ಹೊಸಬರ 'ಮಡಮಕ್ಕಿ' ಚಿತ್ರದ ಬಜೆಟ್ ಎಷ್ಟಿರಬಹುದು.?

By Suneetha

ಹಿಮ್ಮುಖವಾಗಿ ಚಲಿಸುತ್ತಿರುವ ಟ್ರೈಲರ್ ನಿಂದ ಭಾರಿ ಸುದ್ದಿಯಲ್ಲಿರುವ 'ಮಡಮಕ್ಕಿ' ತೆರೆಗೆ ಬರಲು ಸಿದ್ಧವಾಗಿದೆ. ಹೆಚ್ಚಾಗಿ ಎಲ್ಲಾ ಹೊಸಬರೇ ಸೇರಿಕೊಂಡು ಮಾಡಿರುವ 'ಮಡಮಕ್ಕಿ' ಎಂಬ ವಿಭಿನ್ನ ಟೈಟಲ್ ಇರೋ ಈ ಚಿತ್ರ ಇದೇ ಶುಕ್ರವಾರ (ಆಗಸ್ಟ್ 19) ದಂದು ತೆರೆಗೆ ಅಪ್ಪಳಿಸುತ್ತಿದೆ.

ಹಾಲಿವುಡ್ ಸಿನಿಮಾಗಳಲ್ಲಿ ಹೆಚ್ಚಾಗಿ ಹಿಮ್ಮುಖವಾಗಿ ಚಲಿಸುವ ದೃಶ್ಯಗಳನ್ನು ಪ್ರಯೋಗ ಮಾಡುತ್ತಾರೆ. ಆದರೆ ಕನ್ನಡದಲ್ಲಿ ಮಾತ್ರ ಇದೇ ಮೊದಲು.[ವಿಭಿನ್ನ ಪ್ರಯೋಗವುಳ್ಳ 'ಮಡಮಕ್ಕಿ' ಟ್ರೈಲರ್, ತಪ್ಪದೇ ನೋಡಿ]

What is the budget of Kannada Movie 'Madamakki'

ಅಂದಹಾಗೆ ನವ ನಿರ್ದೇಶಕ ವಿನಯ್ ಪ್ರೀತಮ್ ನಿರ್ದೇಶನ ಮಾಡಿರುವ 'ಮಡಮಕ್ಕಿ' ಚಿತ್ರದ ಬಜೆಟ್ ಎಷ್ಟು ಗೊತ್ತಾ?, ಸುಮಾರು 3 ಕೋಟಿ ರೂಪಾಯಿಗೂ ಅಧಿಕ. ನಟ ತನುಷ್, ನಟಿ ನಿಖಿತಾ ನಾರಾಯಣನ್, ಡೈಲಾಗ್ ಕಿಂಗ್ ಸಾಯಿಕುಮಾರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಅಂಡರ್ ವರ್ಲ್ಡ್ ಕಥೆಗಳನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದೆ.

What is the budget of Kannada Movie 'Madamakki'

ಸಸ್ಪೆನ್ಸ್-ಥ್ರಿಲ್ಲರ್ 'ಮಡಮಕ್ಕಿ' ಚಿತ್ರ ಮುಂಬೈ ಮತ್ತು ಮಂಗಳೂರು ಅಂಡರ್ ವರ್ಲ್ಡ್ ಕಥೆಯನ್ನು ಹೊಂದಿದೆ. ನಟಿ ದೀಪಿಕಾ ಕಾಮಯ್ಯ ಅವರು ಈ ಚಿತ್ರದ ವಿಶೇಷ ಹಾಡೊಂದಕ್ಕೆ ಸೊಂಟ ಬಳುಕಿಸಿದ್ದು, ನಟಿ ತಾರಾ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

What is the budget of Kannada Movie 'Madamakki'

ಒಟ್ನಲ್ಲಿ ಭಾರಿ ಕುತೂಹಲ ಮೂಡಿಸಿರುವ ಸಿನಿಮಾ ಹೇಗಿರಬಹುದು?, ಸದಾ ವಿಭಿನ್ನತೆಯನ್ನು ಬಯಸುವ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟವಾಗಬಹುದೇ?, ಅನ್ನೋ ಎಲ್ಲಾ ಪ್ರಶ್ನೆಗಳಿಗೆ ಇದೇ ವಾರ ಉತ್ತರ ದೊರೆಯಲಿದೆ.

More from Filmibeat

English summary
Kannada Movie 'Madamakki' all set to releasing on August 19th. This movie budget is 30 Crore. Kannada Actor Tanush, Actress Nikitha Narayan, Actress Deepika Kamaish, Actor Sai Kumar in the lead role. The movie is directed by Vinay Preetham.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X