For Quick Alerts
  ALLOW NOTIFICATIONS  
  For Daily Alerts

  ರಮೇಶ್ ಅರವಿಂದ್ ಏನೇನ್ಮಾಡ್ತಿದ್ದಾರೆ ಗೊತ್ತಾ?

  By ಜೀವನರಸಿಕ
  |

  `ರೇಟ್ ಹೆಚ್ಚಿಸಿ ಡಿಸ್ಕೌಂಟ್ ಕೊಟ್ರೆ ಏನ್ ಲಾಭ? ಕಣ್ವ ಮಾರ್ಟ್ ನಲ್ಲಿ ಡ್ರೆಸ್ ತೊಗೊಂಡ್ರೆ ನಿಜವಾದ ರಿಯಾಯಿತಿ ಸಿಗುತ್ತೆ' ಅನ್ನೋ ಡೈಲಾಗ್ ಕೇಳಿ ನೀವೂ ಬಿದ್ದೂ ಬಿದ್ದೂ ನಕ್ಕಿರ್ತೀರಾ. ಯಾಕಂದ್ರೆ ಯಾವ ಬ್ರ್ಯಾಂಡ್ ತಾನೆ ರೇಟ್ ಹೆಚ್ಚು ಮಾಡ್ದೇ ಡಿಸ್ಕೌಂಟ್ ಕೊಡುತ್ತೆ?

  ಈ ಡೈಲಾಗನ್ನ ಇಲ್ಲೀವರೆಗೂ ನಟ ಅವಿನಾಶ್ ಅವರಿಂದ ಕೇಳಿರ್ತೀರಾ. ಆದ್ರೆ ಇನ್ನು ಮಹಿಳೆಯರ ಮನದಚೋರ ರಮೇಶ್ ಅರವಿಂದ್ ಈ ಕಣ್ವ ಮಾರ್ಟ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಮಾತು ಕಣ್ವ ಮಾರ್ಟಿಗೆ ಹೋದರೆ ರೇಟು ಎಷ್ಟೆಂದು ನಿಮಗೇ ಗೊತ್ತಾಗುತ್ತದೆ. ಉಳ್ಳವರು ಶಿವಾಲಯವ ಮಾಡಲಿ.[ದೇಸಾಯಿ ಅವರ 'ತಂದಾನ ತಂದನಾನ' ಈಗ 'ಯಕ್ಷಪ್ರಶ್ನೆ'!]

  ಇನ್ನು ರಮೇಶ್ ಅರವಿಂದ್ ಕನ್ನಡದ ತ್ಯಾಗರಾಜ. ಆದ್ರೆ ಇತ್ತೀಚೆಗೆ ಕಾಮಿಡಿ ಮತ್ತು ನಿರ್ದೇಶನಕ್ಕೆ ಸೀಮಿತ ಆಗ್ತಿರೋ ರಮೇಶ್ ಅರವಿಂದ್ ಅವರಿಂದ ಜನ್ರು ನಟನೆಯನ್ನು ಎಕ್ಸ್ ಪೆಕ್ಟ್ ಮಾಡ್ತಿದ್ದಾರೆ. ಗುಡ್ ನ್ಯೂಸ್ ಅನ್ನೋ ಹಾಗೆ ರಮೇಶ್ ಕೆಲವೇ ದಿನದಲ್ಲಿ ಒಂದು ದೊಡ್ಡ ಪ್ರಾಜೆಕ್ಟ್ ಮೂಲಕ ನಿಮ್ಮ ಮುಂದೆ ಬರ್ತೀನಿ ಅಂದಿದ್ದಾರೆ.[ಚಿತ್ರಗಳು: ಶಿವಣ್ಣನ ಮಗಳ ಆರತಕ್ಷತೆಯಲ್ಲಿ ಗಣ್ಯಾತಿಗಣ್ಯರ ದಂಡು]

  ರಮೇಶ್ ಅರವಿಂದ್ ಉತ್ತಮ ವಿಲನ್ ಸಿನಿಮಾ ನಂತ್ರ ಈಗೇನ್ಮಾಡ್ತಿದ್ದಾರೆ ಅನ್ನೋ ಪ್ರಶ್ನೆಯನ್ನ ಎಲ್ಲರೂ ಕೇಳ್ತಿದ್ರು. ಸದ್ಯ ರಮೇಶ್ ಅರವಿಂದ್ ಒಂದೊಳ್ಳೆಯ ಕಥೆಯ ಸ್ಕ್ರಿಪ್ಟ್ ಕೆಲಸದಲ್ಲಿದ್ದಾರಂತೆ. ಅದು ಮುಗಿಯೋದು ಇನ್ನೂ ಸ್ವಲ್ಪ ಸಮಯ ಹಿಡಿಯಲಿದೆಯಂತೆ. ಅದು ಒಂದು ದೊಡ್ಡ ಪ್ರಾಜೆಕ್ಟ್ ಆಗಿರಲಿದೆಯಂತೆ.

  English summary
  Kannada actor, director Ramesh Aravind is busy preparing a story for new movie in Kannada. Ramesh has not acted or directed in any Kannada movie in recent time. His fans are eagerly waiting to see him on Kannada screen. But, now he is appearing in Kanva advertisement. ರಮೇಶ್ ಅರವಿಂದ್ ಏನೇನ್ಮಾಡ್ತಿದ್ದಾರೆ ಗೊತ್ತಾ?
  Monday, November 2, 2015, 16:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X