Darshan-Dhruva: ದರ್ಶನ್-ಧ್ರುವ ಸರ್ಜಾ ಮುನಿಸಿನ ಹಿಂದಿದೆ 'ಪ್ರೇಮ ಬರಹ', 'ಖಾಕಿ'.. ಇಬ್ಬರ ನಡುವೆ ನಡೆದಿದ್ದೇನು?

By ಫಿಲ್ಮಿಬೀಟ್ ಡೆಸ್ಕ್

ಯಾವುದೇ ಚಿತ್ರರಂಗದಲ್ಲಿ ಎರಡು ಕುಟುಂಬಗಳ ನಡುವೆ, ಇಬ್ಬರು ತಾರೆಯರ ನಡುವೆ ವೈಮಸ್ಸು ಇದ್ದೇ ಇರುತ್ತೆ. ಅದು ಜಗತ್ತಿಗೂ ಗೊತ್ತಿರುತ್ತೆ. ಆದರೆ, ಇಬ್ಬರೂ ಅದನ್ನು ಗೊತ್ತಿದ್ದೋ, ಗೊತ್ತಿಲ್ಲದೆಯೋ ಮುಚ್ಚಿಡುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಹಾಗಂತ ಈ ವೈಮನಸ್ಸು ಕೂಡ ಶಾಶ್ವತವೇನೂ ಅಲ್ಲ. ಯಾವಾಗ ಬೇಕಾದರೂ ಮತ್ತೆ ಒಂದಾಗುತ್ತಾರೆ.

ಕೆಲವು ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ ಹಾಗೂ ಧ್ರುವ ಸರ್ಜಾ ಮುನಿಸೇ ಹಾಟ್ ಟಾಪಿಕ್ ಆಗಿಬಿಟ್ಟಿದೆ. ಇಂದಿಗೂ ಇವರಿಬ್ಬರ ನಡುವಿನ ವೈಮನಸ್ಸಿಗೆ ಏನು ಕಾರಣ ಅಂತ ಹುಡುಕುತ್ತಲೇ ಇದ್ದಾರೆ. ಅದಕ್ಕೆ ಒಂದಲ್ಲ ಮೂರ್ನಾಲ್ಕು ಕಾರಣಗಳಿವೆ ಎನ್ನುತ್ತಿವೆ ಮೂಲಗಳು.

dhruva-sarja-darshan-fight-reason

ಎರಡು ಹೇಳಿಕೆಗಳು, ಎರಡು ಸಂದರ್ಭಗಳಿಂದ ದರ್ಶನ್ ಹಾಗೂ ಧ್ರುವ ನಡುವಿನ ಮುನಿಸಿಗೆ ಕಾರಣವೇನು? ಅವರ ಅಭಿಮಾನಿಗಳೇ ತಲೆಕೆಡಿಸಿಕೊಂಡಿದ್ದಾರೆ. ಅದಕ್ಕೆ ಚಿತ್ರರಂಗದ ಮೂಲಗಳು ಕೊಡುವ ಕಾರಣಗಳು ಎರಡು ಸಿನಿಮಾಗಳ ಕಡೆಗೆ ಕರೆದುಕೊಂಡು ಹೋಗುತ್ತವೆ. ಅಷ್ಟಕ್ಕೂ ದೋಸ್ತಿಗಳಾಗಿದ್ದವರು ಈಗ ಬೇರೆಯಾಗಿದ್ದೇಕೆ? ತಿಳಿಯುವುದಕ್ಕೆ ಮುಂದೆ ಓದಿ..

ಮೂರು ಪ್ರಶ್ನೆಗಳ ಹೇಳಿಕೆಯ ಗುಟ್ಟೇನು?

ಕಾವೇರಿ ಬಂದ್ ಸಮಯದಲ್ಲಿ ಶಿವಣ್ಣನೊಂದಿಗೆ ಧ್ರುವ ಸರ್ಜಾ ಕೂತಿದ್ದರು. ಇತ್ತ ದರ್ಶನ್ ವೇದಿಕೆ ಮೇಲೆ ಬರುತ್ತಿದ್ದಂತೆ ಧ್ರುವ ಸರ್ಜಾ ಅಲ್ಲಿಂದ ಹೊರಟು ಹೋಗಿದ್ದರು. ವೇದಿಕೆ ಮೇಲೆ ಒಟ್ಟಿಗೆ ಕಂಡರೂ ಮಾತಾಡುಕೊಂಡಿರಲಿಲ್ಲ. ಅದೇ ಹುಟ್ಟುಹಬ್ಬದ ಸಮಯದಲ್ಲಿ "ದರ್ಶನ್ ಸರ್‌ಗೆ ಮೂರು ಪ್ರಶ್ನೆಗಳನ್ನು ಕೇಳಬೇಕು. ಅದು ಉತ್ತರ ಸಿಕ್ಕ ಮೇಲೆ ನನಗೊಂದು ಕ್ಲಾರಿಟಿ ಸಿಗುತ್ತೆ. ನಮಗೂ ಒಂದು ಸೆಲ್ಫ್‌ ರೆಸ್ಪೆಕ್ಟ್ ಅಂತ ಇರುತ್ತೆ" ಎಂದು ಹೇಳಿದ್ದರು. ಅಲ್ಲಿಂದ ಇಬ್ಬರು ನಡುವೆ ಏನೋ ನಡೆದಿದೆ ಅನ್ನೋ ಖಾತರಿಯಾಗಿತ್ತು. ಅಸಲಿಗೆ ಇಬ್ಬರ ನಡುವೆ ಅಂತಹದ್ದೇನಾಗಿತ್ತು.

ಘಟನೆ 1: 'ಪ್ರೇಮ ಬರಹ' ವಿತರಣೆ

ಅರ್ಜುನ್ ಸರ್ಜಾ ನಿರ್ದೇಶಿಸಿದ 'ಪ್ರೇಮ ಬರಹ' ಸಿನಿಮಾದಲ್ಲಿ ದರ್ಶನ್ ವಿಶೇಷವಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ಈ ಸಿನಿಮಾದಿಂದಲೇ ಇವರಿಬ್ಬರ ನಡುವಿನ ವೈಮನಸ್ಸು ಶುರುವಾಗಿತ್ತು. ಆಗ ದರ್ಶನ್‌ಗೆ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ್ ಈ ಸಿನಿಮಾ ವಿತರಣೆಗೆ ಮುಂದಾಗಿದ್ದರು. ಆದರೆ, ಸಿನಿಮಾದಿಂದ ಅಷ್ಟಾಗಿ ಲಾಭ ಬಂದಿರಲಿಲ್ಲ. ಈ ವೇಳೆ ಮಲ್ಲಿಕಾರ್ಜುನ್ ಸಾಲದ ಸುಳಿಗೆ ಸಿಲುಕಿ ಚಿತ್ರರಂಗದಿಂದ ದೂರವಾಗಿದ್ದರು. ಇಲ್ಲಿಂದ ಅರ್ಜುನ್ ಸರ್ಜಾ, ದರ್ಶನ್ ಹಾಗೂ ಧ್ರುವ ಸರ್ಜಾ ನಡುವೆ ಬಿರುಕು ಬಿಡುವುದಕ್ಕೆ ಆರಂಭ ಆಗಿತ್ತು. ಕೋಟಿ ಕೋಟಿ ಹಣದ ವ್ಯವಹಾರ ಎರಡೂ ಕುಟುಂಬಕ್ಕೆ ಕಂಟಕವಾಗಿತ್ತು ಎಂದು ಚಿತ್ರರಂಗದ ಬಲ್ಲ ಮೂಲಗಳು ಹೇಳುತ್ತಿವೆ.

dhruva-sarja-darshan-fight-reason

ಘಟನೆ 2: 'ಖಾಕಿ'ನಾ? ಇಲ್ಲ 'ಶಿವಾರ್ಜುನ'ನಾ?

ಇನ್ನೊಂದು ಮೂಲದ ಪ್ರಕಾರ, ಚಿರಂಜೀವಿ ಸರ್ಜಾ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಒಂದು 'ಖಾಕಿ' ಇನ್ನೊಂದು 'ಶಿವಾರ್ಜುನ'. ಸಿನಿಮಾ ಸೆಟ್ಟೇರಿದ್ದನ್ನು ಗಮನದಲ್ಲಿಟ್ಟುಕೊಂಡರೆ 'ಶಿವಾರ್ಜುನ' ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, 'ಖಾಕಿ'ಗೆ ಮೊದಲ ರಿಲೀಸ್ ಆಗಬೇಕು ಅಂತ ಕೆಲವರ ಆಸೆಯಾಗಿತ್ತು. ಅದ್ಯಾರು? ಯಾಕೆ? ಒತ್ತಡ ಹೇರಿದರು ಅನ್ನೋ ಗುಟ್ಟುಬಿಟ್ಟುಕೊಟ್ಟಿಲ್ಲ. ಈ ಮಧ್ಯೆ 'ಶಿವಾರ್ಜುನ' ಸಿನಿಮಾವನ್ನು ಸರ್ಜಾ ಕುಟುಂಬದ ಮ್ಯಾನೇಜರ್ ಶಿವಾರ್ಜುನ ಅವರೇ ನಿರ್ಮಾಣ ಮಾಡುತ್ತಿದ್ದರು. ಈ ಎರಡು ಸಿನಿಮಾಗಳ ಬಿಡುಗಡೆ ವಿಚಾರಕ್ಕೆ ಏನೋ ಗಲಾಟೆ ನಡೆದಿತ್ತು ಎಂದು ಹೇಳುತ್ತಿವೆ.

ದರ್ಶನ್‌ಗೂ ಇದಕ್ಕೂ ಏನು ಸಂಬಂಧ?

'ಪ್ರೇಮ ಬರಹ' ವಿತರಣೆ ವೇಳೆ ದರ್ಶನ್ ಅವರ ಆಪ್ತ ಸಹಾಯಕರಾಗಿದ್ದ ಮಲ್ಲಿಕಾರ್ಜುನ್ ವಿತರಣೆ ಹಣವನ್ನು ಹಿಂತಿರುಗಿಸಿಲ್ಲ. ಈ ಕಾರಣಕ್ಕೆ ಅರ್ಜುನ್ ಸರ್ಜಾ ಮುನಿಸಿಕೊಂಡಿದ್ದರು ಅನ್ನೋ ಮಾತು ಕೇಳಿ ಬರುತ್ತಿದೆ. ಅದೇ 'ಖಾಕಿ' ಹಾಗೂ 'ಶಿವಾರ್ಜುನ' ರಿಲೀಸ್ ವಿಚಾರಣೆ ವೇಳೆ ದರ್ಶನ್ ಮಧ್ಯೆ ಪ್ರವೇಶ ಮಾಡಿದ್ದರು. ಅದು ಸರ್ಜಾ ಕುಟುಂಬಕ್ಕೆ ಬೇಸರ ತರಿಸಿದೆ. ಅದಕ್ಕೆ ಇಷ್ಟೆಲ್ಲ ನಡೆಯುತ್ತಿದೆ ಅನ್ನೋ ಮಾತು ಹೇಳಿ ಬರುತ್ತೆ.

ಆ ಮೂರು ಪ್ರಶ್ನೆಗಳು ಇವೆನಾ?

ದರ್ಶನ್ ಹಾಗೂ ಧ್ರುವ ಸರ್ಜಾ ವೈಮನಸ್ಸಿಗೆ ಇವೇ ಕಾರಣಗಳು ಅಂತ ಮೂಲಗಳು ಹೇಳುತ್ತಿವೆ. ಆದರೆ, ದರ್ಶನ್ ಆಗಲಿ, ಧ್ರುವ ಸರ್ಜಾ ಆಗಲಿ ಈ ಬಗ್ಗೆ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಹೀಗಾಗಿ ಇವರಿಬ್ಬರು ಮುನಿಸಿಗೆ ಕಾರಣಗಳು ಇವೇನಾ? ಅನ್ನೋದಕ್ಕೆ ಕ್ಲಾರಿಟಿ ಇಲ್ಲ. ದರ್ಶನ್, ಧ್ರುವ ನಡುವಿನ ಮುನಿಸು ಬಹಿರಂಗಗೊಂಡ ಬಳಿಕ ಇಂತಹ ಸುದ್ದಿಗಳು ಸ್ಯಾಂಡಲ್‌ವುಡ್‌ನಲ್ಲಿ ಓಡಾಡುತ್ತಿದೆ.

More from Filmibeat

English summary
What is the real reason for the fight between Darshan and Dhruva Sarja
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X