For Quick Alerts
  ALLOW NOTIFICATIONS  
  For Daily Alerts

  ಇಷ್ಟಕ್ಕೂ ತೆಲುಗು ನಟ ಶ್ರೀಹರಿ ಅವರಿಗೆ ಏನಾಗಿತ್ತು?

  By ಅನಂತರಾಮು, ಹೈದರಾಬಾದ್
  |

  ತೆಲುಗು ಚಿತ್ರರಂಗದಲ್ಲಿ ರಿಯಲ್ ಸ್ಟಾರ್ ಎಂದೇ ಕರೆಸಿಕೊಂಡಿರುವ ನಟ ಶ್ರೀಹರಿ ದಿಢೀರ್ ಎಂದು ಹೇಳದೆ ಕೇಳದೆ ಮರಳಿ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ. ಏನಾಗಿತ್ತು ಅವರಿಗೆ? ಕೆಲವು ಟಿವಿ ಮಾಧ್ಯಮಗಳು ಕ್ಯಾನ್ಸರ್ ಆಗಿತ್ತು ಅವರಿಗೆ ಎಂದು ವರದಿ ಮಾಡಿದವು. ನಿಜಕ್ಕೂ ಅವರು ಕ್ಯಾನ್ಸರ್ ನಿಂದ ಬಳಲುತ್ತಿರಲಿಲ್ಲ.

  ಬುಧವಾರ (ಅ.9) ನಡೆದದ್ದಾದರೂ ಏನೂ? ಅವರು ಎಲ್ಲಿದ್ದರು? ಈ ದಿಢೀರ್ ಬೆಳವಣಿಗೆ ನಡೆದದ್ದಾದರೂ ಹೇಗೆ? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಪ್ರಭುದೇವ ಆಕ್ಷನ್ ಕಟ್ ಹೇಳುತ್ತಿರುವ 'ರ್‍ಯಾಂಬೋ ರಾಜ್ ಕುಮಾರ್' ಹಿಂದಿ ಚಿತ್ರದ ಚಿತ್ರೀಕರಣಕ್ಕಾಗಿ ಇತ್ತೀಚೆಗೆ ಮುಂಬೈ ಹೋಗಿದ್ದರು.

  ಅವರು ಪಿತ್ತಜನಕಾಂಗ ತೊಂದರೆಯಿಂದ ಬಳಲುತ್ತಿದ್ದರು. ರ್‍ಯಾಂಬೋ ರಾಜ ಸೆಟ್ ನಲ್ಲೇ ಅವರು ತೀವ್ರ ಅಸ್ವಸ್ಥತೆಗೆ ಗುರಿಯಾಗಿದ್ದಾರೆ. ಇದರಿಂದ ಗಾಬರಿಯಾದ ಚಿತ್ರತಂಡ ಕೂಡಲೆ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದೆ.

  ಸಾವು ಬದುಕಿನ ನಡುವೆ ಹೋರಾಡಿದ ಶ್ರೀಹರಿ ಸಂಜೆ 5 ಗಂಟೆ ಸಮಯಕ್ಕೆ ಕೊನೆಯುಸಿರೆಳೆದಿದ್ದಾರೆ. ಇದಿಷ್ಟು ಬೆಳವಣಿಗೆಗಳು ದಿಢೀರ್ ಎಂದು ನಡೆದು ಹೋದವು. ಗುರುವಾರ (ಅ.10) ಅವರ ಅಂತ್ಯಕ್ರಿಯೆ ಅವರ ಸ್ವಗ್ರಾಮ ಬಾಚುಪಲ್ಲಿಯಲ್ಲಿ ನೆರವೇರಲಿದೆ. ಚಿಕ್ಕಂದಿನಲ್ಲೇ ಮೃತಪಟ್ಟ ಶ್ರೀಹರಿ ಪುತ್ರಿ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಯಲಿದೆ.

  English summary
  Actually what happens to Telugu actor Srihari? The actor died on Wednesday at a private hospital in Mumbai, where he was in the midst of a shooting for a Hindi film. Who had been suffering from a liver ailment for some time, complained of giddiness during the shooting of ‘Rambo Rajkumar’ being directed by Prabhu Deva.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X