ಹೆಣ್ಣು ಹೆತ್ತವರು ಏನ್ ಮಾಡೋದು ಹೇಳಿ, ಮನದ ನೋವು ಹಂಚಿಕೊಂಡ ಶ್ರೀದೇವಿ ತಂದೆ...!
ದೊಡ್ಮನೆಯ ಕುಡಿ ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಅವರ ಸಂಸಾರ ಸದ್ಯಕ್ಕೆ ಅನೇಕರ ಬಾಯಿಗೆ ಆಹಾರವಾಗಿದೆ. ಇಬ್ಬರ ವ್ಯೆಯಕ್ತಿಕ ಬದುಕು ಮತ್ತು ತೆಗೆದುಕೊಂಡ ನಿರ್ಧಾರದ ಬಗ್ಗೆ ಹತ್ತಾರು ಮಾತು ಕೇಳಿ ಬರುತ್ತಿವೆ. ಇದರ ನಡುವೆ ಶ್ರೀದೇವಿಯ ಅವರ ತಂದೆ, ತಮ್ಮ ಮಗಳ ಸಂಸಾರದಲ್ಲಿ ಉಂಟಾದ ಬಿರುಕಿನ ಬಗ್ಗೆ ಮಾತನಾಡಿದ್ದಾರೆ. ಹೆಣ್ಣು ಹೆತ್ತವರು ಏನ್ ಮಾಡ್ಬೇಕು ಹೇಳಿ ಎಂದು ತಮ್ಮ ಮನದ ನೋವನ್ನ ಹಂಚಿಕೊಂಡಿದ್ದಾರೆ.
ಹೌದು, ಮೈಸೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿರುವ ಬಿ.ಭೈರಪ್ಪ ಅವರು ವಿಚ್ಚೇದನದ ವಿಚಾರ ನಮಗೆ ಮೊದಲೇ ಗೊತ್ತಿತ್ತು ಅಂದಿದ್ದಾರೆ. ಯುವ ರಾಜ್‌ಕುಮಾರ್ ಮೈಸೂರಿಗೆ ಬಂದಿದ್ದ. ಆದರೆ, ಇದರ ಬಗ್ಗೆ ಆತ ಯಾವುದೇ ಮಾತನಾಡಿರಲಿಲ್ಲ. ಶ್ರೀದೇವಿ, ವಿಚ್ಛೇದನದ ಕುರಿತು ಮಾತನಾಡಿರಲಿಲ್ಲ. ಈಗ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾನೆ. ನಾವು ಕೂಡ ಕಾನೂನಿನ ಮೂಲಕ ಉತ್ತರ ನೀಡುತ್ತೇವೆ. ಹೆಣ್ಣು ಹೆತ್ತವರು ಏನ್ ಮಾಡ್ಬೇಕು ಹೇಳಿ. ಯಾರೂ ದುಡುಕಬಾರದು. ನನ್ನ ಮಗಳಿಂದ ಯಾವುದೇ ಕಿರುಕುಳ ಆಗಿಲ್ಲ ಎಂದು ಭೈರಪ್ಪ ಹೇಳಿದ್ದಾರೆ.

ಇನ್ನೂ ನನ್ನ ಮಗಳನ್ನು ಉನ್ನತ ವ್ಯಾಸಂಗಕ್ಕಾಗಿ ಅಮೇರಿಕಾಕ್ಕೆ ಓದಲು ಕಳಿಸಿದ್ದೇ ರಾಘವೇಂದ್ರ ರಾಜ್‌ಕುಮಾರ್ ಅವರ ಕುಟುಂಬ ಎಂದು ಹೇಳಿರುವ ಭೈರಪ್ಪ, ನನ್ನ ಮಗಳು ಬೇರೆ ದೇಶಕ್ಕೆ ಓದಲು ಹೋಗುವುದಕ್ಕೆ ಮೊದಲು ನಾನು ಬೇಡಮ್ಮ, ಈಗ ಮಾಡುತ್ತಿರುವುದು ಸಾಕು ಎಂದೆ. ಆದರೆ ಆಕೆಯನ್ನು ಓದಲು ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಕಳಿಸಲಾಯಿತು ಎಂದಿದ್ದಾರೆ.
ಇತ್ತೀಚೆಗಷ್ಟೇ ಯುವ ಮೈಸೂರಿಗೆ ಕೂಡ ಬಂದಿದ್ದ ಆದರೆ, ಇದರ ಬಗ್ಗೆ ಆತ ಯಾವುದೇ ಮಾತನಾಡಿರಲಿಲ್ಲ. ಆದರೆ ಈಗ ನೋಡಿದರೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾನೆ. ನಾವು ಕೂಡ ಕಾನೂನಿನ ಮೂಲಕ ಉತ್ತರ ನೀಡುತ್ತೇವೆ. ಹೆಣ್ಣು ಹೆತ್ತವರು ಏನ್ ಮಾಡ್ಬೇಕು ಹೇಳಿ. ಯಾರೂ ದುಡುಕಬಾರದು. ನನ್ನ ಮಗಳಿಂದ ಯಾವುದೇ ಕಿರುಕುಳ ಆಗಿಲ್ಲ ಎಂದು ಭೈರಪ್ಪ ಹೇಳಿದ್ದಾರೆ.

ಉಳಿದಂತೆ ವಿಚ್ಚೇದನದ ವಿಚಾರದ ಕುರಿತು ಯುವರಾಜ್ ಕುಮಾರ್ ಇನ್ನೂ ಮೌನ ಮುರಿದಿಲ್ಲ. ಆದರೆ ಹೆಂಡತಿಯಿಂದ ಅಗೌರವ ಹಾಗೂ ಮಾನಸಿಕ ಕ್ರೌರ್ಯ ಎದುರಿಸುತ್ತಿದ್ದೆ ಎಂದು ಯುವ ತಮ್ಮ ಅರ್ಜಿಯಲ್ಲಿ ನಮೂದಿಸಿದ್ದಾರೆ.
ಇನ್ನೂ.. ಶ್ರೀದೇವಿ ಈ ವಿಚಾರದ ಕುರಿತು ಮಾತನಾಡಿದ್ದು ವಿಷಯ ಏನೆಂದು ಚಿತ್ರರಂಗ ಹಾಗೂ ಮಾಧ್ಯಮದಲ್ಲಿ ಅನೇಕರಿಗೆ ತಿಳಿದಿದೆ. ನಾನು ಈಗಾಗಲೇ legal ನೋಟಿಸ್‌ಗೆ ಉತ್ತರಿಸಿದ್ದೇನೆ. ವಿಚ್ಛೇದನದ ಅರ್ಜಿಯು ಇನ್ನೂ ನನಗೆ ತಲುಪಿಲ್ಲ, ಸಿಕ್ಕಾಗ ನ್ಯಾಯಾಲಯಕ್ಕೆ ಉತ್ತರಿಸುತ್ತೇನೆ. ಸದ್ಯಕ್ಕೆ ನಾನು ಬೇರೇನೂ ಮಾತನಾಡುವ ಮಾನಸಿಕ ಪರಿಸ್ಥಿತಿಯಲ್ಲಿ ಇಲ್ಲ" ಎಂದು ತಿಳಿಸಿದ್ದಾರೆ.

ಒಟ್ನಲ್ಲಿ ಯುವರಾಜ್ ಕುಮಾರ್ ಮತ್ತು ಶ್ರೀದೇವಿಯ ದಾಂಪತ್ಯ ಜೀವನ ಈಗ ಒಡೆದ ಹಾಲಾಗಿದೆ. ಇದರಿಂದ ಅಭಿಮಾನಿಗಳಿಗೂ ಕೂಡ ಆಘಾತವಾಗಿದೆ. ಯುವರಾಜ್ ಕುಮಾರ್ ಮತ್ತು ಶ್ರೀದೇವಿಯವರ ಸಂಸಾರ ಕರುನಾಡಿನೆಲ್ಲೆಡೆ ಚರ್ಚೆಗೀಡಾಗಿದೆ. ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯವು ಜುಲೈ 4ಕ್ಕೆ ವಿಚಾರಣೆಯನ್ನ ಮುಂದೂಡಿದೆ.


Click it and Unblock the Notifications











