'ನಟಸಾರ್ವಭೌಮ' ಕಡೆಯಿಂದ ಇಂದು ಸಂಜೆ 6.30ಕ್ಕೆ ಸರ್ಪ್ರೈಸ್.!
Recommended Video

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟಸಾರ್ವಭೌಮ' ಚಿತ್ರದ ಕಡೆಯಿಂದ ಇಂದು ಸಂಜೆ (ನವೆಂಬರ್ 21) 6.30ಕ್ಕೆ ನಿಮಗೊಂದು ಸರ್ಪ್ರೈಸ್ ಸಿಗಲಿದೆ.
ಆ ಸರ್ಪ್ರೈಸ್ ಏನು ಅಂತ ನಮಗೂ ಕೂಡ ಗೊತ್ತಿಲ್ಲ. ಯಾಕಂದ್ರೆ, ನಿರ್ದೇಶಕ ಪವನ್ ಒಡೆಯರ್ ಹೇಳಿರೋದು ಇಷ್ಟೆ. ಇಂದು ಸಂಜೆ ಒಂದು ಸರ್ಪ್ರೈಸ್ ಕೊಡ್ತೀವಿ ಅಂತ. ಬೇರೆ ಯಾವ ಮಾಹಿತಿಯೂ ಬಿಟ್ಟುಕೊಟ್ಟಿಲ್ಲ.
ನಿರ್ದೇಶಕ ಪವನ್ ಒಡೆಯರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದು, ಆ ವಿಡಿಯೋದಲ್ಲಿ 'ಇಂದು ಸಂಜೆ 6.30ಕ್ಕೆ ಸರ್ಪ್ರೈಸ್' ಎಂದು ಹೇಳಿದ್ದಾರೆ. ಇದು ಭಾರಿ ಕುತೂಹಲ ಮೂಡಿಸಿದೆ.
ಈಗಾಗಲೇ ಸಂಪೂರ್ಣ ಶೂಟಿಂಗ್ ಮುಗಿಸಿರುವ 'ನಟಸಾರ್ವಭೌಮ' ಚಿತ್ರತಂಡ ಜನವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಮಧ್ಯೆ ಟೀಸರ್ ರಿಲೀಸ್ ಮಾಡುವ ಪ್ಲಾನ್ ಇದ್ದು, ಬಹುಶಃ ಟೀಸರ್ ರಿಲೀಸ್ ದಿನಾಂಕವನ್ನ ಘೋಷಣೆ ಮಾಡಬಹುದು ಎಂಬ ಊಹೆಯನ್ನ ಅಭಿಮಾನಿಗಳು ಮಾಡ್ತಿದ್ದಾರೆ.

ಇನ್ನುಳಿದಂತೆ ಪವನ್ ಒಡೆಯರ್ ನಿರ್ದೇಶನ, ರಾಕ್ ಲೈನ್ ವೆಂಕಟೇಶ್ ನಿರ್ಮಾಣ, ರಚಿತಾ ರಾಮ್, ಅನುಪಮ ಪರಮೇಶ್ವರನ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











