For Quick Alerts
  ALLOW NOTIFICATIONS  
  For Daily Alerts

  ಡಿ ಬಾಸ್ ಹುಟ್ಟುಹಬ್ಬದ ಪ್ರಯುಕ್ತ ನಿರೀಕ್ಷೆ ಏನು? ಸರ್ಪ್ರೈಸ್ ಏನು?

  |
  ಮಾದ್ಯಮದವರಿಗೆ ಇಷ್ಟ ಆಯ್ತ ಡಿ ಬಾಸ್ ಮನೆ ಊಟ..?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಕೆಲವೇ ಗಂಟೆಗಳು ಮಾತ್ರ ಬಾಕಿಯಿದೆ. ಈಗಾಗಲೇ ರಾಜರಾಜೇಶ್ವರಿ ನಗರದಲ್ಲಿರುವ ತೂಗುದೀಪ ನಿವಾಸದ ಸುತ್ತಮುತ್ತ ಹಬ್ಬದಂತೆ ವಾತಾವರಣ ನಿರ್ಮಾಣವಾಗಿದೆ.

  ದರ್ಶನ್ ಅವರ ಮನವಿಯಂತೆ ರಾಜ್ಯಾದ್ಯಂತ ಅಭಿಮಾನಿಗಳು ಅಕ್ಕಿ, ಬೇಳೆ, ದವಸ ಧಾನ್ಯ ಸೇರಿದಂತೆ ಆಹಾರ ವಸ್ತುಗಳನ್ನು ತೆಗೆದುಕೊಂಡು ಬಂದು ಕೊಡ್ತಿದ್ದಾರೆ. ಅಲ್ಲಿಂದ ಆ ವಸ್ತುಗಳು ರಾಜ್ಯದ ವಿವಿಧ ಕಡೆಯ ಅನಾಥಾಶ್ರಮಗಳಿಗೆ ಪೂರೈಕೆಯಾಗುತ್ತಿದೆ.

  ದರ್ಶನ್ ಅಭಿಮಾನಿಗಳಿಂದ ಅನಾಥಾಶ್ರಮಗಳಿಗೆ ದವಸ-ಧಾನ್ಯಗಳ ವಿತರಣೆ ದರ್ಶನ್ ಅಭಿಮಾನಿಗಳಿಂದ ಅನಾಥಾಶ್ರಮಗಳಿಗೆ ದವಸ-ಧಾನ್ಯಗಳ ವಿತರಣೆ

  ಈ ಸಂಭ್ರಮದ ನಡುವೆ ಫೆಬ್ರವರಿ 16 ರಂದು ಅಭಿಮಾನಿಗಳಿಗೆ ಏನು ಸರ್ಪ್ರೈಸ್ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಈಗಾಗಲೇ ತಿಳಿದಿರುವಂತೆ ತರುಣ್ ಸುಧೀರ್ ನಿರ್ದೇಶನದಲ್ಲಿ ಬರ್ತಿರುವ ರಾಬರ್ಟ್ ಚಿತ್ರದ ಅಧಿಕೃತ ಟೀಸರ್ ಬಿಡುಗಡೆಯಾಗಲಿದೆ.

  ಡಿ-ಬಾಸ್ ಜನ್ಮದಿನಕ್ಕೆ ಅಭಿಮಾನಿಗಳು ನೀಡುತ್ತಿರುವ ವಿಶೇಷ ಉಡುಗೊರೆ ಇದು.!ಡಿ-ಬಾಸ್ ಜನ್ಮದಿನಕ್ಕೆ ಅಭಿಮಾನಿಗಳು ನೀಡುತ್ತಿರುವ ವಿಶೇಷ ಉಡುಗೊರೆ ಇದು.!

  ರಾಬರ್ಟ್ ಟೀಸರ್ ಬಿಟ್ಟರೆ 'ರಾಜವೀರ ಮದಕರಿ ನಾಯಕ' ಚಿತ್ರತಂಡ ಮೇಲೂ ನಿರೀಕ್ಷೆ ಇದೆ. ಮದಕರಿ ನಾಯಕನ ಹೊಸ ಪೋಸ್ಟರ್ ಬಂದರೂ ಬರಬಹುದು. ಅದಾದ ಬಳಿಕ ಡಿ ಬಾಸ್ ಕಾಲ್ ಶೀಟ್ ಕೊಟ್ಟಿರುವ ನಿರ್ಮಾಪಕರು ಹೊಸ ಪೋಸ್ಟರ್ ಅನೌನ್ಸ್ ಮಾಡಬಹುದು.

  ಮಿಲನ ಪ್ರಕಾಶ್, ಶೈಲಜಾ ನಾಗ್, ಮೆಜಿಸ್ಟಿಕ್ ನಿರ್ಮಾಪಕ ಎಂಜೆ ರಾಮಮೂರ್ತಿ ಅವರು ಡಿ ಬಾಸ್ ಸಿನಿಮಾ ಮಾಡೋದು ಖಚಿತವಾಗಿರುವುದರಿಂದ ತಮ್ಮ ಹೊಸ ಸಿನಿಮಾಗಳನ್ನು ಅಧಿಕೃತವಾಗಿ ಅನೌನ್ಸ್ ಮಾಡಬಹುದು.

  English summary
  Challenging star darshan celebrating 43rd birthday on february 16th. fans are very excited about his birthday. because, robert film teaser will release on that special occasion.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X