ರೇಶ್ಮೆ ನೂಲಿಗೆ ಹೋರಾಡುವ ಪ್ರೇಮಿಗಳ ಕಥೆ ಸಂಜು ವೆಡ್ಸ್ ಗೀತಾ 2 ; ಕಾಂಟ್ರವರ್ಸಿ ಬೇಡ ಎಂದ ನಾಗಶೇಖರ್..!

ಆ ಕಾಲದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿ, ಸುದ್ದಿಯಾಗುವುದಲ್ಲದೇ.. ಬಾಕ್ಸಾಫೀಸ್‌ನಲ್ಲಿಯೂ ಗೆದ್ದ ಸಿನಿಮಾ ಸಂಜು ವೆಡ್ಸ್ ಗೀತಾ. ಈ ಚಿತ್ರದ ಹಾಡು ಹಾಗೂ ಚಿತ್ರದಲ್ಲಿ ರಮ್ಯಾ ಅನುಭವಿಸಿದ್ದ ಪಾಡು ಇವತ್ತು ಕೂಡ ಅನೇಕರ ಮನದಲ್ಲಿ ಹಸಿರಾಗಿಯೇ ಇದೆ. ಚಿತ್ರದ ನಿರ್ದೇಶಕ ನಾಗಶೇಖರ್ ಅವರಿಗೂ ಈ ವಿಚಾರ ಚೆನ್ನಾಗಿಯೇ ಗೊತ್ತು. ಹೀಗಾಗಿಯೇ ಸಿಕ್ಕಾಪಟ್ಟೆ ಮುತುವರ್ಜಿ ವಹಿಸಿ ತಮ್ಮ ಬ್ರ್ಯಾಂಡ್‌ಗೆ ಧಕ್ಕೆಯಾಗಬಾರದು ಎಂದು ಸಂಜು ವೆಡ್ಸ್ ಗೀತಾ ಚಿತ್ರದ ಸಿಕ್ವೆಲ್ ನ ನಾಗಶೇಖರ್ ಮಾಡುತ್ತಿದ್ದಾರೆ. ಈಗಾಗಲೇ ಮೂರು ಹಂತದ ಚಿತ್ರೀಕರಣ ಮುಗಿಸಿ, ನಾಲ್ಕನೇ ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದಾರೆ

ಇನ್ನೂ ಸಾಮಾನ್ಯವಾಗಿ ಚಿತ್ರದ ಚಿತ್ರೀಕರಣ ಮುಕ್ತಾಯವಾದ ನಂತರವಷ್ಟೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಚಾಲನೆ ನೀಡುವುದು ವಾಡಿಕೆ. ಆದರೆ.. ಸಂಜು ವೆಡ್ಸ್ ಗೀತಾ ಬೇಡಿಕೆ. ಈಗಾಗಲೇ ಚಿತ್ರೀಕರಣಗೊಂಡ ದೃಶ್ಯಗಳಿಗೆ ಕತ್ತರಿ { ಸಂಕಲನ } ಹಾಕುವ ಕೆಲಸವನ್ನೂ ಕೂಡ ನಾಗಶೇಖರ್ ಮುಗಿಸಿದ್ದಾರೆ. ಯುಗಾದಿ ಹಬ್ಬದ ಪ್ರಯುಕ್ತ, ಚಿತ್ರದ ಡಬ್ಬಿಂಗ್ ಕೆಲಸಗಳನ್ನೂ ನಾಗಪ್ಪ ಆರಂಭಿಸಿದ್ದಾರೆ.

What Nagasekhar had to say about Sanju Weds Geetha 02

ಅಂದ್ಹಾಗೇ ಮೊದಲನೇ ಭಾಗದಲ್ಲಿ ಹಾಡುಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನ ಕೊಟ್ಟಿದ್ದ ನಾಗಶೇಖರ್, ಇಲ್ಲಿಯೂ ಚೆಂದದ ಆಡಿಯೋ ಹೂ ಗುಚ್ಛವನ್ನ ಕೊಡುವ ಪ್ರಯತ್ನ ಮಾಡಿದ್ದಾರೆ. ಶ್ರೀಧರ್ ವಿ ಸಂಭ್ರಮ ಸಂಗೀತ ನಿರ್ದೇಶಕರಾಗಿ ಇವರ ಈ ಪ್ರಯಾಣದಲ್ಲಿ ಜೊತೆಯಾಗಿದ್ದಾರೆ. ಇನ್ನೂ ಚಿತ್ರದ ಮುಹೂರ್ತ ನಡೆದ ಬೆನ್ನಲ್ಲಿಯೇ, ಆನಂದ್ ಆಡಿಯೋದವರು ಚಿತ್ರದ ಹಕ್ಕುಗಳನ್ನ ತಮ್ಮದಾಗಿಸಿಕೊಂಡಿದ್ಧಾರೆ. ಇದು ನಾಗಶೇಖರ್ ಅವರ ನಂಬಿಕೆಯನ್ನ ಇನ್ನೂ ಹೆಚ್ಚಿಸಿದೆ. ಲಹರಿ ಸಂಸ್ಥೆಯ ಪರವಾನಗಿ ಪಡೆದು ಒಂದು ಹಾಡನ್ನ ಬಳಸಿಕೊಳ್ಳುವ ಆಲೋಚನೆ ಕೂಡ ನಾಗಶೇಖರ್ ಅವರಿಗೆ ಇದೆ. ಒಪ್ಪಿಸಿ ಹಾಡು ಬಳಿಸಿಕೊಳ್ಳುವುದು ಉತ್ತಮ, ಸುಖಾಸುಮ್ಮನೆ ಕಾಂಟ್ರವರ್ಸಿ ಯಾಕೆ ಅನ್ನುವುದು ಇವರ ಅಂಬೋಣ.

What Nagasekhar had to say about Sanju Weds Geetha 02

ಬೆಂಗಳೂರು.. ಸ್ವಿಜರ್ ಲ್ಯಾಂಡ್‌ನಲ್ಲಿ.. ಚಿತ್ರದ ಚಿತ್ರೀಕರಣ ಮಾಡಿಕೊಂಡು ಬಂದಿದೆ ನಾಗಶೇಖರ್ ಹಾಗೂ ತಂಡ. ಇಂದಿನಿಂದ ನಾಲ್ಕನೇ ಹಂತದ ಚಿತ್ರೀಕರಣ ಆರಂಭವಾಗಿದೆ. ನಮ್ಮ ರೇಶ್ಮೆ ನೂಲಿಗೆ ಒಳ್ಳೆ ಬೆಲೆ ಬೇಕು ಅಂತ ಹೋರಾಡುವ ಇಬ್ಬರು ಪ್ರೇಮಿಗಳ ಕಥೆ ಈ ಚಿತ್ರದಲ್ಲಿದೆ. ಇನ್ನೂ ಡೈಮಂಡ್ ಸ್ಟಾರ್ ಶ್ರೀ ನಗರ ಕಿಟ್ಟಿ ಅವರ ಪ್ರಕಾರ ಸಂಜು ವೆಡ್ಸ್ ಗೀತಾ 2 ಮತ್ತೊಂದು ಅದ್ಭುತ ಪ್ರೇಮಕಾವ್ಯವಾಗಲಿದೆ. ಹಾಡುಗಳ ಜೊತೆ ಮಾತುಗಳಿಗೂ ಪ್ರಾಮುಖ್ಯತೆ ಇರುವ ಕಾರಣಕ್ಕೆ ಸ್ವಲ್ಪ ಮುಂಚೆಯೇ ಡಬ್ಬಿಂಗ್ ಶುರು ಮಾಡಿದ್ದೇವೆ ಅನ್ನುವುದು ಕಿಟ್ಟಪ್ಪ ಮಾತು.

ಛಲವಾದಿ ಕುಮಾರ್ ಚಿತ್ರದ ನಿರ್ಮಾಪಕರು. ಇನ್ನೂ ಹಾಸನದಲ್ಲಿ ಆಡಿಯೋ ರಿಲೀಸ್ ಮಾಡುವ ಪ್ಲ್ಯಾನ್ ಇವರದ್ದು. ಉಳಿದಂತೆ ಚಿತ್ರದಲ್ಲಿನ ಐದು ಹಾಡುಗಳನ್ನ ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿ ಹಾಡಿದ್ದಾರೆ. ಇನ್ನೂ ರಾಗಿಣಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ ವಿಶೇಷ ಪಾತ್ರದಲ್ಲಿದ್ದಾರೆ. ಇನ್ನೂ ರಮ್ಯಾ ಬದಲು ಚಿತ್ರಕ್ಕೆ ರಚಿತಾ ರಾಮ್ ನಾಯಕಿ ಅನ್ನುವ ವಿಚಾರ ನಿಮಗೆ ಈಗಾಗಲೇ ಗೊತ್ತೇ ಇರಬೇಕು

What Nagasekhar had to say about Sanju Weds Geetha 02

ಸದ್ಯಕ್ಕೆ ಸಂಜು ವೆಡ್ಸ್ ಗೀತಾ 2 ಚಿತ್ರದ ಚಿತ್ರೀಕರಣ, ಡಬ್ಬಿಂಗ್, ಎಡಿಟಿಂಗ್ ಕೆಲಸಗಳೆಲ್ಲ ಒಟ್ಟೊಟ್ಟಿಗೆ ನಡೆಯುತ್ತಿವೆ. ಎಲ್ಲವೂ ನಾಗಶೇಖರ್ ಅವರ ಯೋಜನೆಗೆ ತಕ್ಕಂತೆ ನಡೆದರೆ ಜೂನ್ ನಲ್ಲಿ ಚಿತ್ರ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ತೆರೆಗೆ ಬರಲಿದೆ.

More from Filmibeat

English summary
On The Auspecious Occasion Of Ugadi, Director Nagshekar Shared Information About His Next Much Anticpated Film Sanju Weds Geetha 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X