Don't Miss!
- Finance ಆಕ್ಸಿಸ್ ಬ್ಯಾಂಕ್ಗೆ ಭರ್ಜರಿ ಲಾಟರಿ, 7,129 ಕೋಟಿ ನಿವ್ವಳ ಲಾಭ!
- News Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
- Lifestyle ಬಾಯಿ ಚಪ್ಪರಿಸಿ ಸವಿಯುವ ನೆಲ್ಲಿಕಾಯಿ ಉಪ್ಪಿನಕಾಯಿ..!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕೆಜಿಎಫ್-2 ಟೀಸರ್ ಬೇಕು'...: ಟ್ವಿಟ್ಟರ್ನಲ್ಲಿ #WeNeedKGF2Teaser ಅಭಿಯಾನ
ಎಲ್ಲವೂ ಸರಿಯಿದ್ದಿದ್ದರೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ಇಷ್ಟೊತ್ತಿಗೆ ಚಿತ್ರಮಂದಿರಕ್ಕೆ ಬರುವ ತಯಾರಿಯಲ್ಲಿರುತ್ತಿತ್ತು. ಕೊರೊನಾ ವೈರಸ್ ಬಂದು ಎಲ್ಲವನ್ನು ಉಲ್ಟಾಪಲ್ಟ ಮಾಡಿದೆ. ಈ ನಿರಾಸೆಯ ನಡುವೆಯೂ ಚಾಪ್ಟರ್ 2 ಕುರಿತಾದ ಕುತೂಹಲ ಸ್ವಲ್ಪವೂ ಕಡಿಮೆಯಾಗಿಲ್ಲ.
ಅಂದುಕೊಂಡಿದ್ದ ದಿನಾಂಕಕ್ಕೆ ಸಿನಿಮಾ ಅಂತೂ ಬಂದಿಲ್ಲ. ಟೀಸರ್ ಅಥವಾ ಪೋಸ್ಟರ್ ಆದರೂ ಬಿಡುಗಡೆ ಮಾಡಿ ಅಂತ ಅಭಿಮಾನಿಗಳು ಬೇಡಿಕೆಯಿಡುತ್ತಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ಕೆಜಿಎಫ್ ಟೀಸರ್ ಬೇಕು ಎಂದು ಅಭಿಯಾನ ಸಹ ನಡೆಯುತ್ತಿದೆ. ಮುಂದೆ ಓದಿ...
ಅಕ್ಟೋಬರ್ 23ಕ್ಕೆ ಕೆಜಿಎಫ್ ನೋಡ್ತಿದ್ವಿ
ಎಲ್ಲವೂ ಸರಿಯಾಗಿ ಇದ್ದಿದ್ದರೆ ಅಕ್ಟೋಬರ್ 23ಕ್ಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ನೋಡುತ್ತಿದ್ವಿ ಎಂಬ ಬೇಸರವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಮೇಮ್ಸ್, ಟ್ರೋಲ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಕೆಜಿಎಫ್ ಕುರಿತು ದೊಡ್ಡ ಸಿಗ್ನಲ್ ಕೊಟ್ಟ 'ಅಧೀರ' ಸಂಜಯ್ ದತ್
#WeNeedKGF2Teaser
ದಸರಾ ಹಬ್ಬದ ಪ್ರಯುಕ್ತ ಬೇರೆ ನಟರ ಚಿತ್ರಗಳು ಪೋಸ್ಟರ್ ಬಿಡುಗಡೆ ಮಾಡುತ್ತಿದೆ. ಆದರೆ, ಯಶ್ ಅಭಿಮಾನಿಗಳಿಗಾಗಿ ಟೀಸರ್ ಆದರೂ ರಿಲೀಸ್ ಮಾಡಿ ಎಂದು ಫ್ಯಾನ್ಸ್ ಒತ್ತಾಯಿಸುತ್ತಿದ್ದಾರೆ.
ಯಾಕೋ ನೆನಪಿಸುತ್ತೀರಾ?
ಅಕ್ಟೋಬರ್ 23ಕ್ಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ರಿಲೀಸ್ ಆಗಬೇಕಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಅದು ಆಗಲ್ಲ. ಇದು ಗೊತ್ತಿದ್ದರೂ ಹಳೆ ಪೋಸ್ಟರ್ ಮತ್ತೆ ಮತ್ತೆ ವೈರಲ್ ಆಗುತ್ತಿದೆ. ಯಶ್ ಫ್ಯಾನ್ಸ್ ಹಳೇ ಪೋಸ್ಟರ್ ಇಟ್ಕೊಂಡು ಟ್ರೋಲ್ ಮಾಡ್ತಿದ್ದಾರೆ.
ಕೆಜಿಎಫ್ ನಾಯಕಿಗೆ ಹುಟ್ಟುಹಬ್ಬ ಸಂಭ್ರಮ: ಕತೆಯ ಬಗ್ಗೆ ಸುಳಿವು ಕೊಟ್ಟ ಪ್ರಶಾಂತ್ ನೀಲ್!
Recommended Video
ಚಿತ್ರೀಕರಣ ನಡೆಯುತ್ತಿದೆ.....
ಸೆಪ್ಟೆಂಬರ್ ತಿಂಗಳಿಂದ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಆರಂಭವಾಗಿದೆ. ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಸದ್ಯಕ್ಕೆ ಶೂಟಿಂಗ್ ನಡೆದಿದೆ. ನವೆಂಬರ್ನಲ್ಲಿ ಸಂಜಯ್ ದತ್ ಚಿತ್ರೀಕರಣಕ್ಕೆ ಪಾಲ್ಗೊಳ್ಳಲಿದ್ದಾರೆ. ಸಂಜಯ್ ದತ್ ಭಾಗದ ಶೂಟಿಂಗ್ ಮುಗಿದರೇ ಬಹುತೇಕ ಸಿನಿಮಾ ಮುಗಿದಂತೆ. ಹೇಗೆ ಲೆಕ್ಕಾಚಾರ ಹಾಕಿದ್ರೂ 2021ರ ಬೇಸಿಗೆಯೊಳಗೆ ಕೆಜಿಎಫ್ ಬರಬಹುದು.