twitter
    For Quick Alerts
    ALLOW NOTIFICATIONS  
    For Daily Alerts

    'ಕೆಜಿಎಫ್' ರಿಲೀಸ್ ಮಾಡಲು ನಿರ್ಮಾಪಕರ ಮುಂದಿರುವ ಆಯ್ಕೆಗಳೇನು?

    |

    ಯಶ್ ಕೆಜಿಎಫ್ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ವೆಂಕಟೇಶ್ ಎಂಬ ನಿರ್ಮಾಪಕರು ಚಿತ್ರವನ್ನ ಬಿಡುಗಡೆ ಮಾಡದಂತೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ.

    ಕೋರ್ಟ್ ಆದೇಶದ ಪ್ರಕಾರ, ಕೆಜಿಎಫ್ ಸಿನಿಮಾ ನಾಳೆ ರಿಲೀಸ್ ಆಗುವಂತಿಲ್ಲ. ಆದ್ರೆ, ಕೋರ್ಟ್ ಆದೇಶ ನಮ್ಮ ಕೈಗೆ ಸಿಕ್ಕಿಲ್ಲ, ನಮಗೆ ಆತಂಕವಿಲ್ಲ, ನಿಗದಿಯಾಗಿರುವಂತೆ ಕೆಜಿಎಫ್ ತೆರೆಕಾಣಲಿದೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರ್ ಸ್ಪಷ್ಟಪಡಿಸಿದ್ದಾರೆ.

    ಅತ್ತ ತಡೆಯಾಜ್ಞೆ ಕೊಟ್ಟಿದ್ದರೆ, ಇತ್ತ ಚಿತ್ರ ನೋಡಿ ಎಂದು ಟ್ವೀಟ್ ಮಾಡಿದ ಯಶ್.!ಅತ್ತ ತಡೆಯಾಜ್ಞೆ ಕೊಟ್ಟಿದ್ದರೆ, ಇತ್ತ ಚಿತ್ರ ನೋಡಿ ಎಂದು ಟ್ವೀಟ್ ಮಾಡಿದ ಯಶ್.!

    ಆದ್ರೆ, ಕೋರ್ಟ್ ತಡೆಯಾಜ್ಞೆ ನೀಡಿರುವುದನ್ನ ಮರೆಯುವಂತಿಲ್ಲ. ಹಾಗಿದ್ರೆ, ಕೆಜಿಎಫ್ ಚಿತ್ರತಂಡದ ಮುಂದಿನ ಆಯ್ಕೆಗಳೇನು? ಅವರು ಏನು ಮಾಡಬಹುದು. ನಾಳೆ ರಿಲೀಸ್ ಮಾಡಲು ಯಾವ ಪ್ಲಾನ್ ಮಾಡಬಹುದು ಎಂದು ನೋಡುವುದಾದರೇ.! ಮುಂದೆ ಓದಿ....

    ಆದೇಶದ ಪ್ರತಿ ಕೈಗೆ ಸಿಗುವವರೆಗೂ ಸಮಯ

    ಆದೇಶದ ಪ್ರತಿ ಕೈಗೆ ಸಿಗುವವರೆಗೂ ಸಮಯ

    10ನೇ ಸಿಟಿ ಸಿವಿಎಲ್ ಕೋರ್ಟ್ ಆದೇಶದ ಪ್ರತಿ ಇನ್ನು ನಿರ್ಮಾಪಕ ಹಾಗೂ ನಿರ್ದೇಶಕರ ಕೈಗೆ ಸಿಕ್ಕಿಲ್ಲ. ಅಲ್ಲುಯವರೆಗೂ ಚಿತ್ರತಂಡಕ್ಕೆ ಸಮಯವಕಾಶವಿದೆ. ಈ ಗ್ಯಾಪ್ ನಲ್ಲಿ ಏನು ಮಾಡಬಹುದು ಎಂದು ನೋಡುವುದಾರೇ ಗುರುವಾರ ರಾತ್ರಿ ವೇಳೆಗೆ ಆದೇಶವನ್ನು ಪ್ರಶ್ನಿಸಿ ರಿಜಿಸ್ಟ್ರಾರ್ ಗೆ ಪ್ರತಿ ಅರ್ಜಿ ಸಲ್ಲಿಸಬಹುದು.

    ನಾಳೆ ಕೆಜಿಎಫ್ ರಿಲೀಸ್ ಆಗೇ ಆಗುತ್ತೆ: ನಿರ್ಮಾಪಕ ವಿಜಯ್ ನಾಳೆ ಕೆಜಿಎಫ್ ರಿಲೀಸ್ ಆಗೇ ಆಗುತ್ತೆ: ನಿರ್ಮಾಪಕ ವಿಜಯ್

    ರಿಜಿಸ್ಟ್ರಾರ್ ಗೆ ಮನವಿ ಮಾಡಬೇಕು

    ರಿಜಿಸ್ಟ್ರಾರ್ ಗೆ ಮನವಿ ಮಾಡಬೇಕು

    ರಿಜಿಸ್ಟ್ರಾರ್ ಏನಾದರೂ ಮನಸ್ಸು ಮಾಡಿ, ಇದು ತುರ್ತು ಪ್ರಕರಣ ಎಂದು ನಿರ್ಧರಿಸಿ, ಇಂದು ರಾತ್ರಿಯೇ ನ್ಯಾಯಾಧೀಶರಿಗೆ ವಿಷಯ ಮುಟ್ಟಿಸಿ, ತ್ವರಿತವಾಗಿ ಅರ್ಜಿ ವಿಚಾರಣೆಗೆ ಕೋರಬಹುದು. ಅಲ್ಲಿ ಕೆಜಿಎಫ್ ತಂಡದ ವಕೀಲರು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಟ್ಟು, ಪ್ರಸ್ತುತ ಸ್ಥಿತಿಗತಿಯನ್ನ ತಿಳಿಸಬಹುದು. ಆಗ ನ್ಯಾಯಾಧೀಶರು ಸರಿ ತಡೆ ಹಿಂಪಡೆಯಬಹುದು.

    'ಕೆಜಿಎಫ್' ಬಿಡುಗಡೆಗೆ ಬ್ರೇಕ್ ಹಾಕಿದ ವೆಂಕಟೇಶ್ ಯಾರು? ಬೇಡಿಕೆ ಏನು? 'ಕೆಜಿಎಫ್' ಬಿಡುಗಡೆಗೆ ಬ್ರೇಕ್ ಹಾಕಿದ ವೆಂಕಟೇಶ್ ಯಾರು? ಬೇಡಿಕೆ ಏನು?

    ಹೈಕೋರ್ಟ್ ಮೊರೆ ಹೋಗಬಹುದು

    ಹೈಕೋರ್ಟ್ ಮೊರೆ ಹೋಗಬಹುದು

    ಸಿಟಿ ಸಿವಿಎಲ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ, ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಬಹುದು. ಆಗೆ ಮಾಡಬೇಕಾದರೂ, ರಿಜಿಸ್ಟ್ರಾರ್ ಮೂಲಕವೇ ಹೋಗಬೇಕು. ನಂತರ ಕೋರ್ಟ್ ನಲ್ಲಿಯೇ ವಿಚಾರಣೆ ಆಗುವುದು. ಇತಿಹಾಸ ನೋಡಿದ್ರೆ, ಇದು ತುರ್ತು ಪ್ರಕರಣ ಎಂದು ಪರಿಗಣಿಸಲು ಸಾಧ್ಯವಿಲ್ಲ.

    'ಕೆಜಿಎಫ್' ರಿಲೀಸ್ ಗೆ ತಡೆ: ಸಿವಿಲ್ ಕೋರ್ಟ್ ಆದೇಶ 'ಕೆಜಿಎಫ್' ರಿಲೀಸ್ ಗೆ ತಡೆ: ಸಿವಿಲ್ ಕೋರ್ಟ್ ಆದೇಶ

    ಕಾನೂನು ಉಲ್ಲಂಘನೆ ಮಾಡಬಹುದು.!

    ಕಾನೂನು ಉಲ್ಲಂಘನೆ ಮಾಡಬಹುದು.!

    ಇನ್ನು ನಿಗದಿಯಾಗಿರುವಂತೆ ಕೆಜಿಎಫ್ ಸಿನಿಮಾವನ್ನ ರಿಲೀಸ್ ಮಾಡಿ, ನಂತರ ಕೋರ್ಟ್ ವಿಚಾರಣೆ ಎದುರಿಸಬಹುದು. ಅಲ್ಲಿ ಕಾನೂನು ಆದೇಶ ಉಲ್ಲಂಘನೆ ಮಾಡಿದ್ದಕ್ಕೆ ದಂಡ ಕಟ್ಟಬೇಕಾಗುತ್ತೆ. ಕೋರ್ಟ್ ಶಿಕ್ಷೆಯನ್ನು ಸ್ವೀಕರಿಸುವ ಮೂಲಕ ಚಿತ್ರವನ್ನು ಯಾವುದೇ ಅಡಿತಡೆ ಇಲ್ಲದೆ ಪ್ರದರ್ಶನ ಮಾಡಬಹುದು.

    English summary
    KGF in legal trouble : What are the option before KGF movie crew. Producer Vijay said he is yet to receive the City Civil Court order copy and Movie will be screen as per th scheduled (December 21, 2018).
    Thursday, December 20, 2018, 20:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X