'ಉಳಿದವರು ಕಂಡಂತೆ' ಚಿತ್ರದ ಬಜೆಟ್ ಎಷ್ಟು?

By Rajendra

Next »

« Previous

ಈ ಚಿತ್ರವನ್ನು ರೆಗ್ಯುಲರ್ ಆಡಿಯನ್ಸ್ ಅಥವಾ ಮಲ್ಟಿಫ್ಲೆಕ್ಸ್ ಆಡಿಯನ್ಸ್ ಎಂದು ತಲೆಯಲ್ಲಿ ಇಟ್ಟುಕೊಂಡು ಮಾಡಿಲ್ಲ. ಮಲ್ಟಿಫ್ಲೆಕ್ಸ್ ಆಡಿಯನ್ಸ್ ಗೆ ಏನು ಬೇಕೋ ಅದೂ ಇದೆ, ರೆಗ್ಯುಲರ್ ಆಡಿಯನ್ಸ್ ಗೆ ಇಷ್ಟವಾಗುವ ಅಂಶಗಳು ಚಿತ್ರದಲ್ಲಿವೆ. ಎರಡೂ ರೀತಿಯ ಪ್ರೇಕ್ಷಕರಿಗೆ ಚಿತ್ರ ಇಷ್ಟವಾಗುತ್ತದೆ.

ಚಿತ್ರದಲ್ಲಿ ಹನ್ನೊಂದು ಕಡೆ ಬೀಪ್ ಬೀಪ್ ಧ್ವನಿ ಬರುತ್ತದೆ. ಚಿತ್ರದಲ್ಲಿ ಬೋ..ಮಗ ಎಂಬ ಪದವನ್ನು ಬಹಳಷ್ಟು ಕಡೆ ಬಳಸಿದ್ದೇವೆ. ಅದನ್ನು ಮ್ಯೂಟ್ ಮಾಡಲಾಗಿದೆ. ಉಡುಪಿ ಕಡೆ ಈ ಪದ ಕಾಮನ್. ಇದರ ಜೊತೆಗೆ "ಕುಂಡೆ ಸುಡ್ತೀನಿ" ಎಂಬ ಪದ ಬಳಕೆಯೂ ಹೆಚ್ಚಾಗಿ ಮಾಡಿದ್ದೇವೆ. ಮಲ್ಪೆ ಕಡೆ ಹೆಂಗಸರು ಹೆಚ್ಚಾಗಿ ಬಳಕೆ ಮಾಡುವ ಪದ ಇದು. ಅಲ್ಲೆಲ್ಲಾ ಮ್ಯೂಟ್ ಆಗಿದೆ. ['ಉಳಿದವರು ಕಂಡಂತೆ' ಸೆನ್ಸಾರ್ ನಲ್ಲಿ ಬೀಪ್ ಬೀಪ್]

ಧ್ವನಿಗ್ರಹಣಕ್ಕೆ ಮೂರು ತಿಂಗಳ ತೆಗೆದುಕೊಳ್ಳಲು ಪ್ರಮುಖ ಕಾರಣ ನಾವು ಡಬ್ಬಿಂಗ್ ಗೆ ಬದಲಾಗಿ ಸಿಂಕ್ ಟೋನ್ ಬಳಸಿಕೊಂಡೆವು. ಇದರಿಂದ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಬಹಳಷ್ಟು ಸಮಯ ಹಿಡಿಸುತ್ತದೆ. ಡಬ್ಬಿಂಗ್ ಮಾಡಬೇಕಾದರೆ ಬ್ರೀಥಿಂಗ್ ಸೌಂಡ್, ನೈಜವಾದ ಧ್ವನಿ ಬರಲು ಸಾಧ್ಯವಿರಲ್ಲ. ಅದಕ್ಕಾಗಿ ನಾವು ಈ ತಂತ್ರಜ್ಞಾನ ಬಳಸಿಕೊಂಡಿದ್ದೇವೆ. ಡಬ್ಬಿಂಗ್ ಗೆ ಬದಲಾಗಿ ಸಿಂಕ್ ಟೋನ್ ಮಾಡಿದ್ದಕ್ಕಾಗಿ ಬಜೆಟ್ ಹೊರೆ ಕೂಡ ಸ್ವಲ್ಪ ಜಾಸ್ತಿ ಆಯಿತು. ಸರಿಸುಮಾರು ರು.10 ಲಕ್ಷದ ತನಕ ವ್ಯತ್ಯಾಸ ಬಂತು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಚಿತ್ರದ ಬಜೆಟ್ ಸರಿಸುಮಾರು ರು.4 ಕೋಟಿ ಎಂದು ತಿಳಿಸಿದವರು ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಹೇಮಂತ್. ಇನ್ನೂ ಸ್ಯಾಟಲೈಟ್ ರೈಟ್ಸ್ ಯಾರಿಗೂ ಕೊಟ್ಟಿಲ್ಲ ಎಂದೂ ಅವರು ಈ ಸಂದರ್ಭದಲ್ಲಿ ಗುಟ್ಟೊಂದನ್ನು ಬಿಟ್ಟುಕೊಟ್ಟರು.

ಚಿತ್ರದ ನಾಯಕಿ ಯಜ್ಞಾ ಶೆಟ್ಟಿ ಮಾತನಾಡುತ್ತಾ, ಸ್ಕ್ರಿಪ್ಟ್ ಕೇಳಿದಾಗ ನಾನು ಬಹಳ ಎಕ್ಸೈಟ್ ಆದೆ. ಕನ್ನಡ ಚಿತ್ರರಂಗದಲ್ಲಿ ಖಂಡಿತ ಈ ಚಿತ್ರ ಹೊಸ ಮೈಲಿಗಲ್ಲಾಗಲಿದೆ. ಮ್ಯೂಸಿಕ್ ಆಗಬಹುದು, ಕಥೆ ಆಗಬಹುದು ಎಲ್ಲವೂ ಸೊಗಸಾಗಿದೆ. "ಘಾಟಿ ಇಳಿದು..." ಹಾಡು ಈಗಾಗಲೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ರಕ್ಷಿತ್ ಶೆಟ್ಟಿ ಚಿತ್ರವನ್ನು ಸೊಗಸಾಗಿ ತೆರೆಗೆ ತಂದಿದ್ದಾರೆ. ನಾನೂ ಅಷ್ಟೇ ಚಿತ್ರವನ್ನು ನೋಡಲು ಉತ್ಸುಕಳಾಗಿದ್ದೇನೆ ಎಂದರು.

Next »

« Previous

More from Filmibeat

English summary
Rakshit Shetty debut directional Kannada movie Ulidavaru Kandante (As seen by the rest) is slated for release on 28th March, 2014. The movie released overseas by Reelbox Media Entertainment Pvt. Ltd. in the countries of Australia, UK, Germany, US, Dubai and New Zealand among others. Kishore, Tara, Achuth Kumar, Yagna Shetty, and Rakshit Shetty as well, are in the lead role.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X