ವಿಜಯಲಕ್ಷ್ಮಿ ವಿರುದ್ಧ ಕಾನೂನು ಹೋರಾಟ ಮಾಡಬಹುದೇ ಪವಿತ್ರಾ ಗೌಡ? ನಟಿ ಮುಂದಿರುವ ಆಯ್ಕೆ ಏನು?

By ಫಿಲ್ಮಿಬೀಟ್ ಡೆಸ್ಕ್

ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟಿ ಪವಿತ್ರಾ ಗೌಡ ನಡುವೆ ಸೋಶಿಯಲ್ ಮೀಡಿಯಾದ ಪೋಸ್ಟ್‌ ವಾರ್ ನಡೆಯುತ್ತಿದೆ. ಎರಡು ದಿನಗಳ ಹಿಂದೆ ದರ್ಶನ್ ಜೊತೆಗಿನ ಫೋಟೊಗಳನ್ನು ನಟಿ ಪವಿತ್ರ ಗೌಡ ಹಂಚಿಕೊಳ್ಳುತ್ತಿದ್ದಂತೆ ವಿಜಯಲಕ್ಷ್ಮಿ ತಿರುಗಿಬಿದಿದ್ದರು. ತನ್ನ ಪತಿ ಜೊತೆಗಿರುವ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಕ್ಕೆ ಕಿಡಿಕಾರಿದ್ದರು.

ಇದರೊಂದಿಗೆ ಪವಿತ್ರಾ ಗೌಡ ತನ್ನ ಮೊದಲ ಪತಿಯ ಜೊತೆಗಿರುವ ಫೋಟೊಗಳನ್ನು ವಿಜಯಲಕ್ಷ್ಮಿ ಶೇರ್ ಮಾಡಿದ್ದರು. ಅಷ್ಟೇ ಅಲ್ಲದೆ ಕಾನೂನು ಸಮರ ಸಾರುವುದಾಗಿ ಹೇಳಿದ್ದರು. ಈ ಪೋಸ್ಟ್‌ಗೆ ನಟಿ ಪವಿತ್ರಾ ಗೌಡ ಇಂದು (ಜನವರಿ 26) ತಿರುಗೇಟು ಕೊಟ್ಟಿದ್ದಾರೆ. ಅವರ ವೈಯಕ್ತಿಕ ಫೋಟೊಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಕ್ಕೆ ಎಚ್ಚರಿಕೆಯ ಸಂದೇಶವನ್ನು ಕೊಟ್ಟಿದ್ದಾರೆ.

What are the legal options available before Pavitra Gowda to fight against Darshan’s wife?

ಹಾಗಿದ್ದರೆ, ನಟಿ ಪವಿತ್ರಾ ಗೌಡ ಅವರ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ರಾ ವಿಜಯಲಕ್ಷ್ಮಿ? ಪವಿತ್ರಾ ಗೌಡ ಇದೇ ವಿಷಯವನ್ನು ಒಟ್ಟುಕೊಂಡು ಕಾನೂನು ಸಮರ ಸಾರಬಹುದೇ? ಪವಿತ್ರಾ ಗೌಡ ಮುಂದಿರುವ ಆಯ್ಕೆಗಳು ಏನು? ಕಾನೂನು ತಜ್ಞರ ಹೇಳುವುದೇನು? ತಿಳಿಯಲು ಮುಂದೆ ಓದಿ...

ಗೌಪ್ಯತೆಯ ಉಲ್ಲಂಘನೆ

ವೈಯಕ್ತಿಕ ಬದುಕಿನ ಬದುಕನ್ನು ಕಾಪಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಯಾವುದೇ ವ್ಯಕ್ತಿಯ ವೈಯಕ್ತಿಕ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅವರ ಅನುಮತಿ ಇಲ್ಲದೆಯೇ ಪ್ರಕಟಿಸುವಂತೆ ಇಲ್ಲ. ಇದರಿಂದ ಗೌಪ್ಯತೆಯ ಉಲ್ಲಂಘನೆ ಮಾಡಿದಂತೆ ಆಗುತ್ತೆ. ಇದಕ್ಕೆ ಕಾನೂನು ದೊಡ್ಡ ಮೊತ್ತದ ದಂಡ ವಿಧಿಸಬಹುದು. ಇಲ್ಲವೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬಹುದು. ಅದು ದೂರಿನ ಮೇಲೆ ನಿರ್ಧರಿಸಿದೆ ಎನ್ನುತ್ತಾರೆ ಕಾನೂನು ತಜ್ಞರು.

ಮಾನನಷ್ಟ ಮೊಕದ್ದಮೆ ಹೂಡಬಹುದು

ಪವಿತ್ರಾ ಗೌಡ ಈ ಮೊದಲು ಸಂಜಯ್ ಸಿಂಗ್ ಎಂಬುವವರನ್ನು ಮದುವೆ ಆಗಿದ್ದರು. ಇವರಿಗೆ ಖುಷಿ ಗೌಡ ಎಂಬ ಮಗಳು ಇದ್ದಾರೆ. ಈಗ ವಿಚ್ಚೇದನ ಪಡೆದು ಹೊರಬಂದಿದ್ದಾಗಿ ಪವಿತ್ರಾ ಗೌಡ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ಈಗ ಫೋಟೊಗಳನ್ನು ಹಂಚಿಕೊಂಡಿದ್ದರಿಂದ ತಮ್ಮ ಮಾನನಷ್ಟ ಆಗಿದೆ ಎಂದು ನ್ಯಾಯಾಲಯದ ಮೆಟ್ಟಿಲು ಏರಬಹುದು. ಇದಕ್ಕೂ ಕಾನೂನಿನಲ್ಲಿ ಅವಕಾಶವಿದೆ. ಇಂತಹ ಸಾಕಷ್ಟು ಪ್ರಕರಣಗಳು ನ್ಯಾಯಾಲಯದಲ್ಲಿದೆ.

ಬೇರೆ ಸೆಕ್ಷನ್ ಅಡಿ ಕೇಸ್

ಪವಿತ್ರಾ ಗೌಡ ಮಗಳ ಹೆಸರನ್ನು ತಮ್ಮ ಪೋಸ್ಟ್‌ನಲ್ಲಿ ಸೇರಿಸಿದ್ದರಿಂದ ವಿಜಯಲಕ್ಷ್ಮಿಯವರಿಗೆ ಅದೂ ಕಂಟಕ ಆಗಬಹುದು. ಒಂದು ವೇಳೆ ಖುಷಿ ಗೌಡ ಮೈನರ್ ಆಗಿದ್ದರೆ, ಸಮಸ್ಯೆ ಆಗುವ ಸಾಧ್ಯತೆಯಿದೆ. ಪವಿತ್ರಾ ಗೌಡ ಮಗಳ ಹೆಸರನ್ನೇ ಮುಂದಿಟ್ಟುಕೊಂಡು ಕೋರ್ಟ್ ಮೆಟ್ಟಿಲೇರಿದರೆ, ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬಹುದು. ಅದೂ ಪರಿಸ್ಥಿತಿಗೆ ಅನುಗುಣವಾಗಿರುತ್ತೆ.

ವಿಜಯಲಕ್ಷ್ಮಿ Vs ಪವಿತ್ರಾ ಗೌಡ

ನಟಿ ಪವಿತ್ರಾ ಗೌಡ ವೈಯಕ್ತಿಕ ಫೋಟೊಗಳನ್ನು ಶೇರ್ ಮಾಡಿದ್ದಕ್ಕೆ ಕಿಡಿಕಾರಿದ್ದಾರೆ. ಅಲ್ಲದೆ ಕಾನೂನು ಸಮರದ ಬಗ್ಗೆ ಸುಳಿವನ್ನು ನೀಡಿದ್ದಾರೆ. "ನನ್ನ ಜೀವನದ ಹಳೆಯ ವಿಚಾರಗಳನ್ನು ಹಾಗೂ ನನ್ನ ವೈಯಕ್ತಿಕ ಪೋಟೊಗಳನ್ನು ಪೋಸ್ಟ್ ಮಾಡುವ ಹಕ್ಕು ಯಾರಿಗೂ ಇರುವುದಿಲ್ಲ. ಈ ಮೂಲಕ ನಾನು ಹೇಳುವುದೇನೆಂದರೆ, ನನಗೂ ಕಾನೂನು ಕ್ರಮ ತೆಗೆದುಕೊಳ್ಳುವ ಹಕ್ಕು ಇದೆ." ಎಂದು ಪವಿತ್ರಾ ಗೌಡ ಹೇಳಿದ್ದಾರೆ. ಇತ್ತ ವಿಜಯಲಕ್ಷ್ಮಿ ಕೂಡ ಕಾನೂನು ಹೋರಾಟ ಮಾಡುತ್ತೇನೆ ಎಂದಿದ್ದಾರೆ. ಹೀಗಾಗಿ ಇದು ಇನ್ಯಾವ ಮಟ್ಟಕ್ಕೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ.

More from Filmibeat

English summary
Privacy breach or character assassination or deformation what will be the action?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X