ಪವಿತ್ರಾ ಗೌಡ ಆ ಕಾಲದಲ್ಲಿ ಪಡೆದ ಮೊದಲ 'ಸಂಭಾವನೆ' ಎಷ್ಟು ಗೊತ್ತಾ..?
ಇವತ್ತು ಪವಿತ್ರಾ ಗೌಡ ''ರೆಡ್ ಕಾರ್ಪೆಟ್ 777'' ಎಂಬ ಡಿಸೈನರ್ ಸ್ಟುಡಿಯೋದ ಒಡತಿ. ಮೂರು ಫ್ಲೋರ್‌ನ ಡ್ಯೂಪ್ಲೆಕ್ಸ್ ಮನೆಯಲ್ಲಿ ವಾಸ ಮಾಡುವ ಪವಿತ್ರಾ ಬಳಿ ವೊಲ್ಸ್ ವ್ಯಾಗೆನ್ ಮತ್ತು ರೇಂಜ್ ರೋವರ್ ಕಾರುಗಳಿವೆ. ಕೈಗೊಬ್ಬರು - ಕಾಲಿಗೊಬ್ಬರು ಸಹಾಯಕರು.
ಆದರೆ.. ನಿಮಗೆ ಗೊತ್ತಾ, ಮಾಡಬಾರದ್ದನ್ನೆಲ್ಲ ಮಾಡಿ ಒಂದು ಸಂಸಾರವನ್ನ ಹಾಳುಗೆಡುವುದರ ಜೊತೆ ಒಬ್ಬ ಸೂಪರ್ ಸ್ಟಾರ್‌ನ ದುರಹಂಕಾರವನ್ನೆಲ್ಲ ಮಣ್ಣು ಮುಕ್ಕಿಸಿರುವ ಪವಿತ್ರಾ ಗೌಡ ಬೆಸಿಕಲಿ ಮಿಡಲ್ ಕ್ಲಾಸ್ ಹುಡುಗಿ. ಆದರೆ ಮಧ್ಯಮ ವರ್ಗದ ಜನರಲ್ಲಿ ಕಾಣಸಿಗುವ ಯಾವ ಲಕ್ಷಣ ಕೂಡ ಈಕೆಯಲ್ಲಿ ಇರಲಿಲ್ಲ.

ಬದಲಿಗೆ ಹೈ - ಫೈ ಜೀವನಕ್ಕೆ ಇವ್ಳ ಮನೆ ಹಾತೊರೆಯುತ್ತಿತ್ತು. ಹೀಗಾಗಿಯೇ ವಿಚ್ಚೇದನದ ಪತ್ರವನ್ನ ಕಟ್ಟಿಕೊಂಡ ಗಂಡನ ಕೈಗಿಟ್ಟು ಈ ಬಣ್ಣದ ಪ್ರಪಂಚದ ಕಡೆ ಬಂದ ಪವಿತ್ರಾ ರ್ಯಾಂಪ್ ವ್ಯಾಕ್ ಮಾಡಲು ಶುರು ಮಾಡಿದಳು. ಎಲ್ಲರ ಗಮನ ಸೆಳೆದಳು. ನೋಡ.. ನೋಡುತ್ತಾ.. 'ಅಗಮ್ಯ' ಎಂಬ ಚಿತ್ರಕ್ಕೆ ನಾಯಕಿಯೂ ಆದಳು.
ಅವಕಾಶಕ್ಕೆ ದಿನ ನಿತ್ಯ ಹತ್ತಾರು ಜನ ಅಲೆಯುವ ಸಮಯದಲ್ಲಿ ಈಕಗೆ 'ಅಗಮ್ಯ' ಸಲೀಸಾಗಿ ಸಿಕ್ಕ ಹಿನ್ನೆಲೆ ಗಾಂಧಿನಗರ ಈಕೆಯ ಅದೃಷ್ಟದ ಬಗ್ಗೆ ಮಾತನಾಡಿಕೊಂಡಿತ್ತು. ನಟಿಯಾಗುವ ಅರ್ಹತೆ-ಯೋಗ್ಯತೆ ಎರಡು ಇರದ ಈ ಬಿನ್ನಾಣಗಿತ್ತಿ ನಾಯಕಿಯಾಗಿದ್ಹೇಗೆ ಎಂದು ನಿಬ್ಬೇರಗಾಗಿತ್ತು. ಈ ಪ್ರಶ್ನೆಗೆ ಆ ಚಿತ್ರದ ನಿರ್ದೇಶಕ ಉಮೇಶ್ ಗೌಡ ಒಂದು ದಶಕದ ನಂತರ ಉತ್ತರ ಕೊಟ್ಟಿದ್ದಾರೆ.

ಹೌದು, ವಿಸ್ತಾರ ವಾಹಿನಿ ಜೊತೆ ಮಾತನಾಡಿರುವ ಉಮೇಶ್ ಗೌಡ, ಆ ಕಾಲಕ್ಕೆ ನಮ್ಮದು ಲೋ ಬಜೆಟ್ ಸಿನಿಮಾ ಆಗಿತ್ತು. ಇನ್ನೂ ಇದು ದುಬಾರಿ ದುನಿಯಾ. ಹೀಗಾಗಿ ಬೇರೆ ನಾಯಕಿಯರು ಕೇಳುವ ಸಂಭಾವನೆ ನಮ್ಮಿಂದ ಕೊಡುವುದು ಅಸಾಧ್ಯವಾಗಿತ್ತು ಎಂದಿದ್ದಾರೆ. ಬೇರೆ ದಾರಿ ಕಾಣದೇ ಅನಿವಾರ್ಯವಾಗಿ ಪವಿತ್ರಾ ಗೌಡಳನ್ನ ನಾಯಕಿಯಾಗಿ ಓಕೆ ಮಾಡಿದ್ವಿ ಎಂದಿದ್ದಾರೆ. ಆ ಕಾಲದಲ್ಲಿ ಐದು-ಹತ್ತು ಲಕ್ಷ ಕೇಳುವ ನಾಯಕಿಯರ ನಡುವೆ ಕೇವಲ ಇಪತ್ತು ಸಾವಿರ ಸಂಭಾವನೆಯನ್ನಷ್ಟೇ ಪವಿತ್ರಾ ಗೌಡಗೆ ನಾವು ಕೊಟ್ಟಿದ್ವಿ ಎಂದು ಕೂಡ ಅಗಮ್ಯ ಚಿತ್ರದ ನಿರ್ದೇಶಕ ಉಮೇಶ್ ಗೌಡ ಹೇಳಿದ್ದಾರೆ.
ಇನ್ನೂ.. ಪವಿತ್ರಾ ಗೌಡ ನಟನೆಯಲ್ಲಿ ವೀಕು. ಆ ಚೆಂದದ ಮುಖದಲ್ಲಿ ಭಾವನೆಗಳೇ ಹೊಮ್ಮುವುದಿಲ್ಲ ಎಂದಿರುವ ಉಮೇಶ್ ಗೌಡ, ಆಕ್ಟಿಂಗ್ ಸರಿಯಾಗಿ ಮಾಡದ ಕಾರಣಕ್ಕೆ ಗದರಿದ್ದಷ್ಟೇ ಅಲ್ಲ ಹೊಡೊಯೋಕು ಹೋಗಿದ್ದೇ ಎಂದಿದ್ದಾರೆ.
ವಿಸ್ತಾರ ಹೊರತು ಪಡಿಸಿ ಟಿವಿ 9ಗೆ ನೀಡಿದ ಸಂದರ್ಶನದಲ್ಲಿ ಕೂಡ ಪವಿತ್ರಾ ಗೌಡ ಬಗ್ಗೆ ಕೆಲ ವಿಚಾರ ಹಂಚಿಕೊಂಡಿರುವ ಉಮೇಶ್ ಗೌಡ, ಪವಿತ್ರಾ ಗೌಡ ಆಗ ಕೋಣನಕುಂಟೆ ಕ್ರಾಸ್ ನಲ್ಲಿ ಬಾಡಿಗೆ ಮನೆಯಲ್ಲಿದ್ದಳು ಎಂದಿದ್ದಾರೆ. ರಂಗಶಂಕರದಲ್ಲಿ ನಾವು ಭೇಟಿ ಆದೆವು. ಆದರೆ ಪವಿತ್ರಾ ಗೌಡ ಪಾತ್ರಕ್ಕೆ ಸೂಕ್ತ ಅಲ್ಲ ಅನಿಸಿತು. ಅಲ್ಲದೆ ಪವಿತ್ರಾರ ನಟನಾ ಪ್ರತಿಭೆ ಬಗ್ಗೆಯೂ ನನಗೆ ಅನುಮಾನವಾಯ್ತು. ಹಾಗಾಗಿ ಅವರನ್ನು ತೆಗೆದುಕೊಂಡಿರಲಿಲ್ಲ ಎಂದಿದ್ದಾರೆ.
ಇನ್ನೂ ಪತಿ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ, ನಾವೂ ಕೂಡ ಆ ವಿಚಾರದ ಬಗ್ಗೆ ಕೇಳಿರುತ್ತಿಲ್ಲ ಎಂದಿರುವ ಉಮೇಶ್ ಗೌಡ, ನಮ್ಮ ಜೊತೆ ಇದ್ದಾಗಲೂ ಸಿನಿಮಾಗಳಲ್ಲಿ ನಟಿಸಲು ಯತ್ನಿಸುತ್ತಿದ್ದಳು, ರಮ್ಯಾ ಅಂತ ಒಬ್ಬ ಗೆಳತಿ ಅವರಿಗೆ ಇದ್ದರು, ಅವರೊಟ್ಟಿಗೆ ಓಡಾಡುತ್ತಿದ್ದಳು ಎಂದಿದ್ದಾರೆ. ಮುಂದುವರೆದು ಮಾತನಾಡಿ ಆಗಾಗ್ಗೆ ವಿಲ್ಸನ್ ಗಾರ್ಡನ್ನ ನಮ್ಮ ಜ್ಯೂಸ್ ಸೆಂಟರ್ಗೆ ಸಹ ಬರುತ್ತಿದ್ದಳು, ಬಹಳ ಬೇಗ ಸ್ನೇಹ ಬೆಳೆಸಿಕೊಳ್ಳುತ್ತಿದ್ದಳು. ನಮ್ಮ ಜೊತೆ ಕೆಲಸ ಮಾಡಲು ಆರಂಭಿಸಿದ ಎರಡು ವರ್ಷದಲ್ಲೇ ಆಕೆ ಚಿತ್ರರಂಗದಲ್ಲಿ ಚೆನ್ನಾಗಿ ಸಂಪರ್ಕ ಬೆಳೆಸಿಕೊಂಡಿದ್ದಳು, ದೊಡ್ಡ ನಿರ್ದೇಶಕರು, ವಿತರಕರು ಪರಿಚಯವಿತ್ತು, ದೊಡ್ಡ ನಿರ್ದೇಶಕರು ಆಕೆಗೆ ಕರೆ ಮಾಡುತ್ತಿದ್ದರು. ಇದೆಲ್ಲ ಆಶ್ಚರ್ಯ ತರಿಸುತ್ತಿತ್ತು' ಎಂದು ಆ ದಿನಗಳನ್ನು ಮೆಲುಕು ಹಾಕಿದ್ದಾರೆ ಉಮೇಶ್.

'ಅಗಮ್ಯ' ಚಿತ್ರದ ನಂತರ ಎಸ್.ನಾರಾಯಣ್ ನಿರ್ದೇಶನದ 'ಛತ್ರಿಗಳು ಸಾರ್ ಛತ್ರಿಗಳು' ಸಾ.ರಾ.ಗೋವಿಂದು ಮಗ ಅಭಿನಯಿಸಿದ್ದ 'ಸಾಗುವ ದಾರಿಯಲ್ಲಿ' ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದ ಪವಿತ್ರಾ ಗೌಡ ಆ ನಂತರ 'ಬತ್ತಾಸ್' ಎಂಬ ಚಿತ್ರಕ್ಕೂ ನಾಯಕಿಯಾದಳು. ಆದರೆ ಆ ಚಿತ್ರ ತೆರೆಗೆ ಬರಲೇ ಇಲ್ಲ. ಇಂಥ ಪವಿತ್ರಾ ಗೌಡಗೆ ಆ ನಂತರ ಅವಕಾಶಗಳಿಗೇ ಬರ ಬಡಿದುಕೊಂಡಿತ್ತು. ಇದೇ ಸಮಯಕ್ಕೆ ದರ್ಶನ್ ನಸೀಬು ಕೆಟ್ಟಿತ್ತು. ಆ ನಂತರ ಆಗಿದ್ದು ಕಣ್ಮುಂದೆಯೇ ಇದೆ.


Click it and Unblock the Notifications











