twitter
    For Quick Alerts
    ALLOW NOTIFICATIONS  
    For Daily Alerts

    ಪುನೀತ್ ನಿಧನ ಸುದ್ದಿ ಕೇಳಿ ಕ್ರಾಂತಿ ಶೂಟಿಂಗ್ ನಿಲ್ಲಿಸಿದ್ದ ದರ್ಶನ್

    |

    ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಅಜಾತಶತ್ರು. ಅಪ್ಪು ಅಂದ್ರೆ ಕನ್ನಡ ಚಿತ್ರರಂಗದ ಪ್ರತಿಯೊಬ್ಬರಿಗೂ ಇಷ್ಟ. ಸದಾ ನಗು ನಗುತ್ತಲೇ ಎಲ್ಲರೊಂದಿಗೂ ಮಾತಾಡುತ್ತಿದ್ದ ಪುನೀತ್ ಕಂಡರೆ ಚಿತ್ರರಂಗಕ್ಕೂ ಅಷ್ಟೇ ಗೌರವ. ಇನ್ನು ಪುನೀತ್ ಹಾಗೂ ದರ್ಶನ್ ದೋಸ್ತಿ ಇಂದು ನಿನ್ನೆಯದಲ್ಲ. ಬಾಲ್ಯದಿಂದಲೂ ಇಬ್ಬರಿಗೂ ಒಡನಾಟವಿತ್ತು. ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಅಣ್ಣಾವ್ರ ಸಿನಿಮಾಗಳಲ್ಲಿ ನಟಿಸುತ್ತಿದ್ದರಿಂದ ಪರಿಚಯವಿತ್ತು. ದರ್ಶನ್ ನಾಯಕರಾಗಿ ಚಿತ್ರರಂಗಕ್ಕೆ ಕಾಲಿಟ್ಟಾಗ ಇಬ್ಬರ ಸ್ನೇಹ ಇನ್ನಷ್ಟು ಗಾಢವಾಗಿತ್ತು.

    ಮೇಲ್ನೋಟಕ್ಕೆ ದರ್ಶನ್ ಹಾಗೂ ಪುನೀತ್ ಕಾಂಪಿಟೇಟರ್ ಅಂತ ಎಲ್ಲರಿಗೂ ಅನಿಸುತ್ತಿತ್ತು. ಆದರೆ, ದರ್ಶನ್ ಹಾಗೂ ಅಪ್ಪು ಇಬ್ಬರೂ ಸ್ನೇಹಿತರಂತೆ ಇದ್ದರು. ಇತ್ತೀಚೆಗೆ ಇಬ್ಬರ ಭೇಟಿ ಕಡಿಮೆ ಆಗಿದ್ದಿರಬಹುದು, ಆದರೆ ಸೋದರರಂತೆ ಇದ್ದರು. ಈ ಕಾರಣಕ್ಕೆ ಪುನೀತ್ ರಾಜ್‌ಕುಮಾರ್ ನಿಧನದ ಸುದ್ದಿ ಕೇಳಿದ ಕೂಡಲೇ ದರ್ಶನ್ ತುಂಬಾನೇ ಡಿಸ್ಟರ್ಬ್ ಆಗಿದ್ದರು. ಕ್ರಾಂತಿ ಚಿತ್ರ ಚಿತ್ರೀಕರಣದಲ್ಲಿದ್ದ ದರ್ಶನ್‌ಗೆ ಅಪ್ಪು ನಿಧನದ ಸುದ್ದಿ ತಿಳಿದಾಗ ಅವರ ಪ್ರತಿಕ್ರಿಯೆ ಹೇಗಿತ್ತು? ಅಂದು ದರ್ಶನ್ ತೆಗೆದುಕೊಂಡ ನಿರ್ಧಾರ ಏನು? ಅನ್ನುವುದನ್ನು ಕ್ರಾಂತಿ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ವಿವರಿಸಿದ್ದಾರೆ.

     ಅಪ್ಪು ವಿಷಯ ತಿಳಿದು ತಕ್ಷಣವೇ ಮೇಕಪ್ ತೆಗೆದಿದ್ದ ದರ್ಶನ್

    ಅಪ್ಪು ವಿಷಯ ತಿಳಿದು ತಕ್ಷಣವೇ ಮೇಕಪ್ ತೆಗೆದಿದ್ದ ದರ್ಶನ್

    "ಅಕ್ಟೋಬರ್ 29 ಅಂದು ಕ್ರಾಂತಿ ಚಿತ್ರದ ಚಿತ್ರೀಕರಣ ಎಂದಿನಂತೆ ಶುರುವಾಗಿತ್ತು. ಶೂಟಿಂಗ್ ಶುರುವಾಗಿ ಕೆಲವೇ ದಿನಗಳಾಗಿದ್ದರಿಂದ ದೊಡ್ಡ ತಾರಾಗಣವೇ ನೆರೆದಿತ್ತು. ನಿರ್ದೇಶಕ ವಿ. ಹರಿಕೃಷ್ಣ ಚಿತ್ರೀಕರಣಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ನಾನು ನಾಳೆ ಚಿತ್ರೀಕರಣದ ಬಗ್ಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ವೇಳೆ ನಮ್ಮ ಸೆಟ್ಟಿನಲ್ಲಿ ಕೆಲಸ ಮಾಡುವ ಹುಡುಗ ಬಂದು ಪುನೀತ್ ಸರ್‌ಗೆ ಹೃದಯಾಘಾತವಾಗಿದೆ ಎಂದು ಹೇಳಿದ. ನಾನು ಅಲ್ಲೇ ಮೇಕಪ್ ಹಚ್ಚಿ ಶೂಟಿಂಗ್‌ಗೆ ರೆಡಿಯಾಗಿದ್ದ ದರ್ಶನ್ ಅವರ ಕಡೆ ಓಡಿದೆ. ಅಷ್ಟೋತ್ತಿಗಾಗಲೇ ದರ್ಶನ್ ಸೆಟ್ಟಿನಲ್ಲಿ ಇರಲಿಲ್ಲ. ಅವರಿಗೆ ಆಗಲೇ ವಿಷಯ ತಿಳಿದು ಮೇಕಪ್ ತೆಗೆದು, ಆಸ್ಪತ್ರೆ ಕಡೆ ಹೊರಟಿದ್ದರು." ಎಂದು ಆ ದಿನದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ನಿರ್ಮಾಪಕಿ ಶೈಲಜಾ ನಾಗ್.

    ತುಂಬಾನೇ ಡಿಸ್ಟರ್ಬ್ ಆಗಿದ್ದರು ದರ್ಶನ್

    ತುಂಬಾನೇ ಡಿಸ್ಟರ್ಬ್ ಆಗಿದ್ದರು ದರ್ಶನ್

    " ಇನ್ನೂ ಖಾಸಗಿ ವಾಹಿನಿಗಳಲ್ಲಿ ಪುನೀತ್ ರಾಜ್‌ಕುಮಾರ್‌ ಅವರಿಗೆ ಹೃದಯಾಘಾತ ಅಂತಲೇ ಬರುತ್ತಿತ್ತು. ಆದರೆ, ದರ್ಶನ್ ಅವರಿಗೆ ಏನೋ ಸರಿಯಿಲ್ಲ ಅನ್ನುವುದು ಗೊತ್ತಾಗಿತ್ತು. ಹೀಗಾಗಿ ತಕ್ಷಣವೇ ಶೂಟಿಂಗ್ ಸೆಟ್ಟಿನಿಂದ ಸೀದಾ ಆಸ್ಪತ್ರೆಗೆ ಹೊರಟರು. ಆಗಲೇ ಅವರಿಗೆ ಸುಳಿವು ಸಿಕ್ಕು ತುಂಬಾನೇ ನೊಂದುಕೊಂಡಿದ್ದರು. ಅವರನ್ನು ಹೇಗೆ ಮಾತಾಡಿಸಬೇಕು ಅಂತಲೇ ಗೊತ್ತಾಗುತ್ತಿರಲಿಲ್ಲ. ನಾನು ಹತ್ತಿರ ಹೋಗಿ ಪುನೀತ್ ಅವರಿಗೆ ಹೃದಯಾಘಾತದ ಆಗಿರುವ ವಿಷಯ ತಿಳಿಸಿದಾಗ, ಅವರಿಗೆ ಅದಾಗಲೇ ಅಪ್ಪು ಅಗಲಿದ್ದು ಗೊತ್ತಾಗಿತ್ತು." ಎಂದು ಶೈಲಜಾ ನಾಗ್ ಹೇಳಿದ್ದಾರೆ.

     12 ದಿನದವರೆಗೂ ಕ್ರಾಂತಿ ಶೂಟಿಂಗ್ ನಿಲ್ಲಿಸುವಂತೆ ಸೂಚನೆ

    12 ದಿನದವರೆಗೂ ಕ್ರಾಂತಿ ಶೂಟಿಂಗ್ ನಿಲ್ಲಿಸುವಂತೆ ಸೂಚನೆ

    " ಅಪ್ಪು ನೋಡಲು ಆಸ್ಪತ್ರೆಗೆ ಹೋಗುವ ಮುನ್ನ ನನ್ನನ್ನು ಕರೆದು ಒಂದು ಮಾತು ಹೇಳಿದ್ರು. ಇಡೀ ಚಿತ್ರರಂಗ ಶೋಕದಲ್ಲಿದೆ. ತಕ್ಷಣವೇ ಸಿನಿಮಾದ ಚಿತ್ರೀಕರಣವನ್ನು ನಿಲ್ಲಿಸಿ. ಹೀಗಾಗಿ ಪುನೀತ್ ಪುಣ್ಯಸ್ಮರಣೆ ಮುಗಿಯುವವರೆಗೂ ಕ್ರಾಂತಿ ಚಿತ್ರೀಕರಣ ಮಾಡುವುದು ಬೇಡ. 12 ದಿನಗಳ ಬಳಿಕ ಕ್ರಾಂತಿ ಚಿತ್ರೀಕರಣದ ಬಗ್ಗೆ ಯೋಚನೆ ಮಾಡೋಣ ಅಂತ ಹೇಳಿದ್ರು. ಅದರಂತೆ ಚಿತ್ರೀಕರಣವನ್ನು ನಿಲ್ಲಿಸಿದ್ದೇವೆ." ಎನ್ನುತ್ತಾರೆ ಕ್ರಾಂತಿ ಚಿತ್ರದ ನಿರ್ಮಾಪಕಿ.

    ನಾವಿಬ್ಬರೂ ಅಣ್ಣ- ತಮ್ಮಂದಿರು

    ನಾವಿಬ್ಬರೂ ಅಣ್ಣ- ತಮ್ಮಂದಿರು

    ಮಾರನೇ ದಿನ ಬೆಳಗ್ಗೆ ಶೈಲಜಾ ನಾಗ್ ಮತ್ತೆ ದರ್ಶನ್‌ರನ್ನು ಭೇಟಿಯಾಗಿದ್ದರು. ಆಗಲೂ ನಾವಿಬ್ಬರೂ ಅಣ್ಣ-ತಮ್ಮಂದಿರಂತೆ ಇದ್ದೆವು. ಇಂದು ಇದ್ದವರು ನಾಳೆ ಇಲ್ಲ ಅಂದರೆ ಏನು? ಅಂತ ಪುನೀತ್ ನಿಧನವನ್ನು ಮತ್ತೆ ನೆನೆದು ಬೇಸರ ಪಟ್ಟುಕೊಂಡಿದ್ದರು ಅಂತ ಆ ಕಹಿ ಘಳಿಗೆಯನ್ನು ಶೈಲಜಾ ನಾಗ್ ನೆನಪಿಸಿಕೊಂಡಿದ್ದಾರೆ.

    English summary
    Darshan got to know about Puneeth Rajkumar's death while filming Kranti movie this was his immediate reaction on hearing the news.
    Thursday, November 11, 2021, 9:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X