ಅಂಬಿ ಪಕ್ಕದಲ್ಲಿದ್ದ ರೋಗಿ ಕಡೆಯವರು ಬಿಚ್ಚಿಟ್ಟ ಸತ್ಯ
ಇದೆಲ್ಲದ್ರ ನಡುವೆ ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್ ರನ್ನ ಅಂಬಿ ಗುರುತಿಸಿ ಕಣ್ಸನ್ನೆಯಲ್ಲಿ ಮಾತ್ನಾಡಿದ್ರು. ಮಗನನ್ನ ಅಪ್ಪಿಕೊಂಡ್ರು. ಅನ್ನೋ ಮಾಹಿತಿಯನ್ನ ಆಸ್ಪತ್ರೆ 5ನೇ ದಿನ ಕೊಡ್ತು. ಆದರೆ ಅಂಬಿ ನಿಜಕ್ಕೂ ಅಷ್ಟು ಗುಣಮುಖರಾಗಿದ್ರಾ ಹಾಗಿದ್ರೆ ದೆಹಲಿಯಿಂದ ವೈದ್ಯರನ್ನ ಕರೆಸುವ ಅವಶ್ಯಕತೆ ಏನಿತ್ತು. ಕೃತಕ ಉಸಿರಾಟವನ್ನ ಹಂತಹಂತವಾಗಿ ಕಡಿಮೆಗೊಳಿಸ್ತಿದ್ದೀವಿ 12 ಗಂಟೆಗಳಲ್ಲಿ ತೆಗೀತೀವಿ. 24 ಗಂಟೆಗಳಲ್ಲಿ ತೆಗೀತೀವಿ ಅನ್ನೋ ವೈದ್ಯರ ಮಾಹಿತಿ ಕೂಡ ಸತ್ಯ ಅನ್ನಿಸಲಿಲ್ಲ.
ದೆಹಲಿಯ ಏಮ್ಸ್ ನಿಂದ ಬಂದಿದ್ದ ಶ್ವಾಸಕೋಶ ತಜ್ಞ ರಣದೀಪ್ ಗುಲೇರಿಯಾ ಏಳನೇ ದಿನ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆತ್ಮ ವಿಶ್ವಾಸದಿಂದ ಮಾತನಾಡಲೇ ಇಲ್ಲ. ವಿಕ್ರಮ್ ಆಸ್ಪತ್ರೆಯ ವೈದ್ಯರು ಪ್ರತಿನಿತ್ಯ ಕೊಡ್ತಿದ್ದ ರಿಪೋರ್ಟ್ಗೆ ತದ್ವಿರುದ್ಧವಾಗಿತ್ತು ಗುಲೇರಿಯಾ ಕೊಟ್ಟ ಮಾಹಿತಿ.

ಅಂಬರೀಶ್ ಶ್ವಾಸಕೋಶ ವೀಕ್ ಆಗಿದೆ ಅನ್ನೋ ಮಾಹಿತಿಯನ್ನ ತಜ್ಞ ವೈಧ್ಯರು ಕೊಟ್ರು. ತೀರಾ ವೀಕ್ ಆಗಿದೆ ಅನ್ನೋದನ್ನ ಒತ್ತಿ ಒತ್ತಿ ಹೇಳಿದ್ರು. ಆದ್ರೆ ವಿಕ್ರಮ್ ಆಸ್ಪತ್ರೆ ವೈದ್ಯರು ಶ್ವಾಸಕೋಶ ಸುಸ್ಥಿತಿಗೆ ಬರ್ತಿದೆ ಅನ್ನೋ ವಿಷಯವನ್ನ ಹೇಳಿ ಮಾಧ್ಯಮದವ್ರ ಕಿವಿಗೇ ಹೂವಿಟ್ಟಿದ್ರು.
ಅಂಬರೀಶ್ ಪಕ್ಕದಲ್ಲೇ ಇರುವ ರೋಗಿಯ ಕಡೆಯವರು ಹೇಳೋ ಪ್ರಕಾರ, ಬಂದ ಒಂದು ವಾರದಲ್ಲಿ ಅಂಬಿ ಆಕಾಶದ ಕಡೆ ಮುಖ ಮಾಡಿ ಮಲಗಿರೋದು ಬಿಟ್ರೆ ಒಂದು ಸಣ್ಣ ಪ್ರತಿಕ್ರಿಯೇಯೂ ಇಲ್ಲ. ತಲೆ ಕೂಡ ಅಲುಗಾಡ್ತಾ ಇಲ್ಲ. ಇಷ್ಟೆಲ್ಲದ್ರ ನಡುವೆ ಅಂಬಿ ಹೇಗೆ ಪ್ರತಿಕ್ರಿಯೆ ನೀಡೋಕೆ ಸಾಧ್ಯ?
ಇಷ್ಟೆಲ್ಲ ಸತ್ಯ ಸಂಗತಿಗಳ ನಡುವೆ ಕೂಡ ಕೋಟಿ ಹೃದಯಗಳ ಪ್ರಾರ್ಥನೆ ಒಂದೇ ಅಂಬಿ ಗುಣಮುಖರಾಗಲಿ. ಸಿಂಗಪುರದಲ್ಲಿ ಅಂಬಿ ಆರೋಗ್ಯ ಚೇತರಿಕೆಯಾಗಲಿ ಎಂಬುದು. ಅವರು ಆದಷ್ಟು ಬೇಗ ಗುಣಮುಖರಾಗಿ ಹಿಂತಿರುಗಲಿ ಎಂಬುದೂ ನಮ್ಮ ಆಶಯ ಕೂಡ.


Click it and Unblock the Notifications











