For Quick Alerts
  ALLOW NOTIFICATIONS  
  For Daily Alerts

  ಮುನಿರತ್ನ ಪರ ನಟ ದರ್ಶನ್ ಪ್ರಚಾರ ಮಾಡೋದಕ್ಕೆ ಅದೊಂದೇ ಕಾರಣ!

  |

  ಒಟ್ಟಿಗೆ ಕುರುಕ್ಷೇತ್ರ ಸಿನಿಮಾ ಮಾಡಿರಬಹುದು ಆದರೆ, ಮಂಡ್ಯ ಚುನಾವಣೆಯಲ್ಲಿ ನಟ ದರ್ಶನ್ ಮತ್ತು ನಿರ್ಮಾಪಕ ಮುನಿರತ್ನ ಬೇರೆ ಬೇರೆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು. ಈಗ ನೋಡಿದ್ರೆ ಆರ್‌ಆರ್ ನಗರ ಉಪಚುನಾವಣೆಯಲ್ಲಿ ಮುನಿರತ್ನ ಅವರ ಪರವೇ ನಟ ದರ್ಶನ್ ಪ್ರಚಾರಕ್ಕಿಳಿದ್ದಾರೆ ಎಂಬ ಚರ್ಚೆ ಆರಂಭವಾಗುತ್ತಿದೆ.

  ಮುನಿರತ್ನ ಈ ದೊಡ್ಡ ಗುಣಕ್ಕೆ ನಾನು ಅವರ ಬೆಂಬಲಕ್ಕೆ ನಿಂತಿದ್ದೇನೆ | Filmibeat Kannada

  ದರ್ಶನ್ ಜೊತೆ ದೊಡ್ಡ ಸಿನಿಮಾಗಳನ್ನು ಮಾಡುವ ನಿರ್ಮಾಪಕ ಎಂಬ ಕಾರಣಕ್ಕೆ ಈ ಪ್ರಚಾರ ಮಾಡುತ್ತಿರಬಹುದು.....ದರ್ಶನ್ ಹಾಗೂ ಮುನಿರತ್ನ ಅವರು ಒಂದೇ ಸಮುದಾಯ ಎಂಬ ಕಾರಣಕ್ಕೆ ಈ ಪ್ರಚಾರ ಮಾಡುತ್ತಿರಬಹುದು...ಎಂಬ ಮಾತುಗಳ ಸಹ ಕೇಳಿ ಬರುತ್ತಿದೆ. ಆದ್ರೆ, ಈ ಕುರಿತು ದರ್ಶನ್ ಹೇಳೋದೆ ಬೇರೆ. ಒಂದೇ ಒಂದು ಕಾರಣಕ್ಕೆ ಮುನಿರತ್ನ ಪರ ಡಿ ಬಾಸ್ ಪ್ರಚಾರಕ್ಕೆ ತೆರಳಿದ್ದಾರಂತೆ. ಏನದು? ಮುಂದೆ ಓದಿ.....

  ಆರ್‌ಆರ್‌ ನಗರ 'ಕುರುಕ್ಷೇತ್ರ' ಅಖಾಡಕ್ಕೆ ಶುಕ್ರವಾರ 'ಸುಯೋಧನ' ದರ್ಶನ್ ಎಂಟ್ರಿಆರ್‌ಆರ್‌ ನಗರ 'ಕುರುಕ್ಷೇತ್ರ' ಅಖಾಡಕ್ಕೆ ಶುಕ್ರವಾರ 'ಸುಯೋಧನ' ದರ್ಶನ್ ಎಂಟ್ರಿ

  ದರ್ಶನ್‌ಗೆ ವ್ಯಕ್ತಿ ಮಾತ್ರ ಮುಖ್ಯ!

  ದರ್ಶನ್‌ಗೆ ವ್ಯಕ್ತಿ ಮಾತ್ರ ಮುಖ್ಯ!

  ಚಾಲೆಂಜಿಂಗ್ ದರ್ಶನ್ ಅವರು ಈ ಹಿಂದೆ ಪ್ರಚಾರ ಮಾಡಿದ ಸಂದರ್ಭಗಳಲ್ಲಿಯೂ ಇದೇ ಹೇಳಿದ್ದಾರೆ. ''ನಾನು ಯಾವತ್ತೂ ಪಕ್ಷ ನೋಡಿ ಪ್ರಚಾರ ಮಾಡಲ್ಲ, ವ್ಯಕ್ತಿ ನೋಡಿ ಪ್ರಚಾರ ಮಾಡ್ತೇನೆ. ಅವರ ಮಾಡಿರುವ ಒಳ್ಳೆಯ ಕೆಲಸಗಳಿಗಾಗಿ ನಾನು ಪ್ರಚಾರ ಮಾಡ್ತೇನೆ'' ಎಂದು ಹೇಳ್ತಾರೆ. ಮುನಿರತ್ನ ವಿಚಾರದಲ್ಲೂ ದರ್ಶನ್ ಅದನ್ನು ಹೇಳಿದ್ದಾರೆ.

  ಮುನಿರತ್ನ ಪರ ಪ್ರಚಾರ ಮಾಡಲು ಅದೊಂದೇ ಕಾರಣ

  ಮುನಿರತ್ನ ಪರ ಪ್ರಚಾರ ಮಾಡಲು ಅದೊಂದೇ ಕಾರಣ

  ರಾಜರಾಜೇಶ್ವರಿ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ಮಾಡುವುದಕ್ಕೂ ಮುಂಚೆ ಮಾಧ್ಯಮಗಳ ಜೊತೆ ಮಾತನಾಡಿದ ದರ್ಶನ್, ''ಕೊರೊನಾ ಸಮಯದಲ್ಲಿ ಇಡೀ ಜಗತ್ತು ಸಂಕಷ್ಟದಲ್ಲಿತ್ತು. ಇಂತಹ ಸಮಯದಲ್ಲಿ ಮುನಿರತ್ನ ಅವರು ಸಾವಿರಾರು ಜನಕ್ಕೆ ದಾಸೋಹ ಮಾಡಿದ್ದಾರೆ. ಕಷ್ಟ ಸಮಯದಲ್ಲಿ ಅವರು ಮಾಡಿದ ಈ ಮಾನವೀಯತೆಯ ಕೆಲಸಕ್ಕಾಗಿ ನಾನು ಪ್ರಚಾರ ಮಾಡ್ತೇನೆ ಅಷ್ಟೇ'' ಎಂದು ಸ್ಪಷ್ಟನೆ ನೀಡಿದ್ದಾರೆ.

  ನಿಖಿಲ್ ಬಗ್ಗೆ ದರ್ಶನ್ ಮಾತು

  ನಿಖಿಲ್ ಬಗ್ಗೆ ದರ್ಶನ್ ಮಾತು

  ಕಾಕತಾಳೀಯ ಅಂದ್ರೆ ಮಂಡ್ಯದಲ್ಲಿ ದರ್ಶನ್ ಪ್ರಚಾರ ಮಾಡಿದಾಗಲೂ ನಿಖಿಲ್ ಕುಮಾರ್ ಎದುರಾಳಿ ಪಕ್ಷದಲ್ಲಿದ್ದರು. ಆರ್‌ಆರ್ ನಗರದಲ್ಲೂ ಎದುರಾಳಿ ಪಕ್ಷದ ಯುವನಾಯಕರಾಗಿದ್ದಾರೆ. ಈ ಕುರಿತು ಮಾತನಾಡಿದ ದರ್ಶನ್ ''ನಿಖಿಲ್ ಅವರ ಪಕ್ಷದ ಪರವಾಗಿ ಕೆಲಸ ಮಾಡ್ತಿದ್ದಾರೆ, ನಾನು ವ್ಯಕ್ತಿಯ ಪರ ಪ್ರಚಾರ ಮಾಡ್ತಿದ್ದೇನೆ ಅಷ್ಟೇ'' ಎಂದರು.

  ದರ್ಶನ್ ಯಾವುದೇ ಪಕ್ಷದ ಜೊತೆ ಗುರುತಿಸಿಕೊಂಡಿಲ್ಲ

  ದರ್ಶನ್ ಯಾವುದೇ ಪಕ್ಷದ ಜೊತೆ ಗುರುತಿಸಿಕೊಂಡಿಲ್ಲ

  ನಟ ದರ್ಶನ್ ಈ ಹಿಂದೆ ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆ ಸಂದರ್ಭಗಳಲ್ಲಿ ಹಲವರ ಪರ ಪ್ರಚಾರ ಮಾಡಿದ್ದಾರೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾರೆ. ಅಷ್ಟೇ ಏಕೆ ದರ್ಶನ್ ಅವರ ತಾಯಿ ಮೀನಾ ತೂಗುದೀಪ್ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಆದರೂ ದರ್ಶನ್ ಅವರು ಯಾವುದೇ ಪಕ್ಷದ ಜೊತೆ ಗುರುತಿಸಿಕೊಂಡಿಲ್ಲ, ವ್ಯಕ್ತಿ ಮಾತ್ರ ಮುಖ್ಯ ಎಂಬ ಕಾನ್ಸೆಪ್ಟ್ ಹಿಂದೆ ಹೋಗುತ್ತಿದ್ದಾರೆ.

  English summary
  Challenging star darshan campaigning for Rajarajeshwari nagar BJP Candidate Munirathna. but, What is the Reason behind D Boss campaign for Munirathna?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X