ದರ್ಶನ್ ಹೆಡೆಮುರಿ ಕಟ್ಟಿದ ಎಸಿಪಿಗೆ ಕೆಲಸ ಮಾಡಲು ಸ್ಫೂರ್ತಿ ತುಂಬೋದು ಪುನೀತ್ ಈ ಸಿನಿಮಾ!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ದೇಶಾದ್ಯಂತ ಭಾರೀ ಚರ್ಚೆ ಹುಟ್ಟಾಕ್ಕಿದೆ. ಪೊಲೀಸರು ಕೊಂಚ ಯಾಮಾರಿದ್ದರೂ ನಿಜವಾದ ಅಪರಾಧಿಗಳು ತಪ್ಪಿಸಿಕೊಳ್ಳುವ ಸಾಧ್ಯತೆಯಿತ್ತು. ದೊಡ್ಡ ದೊಡ್ಡ ರಾಜಕಾರಣಿಗಳ ಒತ್ತಡದ ನಡುವೆಯೂ ನಟ ದರ್ಶನ್ ಸೇರಿದಂತೆ 13 ಜನ ಆರೋಪಿಗಳನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸ್ಟಾರ್ ನಟ, ಪ್ರಭಾವಿ ವ್ಯಕ್ತಿಯನ್ನು ಬಂಧಿಸುವುದು ಅಷ್ಟು ಸುಲಭದ ಮಾತಲ್ಲ. ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ಎಸ್‌. ಗಿರೀಶ್ ಹಾಗೂ ವಿಜಯನಗರದ ಎಸಿಪಿ ಚಂದನ್‌ ಕುಮಾರ್‌ ಖಡಕ್ ನಿರ್ಧಾರದಿಂದ ಇಂದು ಪ್ರಕರಣ ತನಿಖೆ ಸರಿಯಾದ ಹಾದಿಯಲ್ಲಿ ಸಾಗಿದೆ. ತಪ್ಪಿತಸ್ಥರು ತಪ್ಪಿಸಿಕೊಳ್ಳದಂತೆ ಸರಿಯಾಗಿ ಬಲೆ ಬೀಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

When ACP Chandan Kumar said Puneeth Rajkumar s this film inspired him more

ಪ್ರಕರಣದ ತನಿಖೆ ನಡೆಯಿತ್ತಿದ್ದು ಮುಂದೆ ಏನಾಗಬಹುದು ಎನ್ನವುದು ಗೊತ್ತಿಲ್ಲ. ಆದರೆ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ ಎಂದು ಈ ಪ್ರಕರಣದ ಮೂಲಕ ಪೊಲೀಸರು ಮತ್ತೊಮ್ಮೆ ಸಾರಿ ಹೇಳಿದ್ದಾರೆ. ದಕ್ಷ ಪೊಲೀಸ್ ಅಧಿಕಾರಿಗಳಾದ ಡಿಸಿಪಿ ಎಸ್‌. ಗಿರೀಶ್ ಹಾಗೂ ಎಸಿಪಿ ಚಂದನ್‌ ಕುಮಾರ್‌ ಕಾರ್ಯದಕ್ಷತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವರಿಗೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ. ದಯಾನಂದ್‌ ಬೆಂಬಲವಾಗಿ ನಿಂತರು.

ಕಳೆದ ಮಂಗಳವಾರ(ಜೂನ್ 11) ಬೆಳಗ್ಗೆ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ನಟ ದರ್ಶನ್‌ನನ್ನು ಎಸಿಪಿ ಚಂದನ್ ವಶಕ್ಕೆ ಪಡೆದಿದ್ದರು. ಪೊಲೀಸರು ಹೋಗಿ ನಮ್ಮೊಟ್ಟಿಗೆ ಬರಬೇಕು ಎಂದಾಗ "ನಾನ್ ಬರ್ತೀನಿ ನೀವು ನಡೀರಿ. ನಿಮ್ಮ ಜೊತೆ ಬಂದರೆ ಜನ ತಪ್ಪು ತಿಳಿದುಕೊಳ್ತಾರೆ. ನನ್ನ ಕಾರಿನಲ್ಲಿ ಬರುತ್ತೇನೆ" ಎಂದು ಹೇಳಿದ್ದರಂತೆ. ಆಗ ಎಸಿಪಿ ಚಂದನ್ ಕುಮಾರ್, ನೀನ್ಯಾರು? ನಿನ್ ಕಥೆ ಏನು ಗೊತ್ತು, ಜೀಪ್ ಹತ್ತು ಅಂದಿದ್ದಾರೆ. ಅಷ್ಟಕ್ಕೆ ಥಂಡಾ ಹೊಡೆದ ದರ್ಶನ್ ಜೀಪ್ ಹತ್ತಿ ಬಂದಿದ್ದಾರೆ.

ಮೈಸೂರಿನಲ್ಲಿ ಓದಿ ಬೆಳೆದವರು ಎಸಿಪಿ ಚಂದನ್ ಕುಮಾರ್. ಅಂದಹಾಗೆ ದರ್ಶನ್ ಹಾಗೂ ಚಂದನ್ ಇಬ್ಬರೂ ಮೈಸೂರಿನ ಇಟ್ಟಿಗೆಗೂಡು ಭಾಗದವರು. ಮೈಸೂರಿನ ಶಾರದಾವಿಲಾಸ ಕಾಲೇಜಿನಲ್ಲಿ ಹೈಸ್ಕೂಲ್, ಪಿಯುಸಿ ಓದಿದ್ದರು. ಬಳಿಕ ಡಿಪ್ಲೊಮೊ ಮಾಡಿ ಬಳಿಕ ಇಂಜಿನಿಯರಿಂಗ್ ಮಾಡಿದವರು. 2 ವರ್ಷ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡಿ ಬಂದವರು. ನಂತರ ಕೆಪಿಎಸ್ ಸಿ ಪರೀಕ್ಷೆ ಬರೆದು ನಾಲ್ಕನೇ ರ್‍ಯಾಂಕ್ ಪಡೆದು ಡಿವೈಎಸ್‌ಪಿ ಆಗಿ ಅಧಿಕಾರ ವಹಿಸಿಕೊಂಡಿದ್ದರು.

ಡಾ. ರಾಜ್‌ಕುಮಾರ್ ಐಎಎಸ್, ಕೆಎಎಸ್ ಅಕಾಡೆಮಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಎಸಿಪಿ ಚಂದನ್ ಕುಮಾರ್ ಮಾತನಾಡಿದ್ದ ಮಾತುಗಳು ಈಗ ವೈರಲ್ ಆಗುತ್ತಿದೆ. ಅದರಲ್ಲಿ ತಮ್ಮ ನೆಚ್ಚಿನ ಹವ್ಯಾಸಗಳ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ನೋಡುವುದು ಅಂದ್ರೆ ಬಹಳ ಇಷ್ಟ ಎಂದಿದ್ದಾರೆ. "ಸಿಂಗಂ ಸಿನಿಮಾ ನೋಡಿ ಪೊಲೀಸ್ ಆಗಲು ಬಂದರೆ ಸಾಧ್ಯವಿಲ್ಲ. ಅದು ಬರೀ ಸಿನಿಮಾ ಅಷ್ಟೆ. ಆದರೆ ಆ ಸಿನಿಮಾ ನೋಡಿದಾಗ ಅದ್ಭುತ ಅನುಭವ ಆಗುತ್ತದೆ ಅಷ್ಟೆ"

"ಅಪ್ಪು ಸರ್‌ದು ಒಂದು ಒಳ್ಳೆ ಸಿನಿಮಾ 'ಪೃಥ್ವಿ' ಇದೆ. ಅದು ಒಳ್ಳೆ ಸ್ಫೂರ್ತಿದಾಯಕವಾದ ಸಿನಿಮಾ. ಅಪ್ಪು ಸರ್ ರೀತಿ ನಾವು ಐಎಎಸ್ ಆಗೋಣ, ಒಳ್ಳೆ ಕೆಲಸ ಮಾಡೋಣ. 'ಪೃಥ್ವಿ' ಸಿನಿಮಾ ಬಹಳ ಪ್ರಾಕ್ಟಿಕಲ್ ಆಗಿದೆ. ಏನೆಲ್ಲಾ ನಡೆಯುತ್ತದೆ ಎನ್ನುವುದನ್ನು ನೈಜವಾಗಿ ತೋರಿಸಿದ್ದಾರೆ. ಆ ಸಿನಿಮಾ ಪದೇ ಪದೇ ರಿಪೀಟ್ ಮಾಡಿ ನೋಡ್ತೀನಿ" ಎಂದು ಎಸಿಪಿ ಚಂದನ್ ಕುಮಾರ್ ಹೇಳಿದ್ದಾರೆ.

ನಾನು ಡಾ. ರಾಜ್‌ಕುಮಾರ್ ಅವರ ಅಭಿಮಾನಿ. ಅವರ ಕುಟುಂಬದ ಜೊತೆ ಒಡನಾಟ ಸಿಕ್ಕಿದ ಮೇಲೆ ಮನೆಯ ಪ್ರತಿ ಸದಸ್ಯರ ಬಗ್ಗೆ ಮತ್ತಷ್ಟು ತಿಳಿದುಕೊಂಡೆ ಎಂದು ಎಸಿಪಿ ಚಂದನ್ ಕುಮಾರ್ ಹೇಳಿದ್ದರು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಈ ವಿಡಿಯೋಗಳನ್ನು ವೈರಲ್ ಮಾಡುತ್ತಿದ್ದಾರೆ.

More from Filmibeat

English summary
ACP Chandan Kumar about Dr Rajukumar and Puneeth Rajkumar's films;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X