'ವಿಲನ್' ಚಿತ್ರದಲ್ಲಿ ಸುದೀಪ್ ಮತ್ತು ಶಿವಣ್ಣನ ಪಾತ್ರಗಳ ಬಗ್ಗೆ ಸುಳಿವು ನೀಡಿದ ಕಿಚ್ಚ
Recommended Video

'ಕಟ್ಟಪ್ಪ ಬಾಹುಬಲಿಯನ್ನ ಯಾಕೆ ಕೊಂದ'.....? ಇದು ಚಿತ್ರಪ್ರೇಮಿಗಳನ್ನ ಕಾಡಿದ್ದ ಬಹುದೊಡ್ಡ ಪ್ರಶ್ನೆ. ಬಹುಶಃ ಇದನ್ನ ಬಿಟ್ಟರೇ ಈಗ ಅಷ್ಟು ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗಿರುವುದು 'ವಿಲನ್ ಯಾರು.?' ಎನ್ನುವುದು.
'ದಿ ವಿಲನ್' ಅಂತ ಶೀರ್ಷಿಕೆ ಇಟ್ಟು ಸಿನಿಮಾ ಮಾಡಿದ್ದಾರೆ. ಸುದೀಪ್ ಮತ್ತು ಶಿವಣ್ಣ ಇಬ್ಬರು ಸ್ಟಾರ್ ನಟರು ನಾಯಕರು. ಚಿತ್ರದಲ್ಲಿ ಇವರಿಬ್ಬರ ಪಾತ್ರವೇನು ಎಂಬುದು ಕುತೂಹಲ. ಅದೇ ರೀತಿ ಚಿತ್ರದಲ್ಲಿ ಸುದೀಪ್ ಮತ್ತು ಶಿವಣ್ಣ ನಡುವಿನ ಸಂಬಂಧವೇನು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.
ಹಲವು ಮಂದಿ ಹಲವು ರೀತಿಯಲ್ಲಿ ಊಹಿಸುತ್ತಿದ್ದಾರೆ. ಇವರಿಬ್ಬರ ಸಂಬಂಧದ ಬಗ್ಗೆ ನಾಲ್ಕೈದು ಆಯ್ಕೆಗಳು ಕಣ್ಮುಂದೆ ಬರ್ತಿದೆ. ಆದ್ರೆ, ಇದೆಲ್ಲವನ್ನ ಸೈಡಿಗೆ ತಳ್ಳಿದ ಕಿಚ್ಚ ಸುದೀಪ್ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ. ಅಷ್ಟಕ್ಕೂ, ದಿ ವಿಲನ್ ಸಿನಿಮಾದಲ್ಲಿ ಸುದೀಪ್ ಮತ್ತು ಶಿವಣ್ಣನ ಸಂಬಂಧವೇನು.?

ಸಹೋದರರ ಸವಾಲ್
ಈಗಾಗಲೇ ನಿರ್ದೇಶಕ ಪ್ರೇಮ್ ಹೇಳಿಕೊಂಡಿರುವಂತೆ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಮನಮಿಡಿಯುವಂತಹ ತಾಯಿ ಸೆಂಟಿಮೆಂಟ್ ಇಡಲಾಗಿದೆಯಂತೆ. ಹಾಗ್ನೋಡಿದ್ರೆ, ಸುದೀಪ್ ಮತ್ತು ಶಿವಣ್ಣ ಇಬ್ಬರು ಒಂದೇ ತಾಯಿಯ ಮಕ್ಕಳು ಇರಬಹುದು. ತಾಯಿಗಾಗಿ ಅಣ್ಣ ಮತ್ತು ತಮ್ಮ ಹೋರಾಟ ಮಾಡಬಹುದು.

ಅಂಡರ್ ವರ್ಲ್ಡ್
ಸದ್ಯ ಬಿಡುಗಡೆಯಾಗಿರುವ ಟೀಸರ್ ಗಳನ್ನ ಗಮನಿಸಿದ್ರೆ, ದಿ ವಿಲನ್ ಸಿನಿಮಾ ಹಂಟಿಂಗ್ ಕಥೆ ಎನಿಸುತ್ತಿದೆ. ಪರಸ್ಪರ ಸುದೀಪ್ ಮತ್ತು ಶಿವಣ್ಣ ಎದುರಾಳಿಗಳಂತೆ ಹುಡುಕುತ್ತಾ ಹೊರಟಿದ್ದಾರೆ. ಅಂಡರ್ ವರ್ಲ್ಡ್ ಸುತ್ತಾ ಕಥೆ ಮಾಡಲಾಗಿದ್ದು, ಜಗತ್ತಿನಲ್ಲಿ ಅಧಿಪತ್ಯ ಸಾಧಿಸಲು ಇಬ್ಬರು ಕಾದಾಡಬಹುದು.

ಕಳ್ಳ-ಪೊಲೀಸ್ ಆಟ
ಬಹುಶಃ 'ವಿಲನ್' ಸಿನಿಮಾ ಕಳ್ಳ ಮತ್ತು ಪೊಲೀಸ್ ನಡುವಿನ ಕಥೆ ಇರಬಹುದು. ಸುದೀಪ್ ಅಥವಾ ಶಿವಣ್ಣ ಇಬ್ಬರಲ್ಲಿ ಒಬ್ಬರ ಕಳ್ಳ, ಮತ್ತೊಬ್ಬರು ಪೊಲೀಸ್ ಇರಬಹುದು. ಕಳ್ಳನನ್ನು ಹಿಡಿಯಲು ಕಳ್ಳನ ರೀತಿಯಲ್ಲೇ ವೇಷ ತೊಟ್ಟು ಹುಡುಕಬಹುದು.

ಇದ್ಯಾವುದು ಅಲ್ಲ ಎಂದ ಸುದೀಪ್
ಈ ಎಲ್ಲಾ ಆಯ್ಕೆಗಳನ್ನ ಗಮನಿಸಿದ ಕಿಚ್ಚ ಸುದೀಪ್ ಇದ್ಯಾವುದು ಅಲ್ಲ ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ. ಅಣ್ಣ-ತಮ್ಮ, ಕಳ್ಳ-ಪೊಲೀಸ್, ಅಂಡರ್ ವರ್ಲ್ಡ್ ಇದನ್ನ ಹೊರತುಪಡಿಸಿದ ಚಿತ್ರಕಥೆ ಮಾಡಲಾಗಿದೆ ಅಂದ್ರೆ ನಿಜಕ್ಕೂ ವಿಶೇಷವಾಗಿರಬಹುದು.


Click it and Unblock the Notifications











