ಚಿರಂಜೀವಿ ಸರ್ಜಾ ಗೆ ಏನಾಯಿತು? ನಿರ್ಮಾಪಕ ಕೆ.ಮಂಜು ನೀಡಿದ ಮಾಹಿತಿ
ಚಿರಂಜೀವಿ ಸರ್ಜಾ ಇನ್ನಿಲ್ಲ ಎಂಬ ಸುದ್ದಿ ಚಂದನವನದ ಮೇಲೆ ಭರಸಿಡಿಲಿನಂತೆ ಅಬ್ಬರಿಸಿದೆ. ಇನ್ನೂ 39 ವರ್ಷದ ನಟ ಇದ್ದಕ್ಕಿದ್ದಂತೆ ಇಲ್ಲ ಎನ್ನುವುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.
Recommended Video
ಮಾಧ್ಯಮಗಳಲ್ಲಿ 4 ಗಂಟೆ ವೇಳೆಗೆ ಬ್ರೇಕಿಂಗ್ ಒಂದು ಹರಿದಾಡಿತ್ತು. 'ಚಿರಂಜೀವಿ ಸರ್ಜಾ ಅವರಿಗೆ ಉಸಿರಾಟದ ತೊಂದರೆ ಆಸ್ಪತ್ರೆಗೆ ದಾಖಲು' ಎಂದು ಆದರೆ ಈ ಬ್ರೇಕಿಂಗ್ ಬಂದ ಕೆಲವೇ ನಿಮಿಷಗಳಲ್ಲಿ ಚಿರಂಜೀವಿ ಇನ್ನಿಲ್ಲ ಎನ್ನಲಾಯಿತು.
ಅತ್ಯುತ್ತಮ ದೇಹದಾರ್ಡ್ಯವಿದ್ದ ಚಿರಂಜೀವಿ ಸರ್ಜಾ ಗೆ ಇದ್ದಕ್ಕಿಂತೆ ಪ್ರಾಣ ಹೋಗಿದ್ದು ಹೇಗೆ? ಸರ್ಜಾ ಗೆ ಏನಾಯಿತು? ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಕಾಡತೊಡಗಿದೆ.

ನಿರ್ಮಾಪಕ ಕೆ.ಮಂಜು ಹೇಳಿದ ಮಾಹಿತಿ
ಮಾಧ್ಯಮದೊಂದಿಗೆ ಮಾತನಾಡಿದ ಚಿರಂಜೀವಿ ಸರ್ಜಾ ಗೆಳೆಯ, ನಿರ್ಮಾಪಕ ಕೆ.ಮಂಜು ಚಿರಂಜೀವಿ ಸರ್ಜಾ ಅವರನ್ನು ಆಸ್ಪತ್ರೆಗೆ ಕರೆತರುವ ಮುನ್ನಾ ಏನು ನಡೆಯಿತು ಎಂಬುದನ್ನು ಹೇಳಿದ್ದಾರೆ.

ಮಧ್ಯಾಹ್ನ ಊಟ ಮಾಡಿ ಕೂತಿದ್ದ ಚಿರಂಜೀವಿ ಸರ್ಜಾ
'ಮಧ್ಯಾಹ್ನ ಎರಡು ಗಂಟೆ ವೇಳೆಗೆ ಊಟ ಮಾಡಿ ಚಿರಂಜೀವಿ ಸರ್ಜಾ ಅವರು ತಂದೆಯೊಡನೆ ಮಾತನಾಡುತ್ತಾ ಕುಳಿತಿದ್ದರು. ಇದ್ದಕ್ಕಿಂದ್ದಂತೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆತಂದರು' ಎಂದು ಮಂಜು ಹೇಳಿದರು.

ಮಧ್ಯಾಹ್ನದ ಸುಮಾರಿಗೆ ಪ್ರಾಣ ಹೋಯಿತು
'ಆಸ್ಪತ್ರೆಗೆ ಕರೆತಂದ ಸ್ವಲ್ಪವೇ ಸಮಯದಲ್ಲಿ ಚಿರಂಜೀವಿ ಸರ್ಜಾ ನಿಧನ ಹೊಂದಿದರು' ಬಹುಶಃ ಆಗ 2:30 ಸಮಯವಾಗಿತ್ತು ಎಂದು ಮಂಜು ಹೇಳಿದ್ದಾರೆ.

ತುಮಕೂರಿನಲ್ಲಿ ಅಂತ್ಯಕ್ರಿಯೆ
ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ತುಮಕೂರು ಜಿಲ್ಲೆಯ ಜಕ್ಕೇಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ನಾಳೆ 10 ಗಂಟೆ ನಂತರ ಅವರ ಅಂತ್ಯಕ್ರಿಯೆ ನಡೆಯಲಿದೆ. ಅವರ ತಾತನ ಅಂತ್ಯಕ್ರಿಯೆ ಅಲ್ಲಿಯೇ ನಡೆದಿತ್ತು.


Click it and Unblock the Notifications











