ಇಷ್ಟಕ್ಕೂ ನಟ ಅಂಬರೀಶ್ ಅವರಿಗೆ ಏನಾಗಿತ್ತು?
ಅಂಬರೀಶ್ ಆರೋಗ್ಯದ ಬಗ್ಗೆ ಕಾಳಜಿ ಇದ್ದರೂ ಕೂಡ ಅತಿಯಾದ ಸಿಗರೇಟ್ ಸೇವನೆ ಶ್ವಾಸಕೋಶದ ಸ್ಥಿತಿ ತೀರಾ ಹದಗೆಟ್ಟು ಉಸಿರಾಟದ ತೊಂದರೆಗೆ ಕಾರಣವಾಯ್ತು. ಅಂಬಿ ಮದ್ಯಸೇವನೆ ಹೆಚ್ಚಾಗಿ ಮಾಡ್ತಿದ್ದರಿಂದ ಅದು ಕಿಡ್ನಿಯ ಆರೋಗ್ಯ ಕೆಡೋಕೆ ಮುಖ್ಯಕಾರಣ. ಇವರೆಡನ್ನೂ ರಜನಿಕಾಂತ್ ಕೂಡ ಅದೆಷ್ಟೋ ಬಾರಿ ಬಿಡುವಂತೆ ಮನವಿ ಮಾಡಿದ್ರೂ ಅಂಬಿ ಬಿಟ್ಟಿರಲಿಲ್ಲ.
ವಿಕ್ರಮ್ ಆಸ್ಪತ್ರೆಯಲ್ಲಿ ವೈದ್ಯರು ನೀಡಿದ ಚಿಕಿತ್ಸೆಯಿಂದ ಅಂಬಿಯ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗಿನ ಚೇತರಿಕೆ ಕಂಡು ಬಂತೇ ಹೊರತು ವೈದ್ಯರು ಹೇಳಿದ ಹಾಗೆ ಅಂಬಿಯ ದೇಹಸ್ಥಿತಿ ವೈದ್ಯರ ಚಿಕಿತ್ಸೆಗೆ ನೂರಕ್ಕೆ ನೂರು ಪರ್ಸೆಂಟ್ ಸ್ಪಂದಿಸಿರಲಿಲ್ಲ.

ವಿಕ್ರಮ್ ಆಸ್ಪತ್ರೆ ವೈದ್ಯರಾದ ಡಾ.ರವೀಶ್ ಮತ್ತು ಶ್ವಾಸಕೋಶ ತಜ್ಙ ಡಾ. ಸತೀಶ್ ಕೊಡ್ತಿದ್ದ ಹೆಲ್ತ್ ರಿಪೋರ್ಟ್ನಲ್ಲಿ ಅಂಬಿ ಆರೋಗ್ಯದಲ್ಲಿ ಚೇತರಿಕೆ ಇದೆ. ಇನ್ನೆರೆಡು ದಿನದಲ್ಲಿ ಕೃತಕ ಉಸಿರಾಟದಿಂದ ತೆಗೀತೀವಿ ಅನ್ನೋ ಮಾಹಿತಿ ಇತ್ತು. ಆದ್ರೆ ಅದನ್ನ ಮುಂದೂಡ್ತಾನೇ ಬಂದ್ರು ವೈದ್ಯರು. ವೈದ್ಯರು ಎಷ್ಟೇ ಪ್ರಯತ್ನ ಮಾಡಿದ್ರೂ ಅಂಬಿ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ ಅನ್ನೋದು ಇಲ್ಲಿ ಸ್ಪಷ್ಟ. ಮುಂದೆ ಓದಿ ಅಂಬಿ ಅಣ್ಣನ ಮಗ ಮದನ್ ಹೇಳಿದ್ದರಲ್ಲಿ ಸತ್ಯವಿತ್ತಾ?


Click it and Unblock the Notifications











