ದರ್ಶನ್ 'D-53' ಚಿತ್ರಕ್ಕೂ ಸಲ್ಮಾನ್ ಖಾನ್ ಗೂ ಸಂಬಂಧವಿದ್ಯಾ.?
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ತರುಣ್ ಸುಧೀರ್ ಜೋಡಿಯಲ್ಲಿ ಬರುತ್ತಿರುವ ಹೊಸ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ. ಕನ್ನಡದ ಮಟ್ಟಿಗೆ ಇದು ಹೊಸದಾಗಿದ್ದು, ಈ ಚಿತ್ರದ ಬಗ್ಗೆ ಬಗೆ ಬಗೆಯ ಕಥೆಗಳು ಚರ್ಚೆಯಾಗ್ತಿದೆ.
ಚಿತ್ರದ ಟೈಟಲ್ ಇನ್ನೂ ನಿಗಧಿಯಾಗಿಲ್ಲ. ಸಿನಿಮಾ ಕಥೆ ಬಗ್ಗೆ ಎಲ್ಲಿಯೂ ಸುಳಿವು ಸಿಕ್ಕಿಲ್ಲ. ಆದ್ರೆ, ಪೋಸ್ಟರ್ ಡಿಸೈನ್ ಮಾತ್ರ ಎಲ್ಲದಕ್ಕೂ ಉತ್ತರವೆನ್ನುವಂತಿದೆ.
ಮತ್ತೊಂದೆಡೆ D53 ಚಿತ್ರಕ್ಕೂ ಬಾಲಿವುಡ್ ನಟ ಸಲ್ಮಾನ್ ಖಾನ್ ಗೂ ಸಂಬಂಧವಿದೆ ಎನ್ನಲಾಗ್ತಿದೆ. ಸಲ್ಲು ಹಾದಿಯಲ್ಲಿ ಸ್ಯಾಂಡಲ್ ವುಡ್ ಡಿ ಬಾಸ್ ಸಾಗ್ತಿದ್ದಾರೆ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ. ಅದಕ್ಕೂ ಕಾರಣ ಇದೇ D53 ಪೋಸ್ಟರ್. ಅಷ್ಟಕ್ಕೂ, ಏನಿದು ದರ್ಶನ್ ಮತ್ತು ಸಲ್ಮಾನ್ ಕಥೆ.? ಮುಂದೆ ಓದಿ....

ಶ್ರೀರಾಮನಾದ ದರ್ಶನ್
D53 ಚಿತ್ರದ ಪೋಸ್ಟರ್ ನಲ್ಲಿ ದರ್ಶನ್ ಅವರು ಒಂದು ಮಗುವಿನ ಕೈ ಹಿಡಿದುಕೊಂಡಿದ್ದಾರೆ. ಅವರ ಮುಂದೆ ರಾವಣ ನಿಂತಿದ್ದಾರೆ. ಇದಕ್ಕೊಂದು ಡೈಲಾಗ್ ಇದೆ. ''ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು. ರಾವಣನ ಮುಂದೆ ಗೆಲ್ಲೋದು ಗೊತ್ತು.'' ರಾವಣನ ಗೆಟಪ್ ಮತ್ತು ಶಬರಿ ಡೈಲಾಗ್ ನೋಡಿದ್ರೆ, ದರ್ಶನ್ ರಾಮನ ಪಾತ್ರ ನಿಭಾಯಿಸುತ್ತಿದ್ದಾರೆ ಎನ್ನಲಾಗಿದೆ.

ಡಿ-ಬಾಸ್ ಈಗ ಪ್ರೊಟೆಕ್ಟರ್
ಪಾತ್ರದ ಬಗ್ಗೆ ಮತ್ತು ಚಿತ್ರದ ಕಥೆಯ ಬಗ್ಗೆ ಹೆಚ್ಚು ಮಾಹಿತಿ ಬಿಟ್ಟುಕೊಡದ ನಿರ್ದೇಶಕ ತರುಣ್, ದರ್ಶನ್ ಓರ್ವ ಪ್ರೊಟೆಕ್ಟರ್ ಆಗಿರಲಿದ್ದಾರೆ ಎಂಬುದನ್ನ ಮಾತ್ರ ರಿವೀಲ್ ಮಾಡಿದ್ದಾರೆ. ಇಡೀ ಚಿತ್ರದಲ್ಲಿ ದರ್ಶನ್ ಮತ್ತು ಬಾಲಕನೊಬ್ಬನದ್ದು ಪ್ರಮುಖ ಪಾತ್ರವಂತೆ. ಹಾಗಾಗಿ, ಇದು ಸಲ್ಮಾನ್ ಖಾನ್ ಚಿತ್ರವನ್ನ ಹೋಲಬಹುದು ಎಂದು ಅಂದಾಜಿಸಲಾಗುತ್ತಿದೆ.

ಕನ್ನಡದ 'ಭಜರಂಗಿ ಭಾಯ್ ಜಾನ್'
ಅಂದ್ರೆ, ಸಲ್ಮಾನ್ ಖಾನ್ ಈ ಹಿಂದೆ ಅಭಿನಯಿಸಿದ್ದ 'ಭಜರಂಗಿ ಭಾಯ್ ಜಾನ್' ಚಿತ್ರದಂತೆ, ದರ್ಶನ್ ಕೂಡ ಅದೇ ಮಾದರಿಯ ಚಿತ್ರವನ್ನ ಮಾಡುತ್ತಿರಬಹುದು ಎಂಬ ಊಹೆ. ಅಲ್ಲಿ ಒಂದು ಹುಡುಗಿಯನ್ನ ರಕ್ಷಿಸಿ ತಾಯ್ನಾಡಿಗೆ ಸುರಕ್ಷಿತವಾಗಿ ಕಳುಹಿಸುವುದು ಕಥೆಯಾಗಿತ್ತು. ಅದೇ ರೀತಿ ಇಲ್ಲಿಯೂ ಬಾಲಕನಿರುವುದರಿಂದ ಬಹುಶಃ ಅದೇ ಮಾದರಿ ಸಿನಿಮಾ ಮಾಡ್ತಿರಬಹುದು.? ಬಟ್, ಗೊತ್ತಿಲ್ಲ.

ತಂದೆ-ಮಗನ ಕಥೆ, ತಾಯಿ-ಮಗನ ಕಥೆ
ಸದ್ಯ, ಈ ಪೋಸ್ಟರ್ ಅಭಿಮಾನಿಗಳೇ ಒಂದೊಂದು ಕಥೆಯನ್ನ ಊಹಿಸಿಕೊಳ್ಳುತ್ತಿದ್ದಾರೆ. ಬಹುಶಃ ಇದು ತಂದೆ ಮತ್ತ ಮಗನ ಸಿನಿಮಾ ಇರಬಹುದು ಎಂದು ಕೆಲವರು ಅಭಿಪ್ರಾಯ ಪಟ್ಟರೇ, ಇನ್ನ ಕೆಲವರು ತಾಯಿ-ಮಗನ ಕಥೆ ಇರಬಹುದು ಎನ್ನುತ್ತಿದ್ದಾರೆ. ಮತ್ತೆ ಕೆಲವರು ಮಕ್ಕಳ ಕಳ್ಳ ಸಾಗಣಿಕೆಯ ಕುರಿತು ಕಥೆ ಇರಬಹುದು ಎಂದು ಊಹಿಸುತ್ತಿದ್ದಾರೆ.


Click it and Unblock the Notifications