ಪತ್ನಿಯಿಂದ ವಿಚ್ಛೇದನ ಕೇಳಿ ಅರ್ಜಿ ಸಲ್ಲಿಸಿರುವ ನಟ ಯುವ ರಾಜ್‌ಕುಮಾರ್ ಆರೋಪಗಳು ಏನು?

ಡಿವೋರ್ಸ್ ಎನ್ನುವುದು ಇತ್ತೀಚೆಗೆ ತೀರಾ ಸಾಮಾನ್ಯ ಎನ್ನುವಂತಾಗಿಬಿಟ್ಟಿದೆ. ಪತಿ, ಪತ್ನಿ ದೂರಾಗಲು ಬಹಳ ಗಂಭೀರ ಕಾರಣಗಳೇನು ಬೇಕಿಲ್ಲ, ಸಣ್ಣ ಪುಟ್ಟ ಮನಸ್ತಾಪಗಳು ಕಠಿಣ ನಿರ್ಧಾರಕ್ಕೆ ದಾರಿ ಮಾಡಿ ಕೊಟ್ಟುಬಿಡುತ್ತದೆ. ತಾರೆಯರ ಡಿವೋರ್ಸ್ ವಿಚಾರವಂತೂ ಪದೇ ಪದೆ ಸದ್ದು ಮಾಡುತ್ತಿದೆ.

ಚಂದನ್-ನಿವೇದಿತಾ ಡಿವೋರ್ಸ್ ಸುದ್ದಿ ಬೆನ್ನಲ್ಲೇ ನಟ ಯುವ ರಾಜ್‌ಕುಮಾರ್ ತಮ್ಮ ಪತ್ನಿಯಿಂದ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿರುವ ವಿಚಾರ ತಿಳಿದುಬಂದಿದೆ. ಸದ್ಯ ಯುವ ಕೇಸ್ ಕೈಗೆತ್ತಿಕೊಂಡ ಕೋರ್ಟ್ ಶ್ರೀದೇವಿಗೆ ನೊಟೀಸ್ ಜಾರಿ ಮಾಡಿದೆ. ಜುಲೈ 4 ಕ್ಕೆ ಅರ್ಜಿಯ ವಿಚಾರಣೆಯನ್ನು ಕೋರ್ಟ್ ನಿಗದಿ ಮಾಡಿದೆ. ದೊಡ್ಮನೆ ಅಭಿಮಾನಿಗಳಿಗಂತೂ ಈ ವಿಚಾರ ಭಾರೀ ಆಘಾತ ತಂದಿದೆ.

What are the allegations of actor Yuva Rajkumar who has filed for divorce from his wife sridevi

ಬಹಳ ಹಿಂದೆಯೇ ಯುವ ಹಾಗೂ ಶ್ರೀದೇವಿ ದೂರಾಗಲು ನಿರ್ಧರಿಸಿದ್ದರು ಎನ್ನುವುದು ಗೊತ್ತಾಗುತ್ತಿದೆ. ಯಾಕಂದರೆ ಇಬ್ಬರು ಹೆಚ್ಚು ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. 'ಯುವ' ಸಿನಿಮಾ ಪ್ರಚಾರದ ವೇಳೆಯೂ ಶ್ರೀದೇವಿ ಹಾಜರಿರಲಿಲ್ಲ. ಸದ್ಯಕ್ಕೆ ಆಕೆ ಅಮೇರಿಕಾದಲ್ಲಿದ್ದು ಡಿವೋರ್ಸ್ ನೋಟಿಸ್‌ಗೆ ಇನ್ನು ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಯಾಗಿದೆ.

ಎಂಸಿ ಆ್ಯಕ್ಟ್ ಸೆ. 13(1)(ia) ಅಡಿಯಲ್ಲಿ ಅರ್ಜಿ ಯುವ ರಾಜ್‌ಕುಮಾರ್‌ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು ವಿಚ್ಛೇದನ ಕೋರಲು ಕಾರಣ ಏನು? ಎನ್ನುವುದನ್ನು ಕೂಡ ಯುವ ರಾಜ್‌ಕುಮಾರ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ತಮ್ಮ ಪತ್ನಿಯ ವಿರುದ್ದ ಕ್ರೌರ್ಯದ ಆರೋಪ ಮಾಡಿದ್ದಾರೆ. ಆಕೆ ಅಗೌರವದಿಂದ ನಡೆದುಕೊಳ್ಳುತ್ತಿದ್ದಾರೆ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ, ಆಕೆಯೊಂದಿಗೆ ಬದುಕಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ಯುವ- ಶ್ರೀದೇವಿ ದಾಂಪತ್ಯದಲ್ಲಿ ಕಲಹದ ಭಿನ್ನಾಭಿಪ್ರಾಯ ಬಗೆಹರಿಸಲು ಎರಡೂ ಕುಟುಂಬಗಳು ಪ್ರಯತ್ನಿಸಿವೆ. ಆದರೆ ಬಗೆಹರಿಯದಿದ್ದಾಗ ಯುವ ಈ ನಿರ್ಧಾರಕ್ಕೆ ಬಂದಿದ್ದಾರೆ. ಅಂದಹಾಗೆ ಇವರಿಬ್ಬರು ಮದುವೆ ಖುದ್ದು ರಾಘಣ್ಣ ವಿರೋಧ ವ್ಯಕ್ತಪಡಿಸಿದ್ದರು, ಆದರೆ ಪುನೀತ್ ರಾಜ್‌ಕುಮಾರ್ ಮುಂದೆ ನಿಂತು ಮದುವೆ ಮಾಡಿಸಿದ್ದರು ಎನ್ನುವ ಮಾತುಗಳು ಆಗ ಕೇಳಿಬಂದಿತ್ತು. 'ಯುವ' ಚಿತ್ರದ ಮುಹೂರ್ತ ಸಮಾರಂಭದಲ್ಲಿ ಪತ್ನಿ ಶ್ರೀದೇವಿ ಭಾಗಿ ಆಗಿದ್ದರು. ಬಳಿಕ ಸಿನಿಮಾ ಪ್ರಚಾರದ ವೇಳೆ ಕಾಣಿಸಿಕೊಂಡಿರಲಿಲ್ಲ.

What are the allegations of actor Yuva Rajkumar who has filed for divorce from his wife sridevi

ಉನ್ನತ ವ್ಯಾಸಂಗಕ್ಕಾಗಿ ಶ್ರೀದೇವಿ ಭೈರಪ್ಪ ಸದ್ಯ ಅಮೇರಿಕಾದಲ್ಲಿದ್ದಾರೆ ಎನ್ನಲಾಗ್ತಿದೆ. ಕಳೆದ 6 ತಿಂಗಳಿಂದ ದಂಪತಿ ದೂರಾಗಿ ಜೀವನ ಸಾಗಿಸುತ್ತಿದ್ದಾರೆ. ಜೂನ್ 6ಕ್ಕೆ ಯುವ ರಾಜ್‌ಕುಮಾರ್ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನಷ್ಟೇ ಈ ಬಗ್ಗೆ ಶ್ರೀದೇವಿ ಪ್ರತಿಕ್ರಿಯೆ ನೀಡಬೇಕಿದೆ. ಡಿವೋರ್ಸ್ ಎನ್ನುವುದು ಇತ್ತೀಚೆಗೆ ತೀರಾ ಸಾಮಾನ್ಯ ಎನ್ನುವಂತಾಗಿಬಿಟ್ಟಿದೆ. ಪತಿ, ಪತ್ನಿ ದೂರಾಗಲು ಬಹಳ ಗಂಭೀರ ಕಾರಣಗಳೇನು ಬೇಕಿಲ್ಲ, ಸಣ್ಣ ಪುಟ್ಟ ಮನಸ್ತಾಪಗಳು ಕಠಿಣ ನಿರ್ಧಾರಕ್ಕೆ ದಾರಿ ಮಾಡಿ ಕೊಟ್ಟುಬಿಡುತ್ತದೆ. ತಾರೆಯರ ಡಿವೋರ್ಸ್ ವಿಚಾರವಂತೂ ಪದೇ ಪದೆ ಸದ್ದು ಮಾಡುತ್ತಿದೆ.

ವಿನಯ್ ರಾಜ್‌ಕುಮಾರ್ ನಟನೆಯ 'ರನ್ ಆಂಟೊನಿ' ಸಿನಿಮಾ ಪ್ರಚಾರದಲ್ಲಿ ಶ್ರೀದೇವಿ ಭಾಗಿ ಆಗಿದ್ದರು. 'ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ' ನೋಡಿಕೊಳ್ಳುತ್ತಿದ್ದರು. 7 ವರ್ಷ ಪ್ರೀತಿಸಿ ಬಳಿಕ ಮದುವೆಗೆ ಮನಸ್ಸು ಮಾಡಿದ್ದರು. ಬಹಳ ಅದ್ಧೂರಿಯಾಗಿಯೇ ಮದುವೆ ನಡೆದಿತ್ತು. ಸದ್ಯ ಯುವ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದು ಶ್ರೀದೇವಿ ಭೈರಪ್ಪ ಅವರ ನಡೆ ಏನು ? ಎನ್ನುವ ಅನುಮಾನ ಮೂಡಿದೆ.

ಈಗಾಗಲೇ ಯುವ ರಾಜ್‌ಕುಮಾರ್ ಹೀರೊ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಯುವ' ಚಿತ್ರ ಹಿಟ್ ಆಗಿದೆ. ಸದ್ಯ 2ನೇ ಸಿನಿಮಾ ಮಾತುಕತೆ ನಡೆಯುತ್ತಿದೆ.

More from Filmibeat

English summary
Yuvarajkumar Accuses Wife sridevi of mental harassment, Files Divorce;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X