೇಟರ್ ನಲ್ಲಿ ಆ್ಯಂಗ್ರಿ ರ್‍ಯಾಂಟ್‌ಮ್ಯಾನ್ ಅವರನ್ನ ಇಡಲಾಗಿದೆ ಎನ್ನುವ ಮಾತು ಕೇಳಿ ಬಂದಿತ್ತು.

ಇನ್ನೂ ಇದಕ್ಕೂ ಮುನ್ನ ಅಂದರೆ ಹನ್ನೊಂದು ದಿನಗಳ ಹಿಂದೆ, ಅಭ್ರದೀಪ್ ಸಾಹಾ ತಂದೆ ನನ್ನ ಮಗ ಇನ್ನೂ ಐಸಿಯುನಲ್ಲೇ ಇದ್ದಾನೆ, ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಹೇಳಿದ್ದರು. ಹೀಗಾಗಿ ಸಾವು-ಬದುಕಿನ ಹೋರಾಟದಲ್ಲಿ ಆ್ಯಂಗ್ರಿ ರ್‍ಯಾಂಟ್‌ಮ್ಯಾನ್ ಗೆದ್ದು ಬರುತ್ತಾರೆ ಅನ್ನುವ ವಿಶ್ವಾಸ ಇವರನ್ನ ಇಷ್ಟ ಪಡ್ತಿದ್ದ ಅನೇಕರಲ್ಲಿತ್ತು.
ಆದರೆ, ಆ ವಿಶ್ವಾಸ ಹುಸಿಯಾಗಿದೆ. ನಿನ್ನೆ ಆ್ಯಂಗ್ರಿ ರ್‍ಯಾಂಟ್‌ಮ್ಯಾನ್ ದೇಹ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ ಆ್ಯಂಗ್ರಿ ರ್‍ಯಾಂಟ್‌ಮ್ಯಾನ್ ಸಾವನ್ನಪ್ಪಿದ್ದಾರೆ ಎಂದು ಅನೇಕ ಕಡೆ ವರದಿಯಾಗಿದೆ. ಆ್ಯಂಗ್ರಿ ರ್‍ಯಾಂಟ್‌ಮ್ಯಾನ್ ಅವರ ಅಕಾಲಿಕ ನಿಧನದ ಸುದ್ದಿಯನ್ನ ಕೇಳಿ, ವಿಧಿಯ ಕ್ರೂರ ಅಟ್ಟಹಾಸಕ್ಕೆ ಸಾಮಾಜಿಕ ಜಾಲತಾಣ ಕೂಡ ದಿಗ್ಭ್ರಾಂತ ಗೊಂಡಿದೆ.
ಇನ್ನೂ ಆ್ಯಂಗ್ರಿ ರ್‍ಯಾಂಟ್‌ಮ್ಯಾನ್ ಅಂದರೆ ಅಭ್ರದೀಪ್ ಸಾಹಾ ಅವರನ್ನ ಕೇವಲ ಸಿನಿಮಾ ಪ್ರೇಮಿಗಳಷ್ಟೇ ಅಲ್ಲ, ಪುಟ್ಭಾಲ್ ಪ್ರಿಯರು ಕೂಡ ಹಿಂಬಾಲಿಸುತ್ತಿದ್ದರು. ಉತ್ತರದ ಸಾಮಾಜಿಕ ಜಾಲತಾಣದ ಬಳಕೆದಾರರಷ್ಟೇ ಅಲ್ಲ ದಕ್ಷಿಣದಲ್ಲಿಯೂ ಇವರ ನೋಡಿ ಅನೇಕರು ಮೆಚ್ಚಿಕೊಂಡಿದ್ದರು. ಅದ್ರಲ್ಲಿಯೂ ಕೆ.ಜಿ.ಎಫ್ ಚಿತ್ರದ ವಿಮರ್ಶೆಯ ನಂತರ, ಕನ್ನಡಿಗರಿಗೆ ತುಂಬಾನೇ ಹತ್ತಿರವಾಗಿದ್ದರು ಅಭ್ರದೀಪ್ ಸಾಹಾ .
ಸದ್ಯಕ್ಕೆ ಆ್ಯಂಗ್ರಿ ರ್‍ಯಾಂಟ್‌ಮ್ಯಾನ್ ನಿಧನದ ಸುದ್ದಿಯನ್ನ ಕೇಳಿ ಅನೇಕರು, ಆಘಾತಕ್ಕೊಳಗಾಗಿದ್ದಾರೆ. 4.8 ಲಕ್ಷ ಹಿಂಬಾಲಕರನ್ನ ಹೊಂದಿದ್ದ, ಇನ್ನೂ ಬಾಳಿ ಬದುಕಬೇಕಿದ್ದ ಅಭ್ರದೀಪ್ ಸಾಹಾ ಅವರ ಕುಟುಂಬಕ್ಕೆ ಈ ನಷ್ಟವನ್ನು ನಿಭಾಯಿಸುವ ಶಕ್ತಿಯನ್ನು ದೇವರು ಕೊಡಲಿ, ಅಭ್ರದೀಪ್ ಸಾಹಾ ಆತ್ಮಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನೂ ಮಾಡಿಕೊಳ್ಳುತ್ತಿದ್ದಾರೆ


Click it and Unblock the Notifications










