For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣ ತಂದೆ ಮದನ್ ಮಂದಣ್ಣ ಮಾಡುವ ಬ್ಯುಸಿನೆಸ್‌ ಯಾವುವು?

  |

  ಕನ್ನಡತಿ, ನಟಿ ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತ ಚಿತ್ರರಂಗವನ್ನು ದಾಟಿ ಬಾಲಿವುಡ್ ನಲ್ಲಿ ನೆಲೆ ಕಾಣುತ್ತಿದ್ದಾರೆ. ಒಂದರ ಹಿಂದೊಂದು ಬಾಲಿವುಡ್ ಸಿನಿಮಾ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ.

  ಕೊಡಗಿನವರಾದ ರಶ್ಮಿಕಾ ಮಂದಣ್ಣ, ನಟನೆಯ ಹಿನ್ನಲೆ ಇಲ್ಲದ ಕುಟುಂಬದಿಂದ ಬಂದು ಚಿತ್ರರಂಗದಲ್ಲಿ ತಾರೆಯಾಗಿ ಮೆರೆಯುತ್ತಿದ್ದಾರೆ. ರಶ್ಮಿಕಾರ ಮಂದಣ್ಣ ಕುಟುಂಬದ್ದು ಉದ್ಯಮದ ಹಿನ್ನೆಲೆ.

  ರಶ್ಮಿಕಾ ಮಂದಣ್ಣರ ತಂದೆ ಮದನ್ ಮಂದಣ್ಣ ಕೊಡಗಿನಲ್ಲಿ ಜನಪ್ರಿಯ ಉದ್ಯಮಿ ಹಾಗೂ ರಾಜಕಾರಣಿ ಸಹ. ರಶ್ಮಿಕಾ ಮಂದಣ್ಣ ಸಹ ನಟಿಯಾಗುವ ಯೋಚನೆ ಮೊಳೆವ ಮುನ್ನ ತಂದೆಯ ಬ್ಯುಸಿನೆಸ್ ಅನ್ನು ನೋಡಿಕೊಳ್ಳುವ ಆಲೋಚನೆಯಲ್ಲಿಯೇ ಇದ್ದರು. ಆದರೆ ಅಚಾನಕ್ಕಾಗಿ ನಟನೆ ಕಡೆಗೆ ಬಂದರು. ಹಾಗಿದ್ದರೆ ರಶ್ಮಿಕಾ ಮಂದಣ್ಣರ ತಂದೆ ಮಾಡುವ ಬ್ಯುಸಿನೆಸ್ ಯಾವುವು?

  ರಶ್ಮಿಕಾ ನಟಿಸಿರುವ 'ಗುಡ್ ಬೈ' ಹಿಂದಿ ಸಿನಿಮಾದ ಪ್ರಚಾರ ಸಂದರ್ಭದಲ್ಲಿ ನೀಡಿರುವ ಸಂದರ್ಶನವೊಂದರಲ್ಲಿ ತಮ್ಮ ತಂದೆಯ ಉದ್ಯಮಗಳ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ. ತಂದೆಯ ಎಲ್ಲ ಉದ್ಯಮಗಳ ಬಗ್ಗೆ ವಿವರವಾಗಿ ಹೇಳಿಲ್ಲವಾದರೂ, ತಮ್ಮ ತಂದೆ, ಪ್ಲಾಂಟರ್, ಬಿಲ್ಡರ್, ಕೇಟರರ್, ರಿಯಲ್ ಎಸ್ಟೇಟ್ ಇನ್‌ವೆಸ್ಟರ್ ಇನ್ನಿತರೆಗಳನ್ನು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

  ತಂದೆಯ ಉದ್ಯಮದ ಬಗ್ಗೆ ರಶ್ಮಿಕಾ ಮಾತು

  ತಂದೆಯ ಉದ್ಯಮದ ಬಗ್ಗೆ ರಶ್ಮಿಕಾ ಮಾತು

  ''ನಮ್ಮ ತಂದೆ ಹಲವು ಬ್ಯುಸಿನೆಸ್‌ಗಳನ್ನು ಮಾಡುತ್ತಾರೆ. ಅವರದ್ದು ಒಂದು ದೊಡ್ಡ ಮ್ಯಾರೇಜ್ ಹಾಲ್ ಇದೆ, ಅಲ್ಲಿ ಕೇಟರಿಂಗ್ ಸಹ ಅವರದ್ದೇ, ಅವರು ಪ್ಲಾಂಟರ್ ಸಹ ಹೌದು, ಬಿಲ್ಡರ್ ಸಹ. ಹೋಟೆಲ್ ನಡೆಸುತ್ತಾರೆ. ಕೂರ್ಗಿನ ಜನ ಒಂದು ರೀತಿ ಬಾಸ್‌ಗಳು. ನನ್ನ ತಂದೆ ಹಾಗೂ ತಾಯಿ ಅಂತೂ ಈ ಪ್ರಪಂಚಕ್ಕೆ ನಾವೇ ರಾಜ-ರಾಣಿ ಎಂದುಕೊಂಡಿದ್ದಾರೆ. ಆದರೆ ನಾನು 'ಅಯ್ಯೊ, ಅಮ್ಮ, ಹೊರಗೆ ಪ್ರಪಂಚ ಹಾಗಿಲ್ಲ. ನಾವಿನ್ನೂ ಸಣ್ಣವರು, ಸಾಮಾನ್ಯರು' ಎಂದು ಅರ್ಥ ಮಾಡಿಸಿಕೊಡಬೇಕಾಗುತ್ತದೆ' ಎಂದು ನಗುತ್ತಾ ಹೇಳಿದ್ದಾರೆ.

  ಸೆರಿನಿಟ್ ಹಾಲ್ ಒಡೆಯ ಮದನ್ ಮಂದಣ್ಣ

  ಸೆರಿನಿಟ್ ಹಾಲ್ ಒಡೆಯ ಮದನ್ ಮಂದಣ್ಣ

  ರಶ್ಮಿಕಾರ ತಂದೆ ಮದನ್ ಮಂದಣ್ಣ ಅವರದ್ದು ವಿರಾಜಪೇಟೆಯಲ್ಲಿ ಸೆರಿನಿಟ್ ಹಾಲ್ ಹೆಸರಿನ ದೊಡ್ಡ ಕಲ್ಯಾಣ ಮಂಟಪ ಇದೆ. ಎರಡು ವರ್ಷದ ಹಿಂದೆ ಈ ಮದುವೆ ಮಂಟಪದ ಬಾಡಿಗೆ ದಿನವೊಂದಕ್ಕೆ 1.50 ಲಕ್ಷ ರುಪಾಯಿ! ಇಲ್ಲಿ ಕೇಟರಿಂಗ್ ಸಹ ಮದನ್ ಮಂದಣ್ಣ ಅವರದ್ದೇ. ಇದರ ಹೊರತಾಗಿ ಅವರ ಹುಟ್ಟೂರು ಮೈತಾಡಿ ಗ್ರಾಮದಲ್ಲಿ 24 ಎಕರೆ ಕಾಫಿ ಪ್ಲಾಂಟೇಶನ್ ಅನ್ನು ಸಹ ಮದನ್ ಮಂದಣ್ಣ ಹೊಂದಿದ್ದಾರೆ. ಎರಡು ವರ್ಷದ ಹಿಂದೆ ಬಿಟ್ಟಂಗಾಲ ಎಂಬಲ್ಲಿ 5.50 ಎಕರೆ ಜಮೀನು ಸಹ ಖರೀದಿ ಮಾಡಿದ್ದಾರೆ.

  ಮದನ್ ಮಂದಣ್ಣ ರಾಜಕಾರಣಿಯೂ ಹೌದು

  ಮದನ್ ಮಂದಣ್ಣ ರಾಜಕಾರಣಿಯೂ ಹೌದು

  ವಿರಾಜಪೇಟೆಯ ಕುಕ್ಲೂರಿನಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಬೆಲೆಯ ಐಶಾರಾಮಿ ಮನೆ ಹೊಂದಿದ್ದಾರೆ. ವಿರಾಜಪೇಟೆಯಲ್ಲಿ ಪಟ್ಟಣದಲ್ಲಿಯೂ ಒಂದು ಬೃಹತ್ ಮನೆ ಹೊಂದಿದ್ದಾರೆ. ಇತ್ತೀಚೆಗೆ ಇಂಟರ್ನ್ಯಾಷನಲ್ ಶಾಲೆ ನಿರ್ಮಾಣ ಮಾಡಲು ಜಾಗ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಪೆಟ್ರೋಲ್ ಬಂಕ್ ಸಹ ಹೊಂದಿದ್ದಾರೆ ಎನ್ನಲಾಗುತ್ತದೆ. ಇದೆಲ್ಲದರ ಜೊತೆಗೆ ಮಂದಣ್ಣ ರಾಜಕಾರಣಿಯೂ ಹೌದು, ಅವರು ಪಟ್ಟಣ ಪಂಚಾಯಿತಿ ಸದಸ್ಯರಾಗಿ ಆಯ್ಕೆ ಆಗಿದ್ದರು. ಕಾಂಗ್ರೆಸ್‌ನ ಕೆಲವು ಮುಖಂಡರೊಟ್ಟಿಗೆ ಉತ್ತಮ ಬಾಂಧವ್ಯವೂ ಅವರಿಗಿದೆ.

  ಐಟಿ ದಾಳಿ ಸಹ ನಡೆದಿತ್ತು

  ಐಟಿ ದಾಳಿ ಸಹ ನಡೆದಿತ್ತು

  ಮದನ್ ಮಂದಣ್ಣ ಹಲವು ಉದ್ದಿಮೆಗಳಲ್ಲಿ ಹಣ ತೊಡಗಿಸಿದ್ದಾರೆ. 2020 ರಲ್ಲಿ ಇವರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಸಹ ನಡೆದಿತ್ತು. ಹಿಂದೊಮ್ಮೆ ರಶ್ಮಿಕಾ ಮಂದಣ್ಣ ಅವರೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಂತೆ, ರಶ್ಮಿಕಾರ ತಂದೆ ಈಗ ಅವರ ಬ್ಯುಸಿನೆಸ್ ಪಾರ್ಟನರ್ ಸಹ ಆಗಿದ್ದಾರಂತೆ. ರಶ್ಮಿಕಾ ಸಿನಿಮಾಗಳ ಮೂಲಕ ದುಡಿವ ಹಣವನ್ನು ಉದ್ದಿಮೆಗಳಲ್ಲಿ ಇನ್‌ವೆಸ್ಟ್‌ ಮಾಡುವ ಜವಾಬ್ದಾರಿಯೂ ಸಹ ಮದನ್ ಮಂದಣ್ಣ ಅವರದ್ದೇ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ರಿಯಲ್‌ ಎಸ್ಟೇಟ್‌ನಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದ್ದು, ಇದರ ಹಿಂದಿರುವುದು ಅವರ ತಂದೆ ಮದನ್ ಮಂದಣ್ಣ ಅವರೇ!

  English summary
  Actress Rashmika Mandanna's father Madan Mandanna does many business. She only talks about this in an interview.
  Wednesday, October 12, 2022, 20:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X