»   » ಸಮಂತಾ ಬಟ್ಟೆ ಕದ್ದುಬಿಟ್ರಾ ವಿಶ್ವ ಸುಂದರಿ ಮಾನುಷಿ .?

ಸಮಂತಾ ಬಟ್ಟೆ ಕದ್ದುಬಿಟ್ರಾ ವಿಶ್ವ ಸುಂದರಿ ಮಾನುಷಿ .?

Posted By:
Subscribe to Filmibeat Kannada

'ಮಾನುಷಿ ಚಿಲ್ಲರ್' ಸದ್ಯ ಭಾರತದ ಹೆಮ್ಮೆ, ಸಾಕಷ್ಟು ವರ್ಷಗಳ ನಂತ್ರ 'ಮಿಸ್ ವರ್ಲ್ಡ್' ಕಿರೀಟವನ್ನ ಮುಡಿಗೇರಿಸಿಕೊಂಡ ಭಾರತದ ಕುವರಿ.

ಸದ್ಯ ಭಾರತದ ಮೂಲೆ ಮೂಲೆಯಲ್ಲೂ 'ಮಾನುಷಿ ಚಿಲ್ಲರ್' ಬಗ್ಗೆಯೇ ಸುದ್ದಿ. ಆದ್ರೆ' ಟಾಲಿವುಡ್' ಮಂದಿ ಮಾತ್ರ ಮಾನುಷಿ ಚಿಲ್ಲರ್ ಅವ್ರನ್ನ ಅನುಮಾನದಿಂದ ನೋಡ್ತಿದ್ದಾರಂತೆ. ನಟಿ 'ಸಮಂತಾ' ಹಾಗೂ ಮಾನುಷಿ ಚಿಲ್ಲರ್ ಇಬ್ಬರಿಗೂ ಏನೋ ಸಂಬಂಧ ಇದೆ ಅನ್ನೋ ಅನುಮಾನಗಳು ಟಾಲಿವುಡ್ ಸಿನಿಮಾರಂಗದಲ್ಲಿ ಹರಿದಾಡ್ತಿದೆ.

 What is the relation between Samantha and Manushi Chhillar

ಸೌತ್ ಸಿನಿಮಾ ಬೆಡಗಿಗೂ ಮಿಸ್ ಇಂಡಿಯಾ ಸುಂದರಿಗೂ ಏನು ಸಂಬಂಧ ಅನ್ನೋದು ಟಿಟೌನ್ ಮಂದಿಯ ನಿದ್ರೆ ಕೆಡಿಸಿದೆ.

'ಮಾನುಷಿ ಚಿಲ್ಲರ್' ಮಿಸ್ ವರ್ಲ್ಡ್ ಕಿರೀಟ ಧರಿಸುವಾಗ ಹಾಕಿದ್ದ 'ಗೌನ್' ಸಮಂತಾಳದ್ದು ಅನ್ನೋದು ಟಾಲಿವುಡ್ ಸಿನಿಮಾರಂಗದಲ್ಲಿ ಸದ್ಯ ಸೌಂಡ್ ಮಾಡ್ತಿರೋ ಸುದ್ದಿ. ಯಾಕಂದ್ರೆ 'ಸಮಂತಾ' ತನ್ನ ರಿಸೆಪ್ಷನ್ ನಲ್ಲಿ ಹಾಕಿದ್ದ ಗೌನ್ ಹಾಗೂ ಮಾನುಷಿ ಚಿಲ್ಲರ್ ಹಾಕಿದ್ದ 'ಗೌನ್' ಒಂದೇ ರೀತಿ ಇದೆ. ಇದನ್ನ ನೋಡಿರೋ ಸಮಂತಾ ಫ್ಯಾನ್ಸ್ ವಿಶ್ವ ಸುಂದರಿ, ನಮ್ ಬ್ಯೂಟಿ ಡ್ರೆಸ್ ನ ಕದ್ದಿದ್ದಾರೆ ಅಂತ ಗಾಸಿಪ್ ಮಾಡಿದ್ದಾರೆ.

ಈ ಸುದ್ದಿ ವೈರಲ್ ಆಗ್ತಾ ಇದ್ದಂತೆ, ಅದು ಹೇಗೆ ಸಾಧ್ಯ ಅನ್ನೋದನ್ನ ಚೆಕ್ ಮಾಡಿದ ನಂತ್ರ ತಿಳಿದಿರೋದು ಸಮಂತಾ ರಿಸೆಪ್ಷನ್ ಗೆ 'ಗೌನ್' ಡಿಸೈನ್ ಮಾಡಿದ ಡಿಸೈನರ್ ಅವ್ರೇ ಮಾನುಷಿ ಚಿಲ್ಲರ್ ಅವ್ರ ಮಿಸ್ ವರ್ಲ್ಡ್ ಸಮಾರಂಭಕ್ಕೂ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಇದೇ ಕಾರಣಕ್ಕೆ ಎರಡೂ ಗೌನ್ ಗಳು ಒಂದೇ ರೀತಿ ಹೋಲಿಕೆ ಆಗಿದೆ. ಆದ್ರೆ ಗೌನ್ ಮೊದಲು ಧರಿಸಿದ್ದು ಸ್ಯಾಮ್ ಆಗಿರೋದ್ರಿಂದ ಮಿಸ್ ಇಂಡಿಯಾ ಕೂಡ ಸಮಂತಾಳ ಸ್ಟೈಲ್ ಅನ್ನ ಕಾಪಿ ಮಾಡ್ತಿದ್ದಾರೆ ಅಂತ ಸಮಂತಾಳ ಅಭಿಮಾನಿಗಳು ಸಂತಸ ಪಡ್ತಿದ್ದಾರೆ.

English summary
What is the relation between Tollywood Actress Samantha and Miss World Manushi Chhillar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada