ರೆಬಲ್ ಸ್ಟಾರ್ ಅಂಬಿ ಇಲ್ಲಿಲ್ಲ, ರಮ್ಯಾ ಕಥೆ ಗೊತ್ತಿಲ್ಲ
ರೆಬಲ್ ಸ್ಟಾರ್ ಅಂಬರೀಶ್ ಸಿಂಗಾಪುರದಲ್ಲಿದ್ರೂ ಮನಸ್ಸು ಮಾತ್ರ ಬೆಂಗಳೂರು, ರಾಜಕೀಯ, ರೇಸ್ಕೋರ್ಸ್, ಸಿನಿಮಾ ಬಗ್ಗೇನೇ ಯೋಚಿಸ್ತಿರುತ್ತೆ. ನಾನು ಬೇಗ ಬರ್ತೀನಿ ಅಂತ ಅಂಬರೀಶ್ ಹೇಳಿದ್ದೂ ಆಗಿದೆ. ಆದರೆ ಅಂಬರೀಶ್ ಈ ಸಾರಿ ಚುನಾವಣೆ ಪ್ರಚಾರ ಅಂತ ಪಾಲ್ಗೊಳ್ಳದಿದ್ರೆ ಕಾಂಗ್ರೆಸ್ ಗೆ ಲಾಸ್ ಆಗುತ್ತೋ ಇಲ್ವೋ ಆದ್ರೆ ಒಬ್ಬರಿಗಂತು ಖಂಡಿತಾ ಲಾಸು.
ಅದು ಮೋಹಕತಾರೆ ರಮ್ಯಾಗೆ. ಅಂಬರೀಶ್ ಅಂಕಲ್ ಅಂತ ಪ್ರೀತಿಯಿಂದ ಕರೆದು ಅಂಬರೀಶ್ ರ ಪ್ರೀತಿ ಗಳಿಸಿಕೊಂಡು ಮಂಡ್ಯದ ಜನರ ಪ್ರೀತಿಯನ್ನೂ ಗಿಟ್ಟಿಸಿಕೊಂಡಿದ್ರು. ಆದರೆ ಕಳೆದಬಾರಿ ವಿಧಾನಸಭಾ ಚುನಾವಣೆಯಲ್ಲಿ ಅಂಬಿ ಹಾಗೂ ಎಸ್.ಎಂ. ಕೃಷ್ಣ ಜಟಾಪಟಿಯಿಂದ ಅಂಬರೀಶ್ ಬೆಂಬಲಿಗರು ರಮ್ಯಾರನ್ನ ಬೆಂಬಲಿಸಲು ಹಿಂದೆ ಮುಂದೆ ನೋಡಿದರು. [ಸದ್ಯಕ್ಕೆ ರಮ್ಯಾ 'ಆರ್ಯನ್'ಗೆ ಬಿಡುಗಡೆ ಭಾಗ್ಯವಿಲ್ಲ]

ಇದೆಲ್ಲಕ್ಕಿಂತ ಮುಖ್ಯವಾಗಿ ಬರ್ರಲಾ...ಪಾಪ ಎಳೆ ಹುಡ್ಗಿ ಕಲೀತಾ ಐತೆ ರಾಜಕೀಯನ ಅಂತ ತನ್ನ ಬೆಂಬಲಿಗರಿಗೆ ಬುದ್ಧಿ ಹೇಳೋಕೆ ಸ್ವತಃ ಅಂಬೀನೇ ಇಲ್ಲಿಲ್ಲ. ಕರ್ನಾಟಕದ ಇಂಡಿಯಾ ಮಂಡ್ಯದಲ್ಲಿ ರಮ್ಯಾ ಕಥೆ ಏನಾಗುತ್ತೋ ಗೊತ್ತಿಲ್ಲ.


Click it and Unblock the Notifications











