twitter
    For Quick Alerts
    ALLOW NOTIFICATIONS  
    For Daily Alerts

    'ಕೆಜಿಎಫ್-2 ಟೀಸರ್ ಬೇಕು'...: ಟ್ವಿಟ್ಟರ್‌ನಲ್ಲಿ #WeNeedKGF2Teaser ಅಭಿಯಾನ

    |

    ಎಲ್ಲವೂ ಸರಿಯಿದ್ದಿದ್ದರೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ಇಷ್ಟೊತ್ತಿಗೆ ಚಿತ್ರಮಂದಿರಕ್ಕೆ ಬರುವ ತಯಾರಿಯಲ್ಲಿರುತ್ತಿತ್ತು. ಕೊರೊನಾ ವೈರಸ್ ಬಂದು ಎಲ್ಲವನ್ನು ಉಲ್ಟಾಪಲ್ಟ ಮಾಡಿದೆ. ಈ ನಿರಾಸೆಯ ನಡುವೆಯೂ ಚಾಪ್ಟರ್ 2 ಕುರಿತಾದ ಕುತೂಹಲ ಸ್ವಲ್ಪವೂ ಕಡಿಮೆಯಾಗಿಲ್ಲ.

    ಅಂದುಕೊಂಡಿದ್ದ ದಿನಾಂಕಕ್ಕೆ ಸಿನಿಮಾ ಅಂತೂ ಬಂದಿಲ್ಲ. ಟೀಸರ್ ಅಥವಾ ಪೋಸ್ಟರ್ ಆದರೂ ಬಿಡುಗಡೆ ಮಾಡಿ ಅಂತ ಅಭಿಮಾನಿಗಳು ಬೇಡಿಕೆಯಿಡುತ್ತಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ಕೆಜಿಎಫ್ ಟೀಸರ್ ಬೇಕು ಎಂದು ಅಭಿಯಾನ ಸಹ ನಡೆಯುತ್ತಿದೆ. ಮುಂದೆ ಓದಿ...

    ಅಕ್ಟೋಬರ್ 23ಕ್ಕೆ ಕೆಜಿಎಫ್ ನೋಡ್ತಿದ್ವಿ

    ಅಕ್ಟೋಬರ್ 23ಕ್ಕೆ ಕೆಜಿಎಫ್ ನೋಡ್ತಿದ್ವಿ

    ಎಲ್ಲವೂ ಸರಿಯಾಗಿ ಇದ್ದಿದ್ದರೆ ಅಕ್ಟೋಬರ್ 23ಕ್ಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ನೋಡುತ್ತಿದ್ವಿ ಎಂಬ ಬೇಸರವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಮೇಮ್ಸ್, ಟ್ರೋಲ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

    ಕೆಜಿಎಫ್ ಕುರಿತು ದೊಡ್ಡ ಸಿಗ್ನಲ್ ಕೊಟ್ಟ 'ಅಧೀರ' ಸಂಜಯ್ ದತ್ಕೆಜಿಎಫ್ ಕುರಿತು ದೊಡ್ಡ ಸಿಗ್ನಲ್ ಕೊಟ್ಟ 'ಅಧೀರ' ಸಂಜಯ್ ದತ್

    #WeNeedKGF2Teaser

    #WeNeedKGF2Teaser

    ದಸರಾ ಹಬ್ಬದ ಪ್ರಯುಕ್ತ ಬೇರೆ ನಟರ ಚಿತ್ರಗಳು ಪೋಸ್ಟರ್ ಬಿಡುಗಡೆ ಮಾಡುತ್ತಿದೆ. ಆದರೆ, ಯಶ್ ಅಭಿಮಾನಿಗಳಿಗಾಗಿ ಟೀಸರ್ ಆದರೂ ರಿಲೀಸ್ ಮಾಡಿ ಎಂದು ಫ್ಯಾನ್ಸ್ ಒತ್ತಾಯಿಸುತ್ತಿದ್ದಾರೆ.

    ಯಾಕೋ ನೆನಪಿಸುತ್ತೀರಾ?

    ಯಾಕೋ ನೆನಪಿಸುತ್ತೀರಾ?

    ಅಕ್ಟೋಬರ್ 23ಕ್ಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ರಿಲೀಸ್ ಆಗಬೇಕಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಅದು ಆಗಲ್ಲ. ಇದು ಗೊತ್ತಿದ್ದರೂ ಹಳೆ ಪೋಸ್ಟರ್ ಮತ್ತೆ ಮತ್ತೆ ವೈರಲ್ ಆಗುತ್ತಿದೆ. ಯಶ್ ಫ್ಯಾನ್ಸ್ ಹಳೇ ಪೋಸ್ಟರ್ ಇಟ್ಕೊಂಡು ಟ್ರೋಲ್ ಮಾಡ್ತಿದ್ದಾರೆ.

    ಕೆಜಿಎಫ್ ನಾಯಕಿಗೆ ಹುಟ್ಟುಹಬ್ಬ ಸಂಭ್ರಮ: ಕತೆಯ ಬಗ್ಗೆ ಸುಳಿವು ಕೊಟ್ಟ ಪ್ರಶಾಂತ್ ನೀಲ್!ಕೆಜಿಎಫ್ ನಾಯಕಿಗೆ ಹುಟ್ಟುಹಬ್ಬ ಸಂಭ್ರಮ: ಕತೆಯ ಬಗ್ಗೆ ಸುಳಿವು ಕೊಟ್ಟ ಪ್ರಶಾಂತ್ ನೀಲ್!

    Recommended Video

    ಅನಿರುದ್ ವಿರುದ್ಧ ತಿರುಗಿಬಿದ್ದ ನೆಟ್ಟಿಗರು | Oneindia Kannada
    ಚಿತ್ರೀಕರಣ ನಡೆಯುತ್ತಿದೆ.....

    ಚಿತ್ರೀಕರಣ ನಡೆಯುತ್ತಿದೆ.....

    ಸೆಪ್ಟೆಂಬರ್ ತಿಂಗಳಿಂದ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಆರಂಭವಾಗಿದೆ. ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಸದ್ಯಕ್ಕೆ ಶೂಟಿಂಗ್ ನಡೆದಿದೆ. ನವೆಂಬರ್‌ನಲ್ಲಿ ಸಂಜಯ್ ದತ್ ಚಿತ್ರೀಕರಣಕ್ಕೆ ಪಾಲ್ಗೊಳ್ಳಲಿದ್ದಾರೆ. ಸಂಜಯ್ ದತ್ ಭಾಗದ ಶೂಟಿಂಗ್ ಮುಗಿದರೇ ಬಹುತೇಕ ಸಿನಿಮಾ ಮುಗಿದಂತೆ. ಹೇಗೆ ಲೆಕ್ಕಾಚಾರ ಹಾಕಿದ್ರೂ 2021ರ ಬೇಸಿಗೆಯೊಳಗೆ ಕೆಜಿಎಫ್ ಬರಬಹುದು.

    English summary
    WeNeedKGF2Teaser Trends on twitter after fans request movie makers to release kgf chapter 2 teaser.
    Friday, October 23, 2020, 14:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X