ಕಿಚ್ಚ ಸುದೀಪ್ ಗೆ 'ದೊಡ್ಡ ಪಾಠ' ಕಲಿಸಿದ 'ಆ' ಸತ್ಯ ಘಟನೆ ಯಾವುದು?

By Harshitha

'ದುಡ್ಡಿದ್ದರೆ ಸಾಕು, ಇಡೀ ಜಗತ್ತನ್ನೇ ಗೆಲ್ಲಬಹುದು' ಎಂಬ ಭ್ರಮೆ ಕೆಲವರಿಗೆ ಇರಬಹುದು. ಆದ್ರೆ, ದುಡ್ಡೇ ಎಲ್ಲ ಅಲ್ಲ.! 'ದುಡ್ಡೇ ದೊಡ್ಡಪ್ಪ' ಆಗಿದ್ದರೂ, ಮಾನವೀಯತೆ, ಪ್ರೀತಿ ಅದರ ಅಪ್ಪ ಎಂಬುದನ್ನ ಯಾರೂ ಮರೆಯಬಾರದು.

ಅಷ್ಟಕ್ಕೂ, ದುಡ್ಡು, ಮಾನವೀಯತೆ ಮತ್ತು ಪ್ರೀತಿ ಬಗ್ಗೆ ನಾವು ಇಷ್ಟೆಲ್ಲಾ ಪೀಠಿಕೆ ಹಾಕಲು ಕಾರಣ ಕಿಚ್ಚ ಸುದೀಪ್.

ಸುದೀಪ್ ಗೆ ಏನು ಕಡಿಮೆ ಹೇಳಿ.? ಒಂದು ಸಿನಿಮಾಗೆ ಸುದೀಪ್ ತೆಗೆದುಕೊಳ್ಳುವ ಸಂಭಾವನೆ ಕೋಟಿ ದಾಟಿ ವರ್ಷಗಳೇ ಉರುಳಿವೆ. 'ಕೋಟ್ಯಾಧಿಪತಿ' ಆಗಿರುವ ಸುದೀಪ್ ಗೆ ಒಂದು ದಿನ ಪಾಠ ಕಲಿಸಿದ್ದು 'ಹಸಿವು'. [ಸುದೀಪ್ ಗೆ ಬಹಿರಂಗ ಕ್ಷಮೆ ಕೇಳಿದ ಸೂರಪ್ಪ ಬಾಬು! ಏನಿದು ವಿವಾದ?]

ತಮ್ಮ 'ನಿಜವಾದ' ಸಂಪಾದನೆ ಬಗ್ಗೆ ಸುದೀಪ್ ಗೆ ಮನವರಿಕೆ ಆದ 'ಆ' ಸತ್ಯ ಘಟನೆಯ ಸಂಪೂರ್ಣ ವಿವರ ಇಲ್ಲಿದೆ. ಸುದೀಪ್ ಮಾತುಗಳಲ್ಲೇ ಓದಿರಿ, ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ.....

ಒಂದಿನ....

ಒಂದಿನ....

''ಒಂದು ದಿನ ಒಂದು ಸಿಟಿಯಿಂದ ಇನ್ನೊಂದು ಸಿಟಿಗೆ ಪ್ರಯಾಣ ಮಾಡುತ್ತಿದ್ದೆ. ಹೊಟ್ಟೆ ಹಸಿವು ತುಂಬಾ ಆಗ್ತಿತ್ತು. ನನಗೆ ಸಾಮಾನ್ಯವಾಗಿ ಹೊಟ್ಟೆ ಹಸಿವು ಆಗುವುದು ಕಡಿಮೆ. ಹಸಿದಿದೆ ಅಂದ್ರೆ ತುಂಬಾ ಹಸಿದಿದೆ ಅಂತರ್ಥ'' - ಸುದೀಪ್ [ಕನ್ನಡ ಚಿತ್ರರಂಗದ ಇತಿಹಾಸದಲ್ಲೇ 'ಕೋಟಿ ಕಿಚ್ಚ'ನ ಹೊಸ ದಾಖಲೆ]

ಒಂದು ಹೋಟೆಲ್ ಕೂಡ ಇಲ್ಲ!

ಒಂದು ಹೋಟೆಲ್ ಕೂಡ ಇಲ್ಲ!

''ಅವತ್ತು ಏನೂ ಮಾಡೋಕೆ ಆಗಲಿಲ್ಲ. ದಾರಿಯಲ್ಲಿ ಒಂದು ಹೋಟೆಲ್ ಕೂಡ ಇಲ್ಲ. ನನ್ನ ಜೊತೆ ಶಿವರಾಜ್ ಮತ್ತು ಅರುಣ್ ಸಾಗರ್ ಇದ್ದರು'' - ಸುದೀಪ್ [ಕಿಚ್ಚ ಸುದೀಪ್ ಸಿನಿ ಇತಿಹಾಸದಲ್ಲೇ ಇದು 'ಮೊಟ್ಟ ಮೊದಲ ಬಾರಿಗೆ'!]

ಹಳ್ಳಿಯಲ್ಲಿ ಆಗಿದ್ದೇನು?

ಹಳ್ಳಿಯಲ್ಲಿ ಆಗಿದ್ದೇನು?

''ಯಾವುದೋ ಒಂದು ಹಳ್ಳಿಯಲ್ಲಿ ನಿಲ್ಲಿಸಿದ್ವಿ. ಒಂದು ಮನೆಗೆ ಹೋಗಿ ಬಾಗಿಲು ತಟ್ಟಿದ ತಕ್ಷಣ, ಅವರು ನಮ್ಮನ್ನ ನೋಡಿ ತುಂಬಾ ಕನ್ ಫ್ಯೂಸ್ ಆಗ್ಬಿಟ್ರು'' - ಸುದೀಪ್

ಬಕ್ರಾ ಮಾಡ್ತಾವ್ರೆ ಅಂದುಕೊಂಡ್ಬಿಟ್ರು!

ಬಕ್ರಾ ಮಾಡ್ತಾವ್ರೆ ಅಂದುಕೊಂಡ್ಬಿಟ್ರು!

'''ನಾವೇ' ಅಂತ ಹೇಳಿ ಊಟ ಕೇಳಿದ್ವಿ. ಅವರು 'ಯಾವುದೋ ಬಕರಾ ಪ್ರೋಗ್ರಾಂ ಇರಬೇಕು, ತಮಾಷೆ' ಅಂದುಕೊಂಡರು. 'ಹಾಗಿಲ್ಲ' ಅಂತ ಹೇಳಿದ್ಮೇಲೆ, ಅವರ ಮನೆಯಲ್ಲಿ ಇದ್ದ ಸ್ವಲ್ಪ ಅನ್ನ, ತರಕಾರಿ ಹುಳಿ ಸಾರು ಕೊಟ್ಟರು'' - ಸುದೀಪ್

ಅದ್ಭುತ ಅಡುಗೆ ಅವತ್ತು

ಅದ್ಭುತ ಅಡುಗೆ ಅವತ್ತು

''ನಾಲ್ಕು ಜನಕ್ಕೆ ಹದಿನೈದು ನಿಮಿಷದಲ್ಲಿ ಅದ್ಭುತವಾಗಿ ಅಡುಗೆ ಮಾಡಿ ಕೊಟ್ಟರು. ಜಗಲಿ ಮೇಲೆ ಕೂತುಕ್ಕೊಂಡು ಅವತ್ತು ಊಟ ಮಾಡಿದ್ವಿ. ಹೊರಡುವಾಗ, ಅವರ ಕೈಗೆ ನಾನು ಹತ್ತು ಸಾವಿರ ರೂಪಾಯಿ ಇಟ್ಟು ಬಂದೆ'' - ಸುದೀಪ್

ದುಡ್ಡು ಇತ್ತು, ಊಟ ಇರ್ಲಿಲ್ಲ!

ದುಡ್ಡು ಇತ್ತು, ಊಟ ಇರ್ಲಿಲ್ಲ!

''ಆದರೆ, ಅವತ್ತಿಗೆ ನೋಡಿ ದುಡ್ಡು ಇತ್ತು, ಊಟ ಇಲ್ಲ. ನಾವು ಏನು ಸಂಪಾದನೆ ಮಾಡಿದ್ದೀವಿ ಅಂದ್ರೆ ಇದು. ಜನರ ಪ್ರೀತಿ. ದುಡ್ಡೇ ಎಲ್ಲಾ ಅಲ್ಲ'' - ಸುದೀಪ್

ನಾನು ತುಂಬಾ ಲಕ್ಕಿ!

ನಾನು ತುಂಬಾ ಲಕ್ಕಿ!

''I'm lucky to be born as an Actor. I want to die as an Actor'' - ಸುದೀಪ್

ನನ್ನ ಬೆಡ್ ರೂಂ ನೋಡ್ಬೇಕು ನೀವು...

ನನ್ನ ಬೆಡ್ ರೂಂ ನೋಡ್ಬೇಕು ನೀವು...

''ಇವತ್ತಿಗೂ ನನ್ನ ಮನೆಗೆ ಬಂದು ಬೆಡ್ ರೂಂ ನೋಡಬಹುದು. ಅದು ಆಕ್ಟರ್ ಬೆಡ್ ರೂಂ ತರಹ ಇಲ್ಲ. ಒಬ್ಬ ಸ್ಟೂಡೆಂಟ್ ಬೆಡ್ ರೂಂ ತರಹ ಇದೆ. ಎಲ್ಲಾ ಕಡೆ ಬುಕ್, ಡಿವಿಡಿ ಬಿದ್ದಿರುತ್ತೆ. ನನ್ನ ತಾಯಿ ಬೈತಿರ್ತಾರೆ, ''ಇದೇನು ಒಳ್ಳೆ ಸ್ಟೋರ್ ರೂಂ ಇದ್ದ ಹಾಗಿದೆ ಅಂತ.'' ಆದ್ರೆ ನಾನು ಅದರಲ್ಲಿ ನೆಮ್ಮದಿ ಆಗಿ ನಿದ್ದೆ ಮಾಡುತ್ತೇನೆ'' - ಸುದೀಪ್

ಸಹಾಯ ಮಾಡಲು ಸಿದ್ಧ

ಸಹಾಯ ಮಾಡಲು ಸಿದ್ಧ

''ನಿರ್ಮಾಪಕರಿಗೆ ಅವಶ್ಯಕತೆ ಎನಿಸಿದಾಗ ನಾನು ದುಡ್ಡು ಬಿಟ್ಟುಕೊಟ್ಟಿದ್ದೀನಿ. ನನ್ನಿಂದ ಒಬ್ಬರಿಗೆ ಖುಷಿ ಆಗುತ್ತೆ ಅಂದ್ರೆ ನಾನು ಸಹಾಯ ಮಾಡಲು ಸಿದ್ಧ. ನನಗೆ ಏನು ಬರಬೇಕೋ, ಅದು ನನಗೆ ಬಂದೇ ಬರುತ್ತದೆ. ನಿಧಾನ ಆಗಬಹುದು ಅಷ್ಟೇ'' - ಸುದೀಪ್

ನಾನು ಶ್ರೀಮಂತ! ಯಾವುದರಲ್ಲಿ?

ನಾನು ಶ್ರೀಮಂತ! ಯಾವುದರಲ್ಲಿ?

''ಥಿಯೇಟರ್ ಮುಂದೆ ನಿಂತುಕೊಂಡು, ಜನರ ಶಿಳ್ಳೆ-ಚಪ್ಪಾಳೆ ನೋಡ್ತಿದ್ರೆ, Its makes me feel rich, very rich'' - ಸುದೀಪ್

More from Filmibeat

English summary
What makes Kannada Actor Kiccha Sudeep Very Rich? To know the answer, Read this article.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X