For Quick Alerts
  ALLOW NOTIFICATIONS  
  For Daily Alerts

  ಡಾ.ವಿಷ್ಣುವರ್ಧನ್ ಹೆಸರಿನಲ್ಲಿ 'ರಾಷ್ಟ್ರೀಯ ಉತ್ಸವ' ನಡೆಸುವ ಔಚಿತ್ಯವೇನು.?

  By Harshitha
  |

  ಸಾಹಸ ಸಿಂಹ ಡಾ.ವಿಷ್ಣುವರ್ಧನ್ ರವರ ನೆನಪಿನಲ್ಲಿ ಆಗಸ್ಟ್ 27 ರಂದು ದೆಹಲಿಯಲ್ಲಿ 'ರಾಷ್ಟ್ರೀಯ ಉತ್ಸವ' ನಡೆಸಲು ಡಾ.ವಿಷ್ಣು ಸೇನಾ ಸಮಿತಿ ಮುಂದಾಗಿದೆ. ಈಗಾಗಲೇ ಕಾರ್ಯಕ್ರಮಕ್ಕಾಗಿ ಪೂರ್ವ ತಯಾರಿ ಕೂಡ ಮಾಡಿಕೊಳ್ಳಲಾಗುತ್ತಿದೆ.

  ಅಷ್ಟಕ್ಕೂ, ಡಾ.ವಿಷ್ಣುವರ್ಧನ್ ಹೆಸರಿನಲ್ಲಿ ರಾಷ್ಟ್ರೀಯ ಉತ್ಸವ ನಡೆಸುವ ಔಚಿತ್ಯವೇನು ಎಂಬುದರ ಕುರಿತು ಸದ್ಯ ಚರ್ಚೆ ಎದ್ದಿದೆ. ಇದಕ್ಕೆ ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ರವರ ಬಳಿ ಸ್ಪಷ್ಟ ಉತ್ತರ ಕೂಡ ಇದೆ.

  ವಿಷ್ಣು ಸೇನಾ ಸಮಿತಿಯಿಂದ ದೆಹಲಿಯಲ್ಲಿ 'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ'

  ಡಾ.ವಿಷ್ಣುವರ್ಧನ್ ರವರು ಬದುಕಿದಷ್ಟು ಕಾಲ, ಅವರನ್ನು ಪ್ರೊಟೆಕ್ಟ್ ಮಾಡುವುದಾಯಿತೇ ಹೊರತು, ಪ್ರೊಜೆಕ್ಟ್ ಮಾಡುವ ಕೆಲಸಗಳು ಆಗಿರಲಿಲ್ಲ. 'ಅಭಿನಯ ಭಾರ್ಗವ' ಡಾ.ವಿಷ್ಣುವರ್ಧನ್ ರವರ ನಿಜವಾದ ಬದುಕಿನ ಅನಾವರಣ ಆಗಿರಲಿಲ್ಲ. ಸ್ಮಾರಕದ ವಿಷ್ಯದಲ್ಲಂತೂ ಸಹಿಸಲಾರದಷ್ಟು ಅವಮಾನಗಳಾಗಿವೆ.

  ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ರಾಷ್ಟ್ರೀಯ ಉತ್ಸವ ಅಗತ್ಯ ಎನ್ನುತ್ತಾರೆ ವೀರಕಪುತ್ರ ಶ್ರೀನಿವಾಸ್. ಡಾ.ವಿಷ್ಣುವರ್ಧನ್ ರವರ ಬದುಕು, ಸಾಧನೆಗಳನ್ನು ರಾಷ್ಟ್ರಮಟ್ಟದ ವೇದಿಕೆಯಲ್ಲಿ ಚರ್ಚೆಗೆ ಒಳಗಾಗಿಸಲಿದ್ದಾರೆ ವೀರಕಪುತ್ರ ಶ್ರೀನಿವಾಸ. ಈ ದಿಟ್ಟ ಹೆಜ್ಜೆಗೆ ಕೋಟ್ಯಾಂತರ ವಿಷ್ಣು ಅಭಿಮಾನಿಗಳು ಸಾಥ್ ನೀಡಿದ್ದಾರೆ.

  English summary
  Veerakaputra Srinivas, State President, Vishnu Sena Samithi gives explanation regarding the need for 'Dr Vishnuvardhan Raashtriya Utsava' which is scheduled on August 27th in Delhi

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X