»   » ರಾಕಿಂಗ್ ಸ್ಟಾರ್ ಯಶ್ ಗೆಲುವಿನ ರಹಸ್ಯ ಮಂತ್ರ

ರಾಕಿಂಗ್ ಸ್ಟಾರ್ ಯಶ್ ಗೆಲುವಿನ ರಹಸ್ಯ ಮಂತ್ರ

By: ಜೀವನರಸಿಕ
Subscribe to Filmibeat Kannada

ಈಗ ಕನ್ನಡ ಸಿನಿಪ್ರೇಮಿಗಳ ಮನಸ್ಸನ್ನ ಗೆದ್ದಿರೋ ರಾಕಿಂಗ್ ರಾಮಾಚಾರಿಯದ್ದೇ ಚರ್ಚೆ. ಸೂಪರ್ ಸ್ಟಾರ್ ಗಳೇ ಗೆಲ್ಲೋಕೆ ಒದ್ದಾಡ್ತಿರೋ ದಿನಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಬ್ಯಾಕ್ ಟು ಬ್ಯಾಕ್ ಗೆಲ್ತಿರೋದ್ರ ಹಿಂದಿರೋ ಸೀಕ್ರೇಟ್ ಏನು ಅನ್ನೋ ಕುತೂಹಲ ಎಲ್ಲರಿಗೂ ಇದೆ.

ಸತತ ಐದು ಹಿಟ್ ಸಿನಿಮಾಗಳನ್ನ ಕೊಡೋದು ಅಂದ್ರೆ ತಮಾಷೇನಾ. ತಮಾಷೇನೇ ಅಲ್ಲ. ಒಂದು ಹಿಟ್ ಕೊಟ್ಟು ಎರಡನೇಯ ಸಿನಿಮಾದಲ್ಲೇ ಸೂಪರ್ ಸ್ಟಾರ್ ಅಂತ ಮೆರೆದಾಡೋ ಸ್ಟಾರ್ ಗಳಿಗಿಂತ ಯಶ್ ಭಿನ್ನವಾಗಿ ನಿಲ್ತಾರೆ. ಯಶ್ ರನ್ನ ಸ್ಟಾರ್ ಮಾಡಿದ್ದು ಅವ್ರ ಇಂತಹಾ ಗುಣಗಳೇ.


ಯಶ್ ಹೇಳಿ ಕೇಳಿ ಯಾವುದೇ ಗಾಡ್ ಫಾದರ್ ಇಲ್ಲದೇ ಚಿತ್ರರಂಗಕ್ಕೆ ಬಂದವರು. ಯಶ್ ಎಷ್ಟೇ ಗೆದ್ದರೂ ಅವ್ರು ಬಾಗಿ ಬೆಂಡಾಗಿ ನಿಲ್ತಾರೆ. ಒಂದೇ ಸಿನಿಮಾಗೆ ಎಗರಿ ನಿಗುರಿ ನಿಲ್ಲೋ ಹೀರೋಗಳಿಗಿಂತ ಯಶ್ ರಲ್ಲಿರೋ ವಿನಯ ವಿಧೇಯತೆ ಎಂಥವರಿಗೂ ಇಷ್ಟವಾಗುತ್ತೆ. [ಎರಡನೇ ವರ್ಷವೂ ಸ್ಯಾಂಡಲ್ ವುಡ್ ಸುಲ್ತಾನ್ ಯಶ್]


What Is The Secret Behind Rocking Star Yash success?

ಸೆಟ್ ಗೆ ಬಂದ್ರೆ ತಾನೊಬ್ಬ ಸ್ಟಾರ್ ಅಂತ ಅಂದುಕೊಳ್ಳೋದೇ ಇಲ್ಲವಂತೆ ಈ ಮಂಡ್ಯದ ಹುಲಿ. ಸೆಟ್ ನಲ್ಲಿ ಡೈರೆಕ್ಟರ್ ಗೆ ಶರಣಾಗಿಬಿಡೋ ಯಶ್ ನಿರ್ದೇಶಕರ ನಟ ಅಂತಾನೇ ಫೇಮಸ್ ಆಗಿದ್ದಾರೆ.


ಅಭಿಮಾನಿಗಲು ಅಂದ್ರೆ ಯಶ್ ಗೆ ತುಂಬಾನೇ ಇಷ್ಟ. ತನ್ನನ್ನ ನೋಡೋಕೆ ದೂರದೂರಿಂದ ಬರೋ ಅಭಿಮಾನಿಗಳನ್ನ ತಾನೇ ಖುದ್ದಾಗಿ ಬಂದು ಮಾತನಾಡಿಸಿ ಆತ್ಮೀಯವಾಗಿ ಕಾಣೋ ಯಶ್ ಅಭಿಮಾನಿಗಳ ಕಷ್ಟಕ್ಕೆ ಮಿಡಿದ ಹಲವು ಉದಾಹರಣೆಗಳಿವೆ.


ನಾಲ್ಕು ಸಿನಿಮಾಗಳು ಸತತವಾಗಿ ಗೆದ್ರೂ ತನ್ನ ಸಿನಿಮಾ ಹೇಗಿದೆ ಅಂತ ಮಾಧ್ಯಮದವ್ರನ್ನ ಮಾತ್ನಾಡಿಸಿ ಅವ್ರಿಂದ ತಾನೇ ಅಭಿಪ್ರಾಯ ಪಡೆಯೋ ಯಶ್ ರ ವಿನಯಗುಣ ಎಲ್ಲರೂ ಮೆಚ್ಚುವಂತಾದ್ದು.


ಗೆಲವು ಸಿಕ್ಕ ಕೂಡಲೇ ಹತ್ತಿಬಂದ ಎಣಿಯನ್ನೇ ಒದೆಯೋ ಇವತ್ತಿನ ಕಾಲದಲ್ಲಿ ನಿಯತ್ತಿನ ವ್ಯಕ್ತಿಯಾಗಿ ನಿಲ್ಲೋ ಯಶ್ರ ಇಂತಹಾ ಗುಣಗಳೇ ಒಬ್ಬ ಸಾಮಾನ್ಯ ನಟನನ್ನ ಅತ್ಯುತ್ತಮ ನಟನನ್ನಾಗಿಸಿವೆ ಅನ್ನೋ ಮಾತುಗಳನ್ನ ಹೇಳ್ತಾರೆ ಯಶ್ರ ಅತಿ ಹೆಚ್ಚು ಸಿನಿಮಾಗಳನ್ನ ನಿರ್ಮಾಣ ಮಾಡಿ ಹೆಚ್ಚು ಸಿನಿಮಾದಲ್ಲಿ ಯಶಸ್ಸು ಕಂಡಿರೋ ನಿರ್ಮಾಪಕರ ಮಾತು.


ಸದ್ಯ 'ಮಾಸ್ಟರ್ ಪೀಸ್' ಸಿನಿಮಾ ಶೂಟಿಂಗ್ ಗೆ ಯಶ್ ರೆಡಿಯಾಗ್ತಿದ್ದಾರೆ. ಒಂದು ಸಿನಿಮಾ ಗೆದ್ದ ಕೂಡ್ಲೇ 5-6 ಸಿನಿಮಾ ಒಪ್ಪಿಕೊಳ್ಳೋ ನಟರ ನಡುವೆ, ಎರಡು ಮೂರು ವರ್ಷ ಡೇಟ್ಸ್ ಕೊಟ್ಟಿರೋ ನಟರ ನಡುವೆ ಒಂದು ಸಿನಿಮಾ ಮುಗಿದ ನಂತ್ರ ಮತ್ತೊಂದನ್ನ ಒಪ್ಪಿಕೊಳ್ಳೋದು ಯಶ್ ಗೆಲುವಿನ ಹಿಂದಿರೋ ಮತ್ತೊಂದು ಸೀಕ್ರೇಟ್.

English summary
What Is The Secret Behind Rocking Star Yash success? The actor is continuously given hit after hit films. Still now he has marked continuouly five hits in Sandalwood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada