»   » ನಟಿ ಪೂಜಾಗಾಂಧಿ ಶೇಪ್ ಈ ಪಾಟಿ ಬದಲಾಯ್ತಾ?

ನಟಿ ಪೂಜಾಗಾಂಧಿ ಶೇಪ್ ಈ ಪಾಟಿ ಬದಲಾಯ್ತಾ?

By: ಜೀವನರಸಿಕ
Subscribe to Filmibeat Kannada

ಪೂಜಾ ಗಾಂಧಿ ಅವರದು ಯಾಕೋ ತುಂಬಾ ಅತಿ ಅನ್ನಿಸ್ತಿಲ್ವಾ? ಈ ಫೋಟೋ ಅವರದ್ದೇನಾ ಅಂತ ಅನುಮಾನ. ಹಿಂದೆ, ಮುಂದೆ ಎಲ್ಲ ಓಕೆ ಈ ನಡುವಲ್ಲಿ ಅನುಮಾನ ಯಾಕೆ? ಇದು ನಿಜ ಹೊಟ್ಟೇನಾ ಇಲ್ಲಾ ಲೊಟ್ಟೇನಾ.

ಹೀಗೆಲ್ಲಾ ಸಿಕ್ಕಾಪಟ್ಟೆ ತಲೆಕೆಡಿಸಿಕೊಳ್ತಿರೋದು ಮಳೆಹುಡುಗಿಯ ಹೊಸ ಅವತಾರದ ಬಗ್ಗೆ. ಪೂಜಾ ಅನ್ನೋ ಪಂಜಾಬಿ ಚೆಲುವೆಯ ಈ ಅವತಾರ ನೋಡಿಲ್ಲ ನೀವು. ದಂಡುಪಾಳ್ಯದಲ್ಲಿ ನೋಡಿದ ಪೂಜಾ ಇಲ್ಲಿಲ್ಲ. ಅವರ ದೇಹ ಹೆಚ್ಚುಕಡಿಮೆ ಹವರ್ ಗ್ಲಾಸ್ ಶೇಪ್ ನಂತಾಗಿದೆ. ['ತಿಪ್ಪಜ್ಜಿ ಸರ್ಕಲ್' ಇನ್ನೊಂದಿಷ್ಟು ತುಂಡುಡುಗೆ ಚಿತ್ರಗಳು]

ನಿಜಕ್ಕೂ ಪೂಜಾ ಗಾಂಧಿಯವರದ್ದಾ ಈ ಫೋಟೋ ಅನ್ನೋ ಅನುಮಾನ ಎಂಥವರನ್ನೂ ಕಾಡುತ್ತೆ. ಇತ್ತೀಚೆಗೆ ಅಂತರ್ಜಾದಲ್ಲಿ ಹರಿದಾಡಿರೋ ಈ ಫೋಟೋಗಳು ಎಲ್ಲರನ್ನೂ ಒಂದ್ಸಾರಿ ಬೆರಗುಗಣ್ಣಿಂದ ನೋಡೋ ಹಾಗೆ ಮಾಡ್ತಿವೆ.

ಈ 'ನಡು'ವಲ್ಲೇನೋ ಅನುಮಾನ

ಪೂಜಾ ಮೊದಲು ಹೇಗಿದ್ರು ಗೊತ್ತಾ? ಈ ನಡುವಲ್ಲಿ ನಮಗ್ಯಾಕೋ ಅನುಮಾನ ಶುರುವಾಗಿದೆ. ಯಾಕಂದ್ರೆ ಫೋಟೋದಲ್ಲಿ ಪೂಜಾಗಾಂಧಿಯವ್ರ ನಡು ಬಳ್ಳಿಯ ತರಹ ಬಳುಕ್ತಿದೆ. ಸೈಜ್ ಝೀರೋ ಬ್ಯೂಟಿಯಾಗಿ ಪೂಜಾ ಕಂಗೊಳಿಸ್ತಿದ್ದಾರೆ.

ತೂಕ ಹೇಗೆ ಕಮ್ಮಿ ಮಾಡ್ಕೊಂಡ್ರು?

ಬೇಕಾದ್ರೆ ಫೋಟೋನ ಒನ್ಸ್ ಅಗೈನ್ ನೋಡಿ ಈ ಗ್ಯಾಪಲ್ಲಿ ಪೂಜಾ ತೆಳ್ಳಗಾಗಿದ್ಯಾವಾಗ. ಇಲ್ಲೀವರೆಗೂ 'ಅಭಿನೇತ್ರಿ' ಶೂಟಿಂಗ್ ನಲ್ಲಿ ಒಂದೇ ಸೈಜ್ ನಲ್ಲಿದ್ದ ಪೂಜಾ ಹೊಟ್ಟೆ ಹೆಂಗ್ ಕಮ್ಮಿಯಾಯ್ತು. ಇಲ್ಲಿರೋದು ನಿಜವಾದ ಹೊಟ್ಟೇನಾ ಇಲ್ಲಾ ಬರೀ ಲೊಟ್ಟೇನಾ.

ರಾಯಚೂರಲ್ಲಿ ಚೂರೂ ಕರಗಿರಲಿಲ್ಲ

ಪೂಜಾ ಗಾಂಧಿಯವರ ರಾಯಚೂರು ಎಲೆಕ್ಷನ್ ದಿನಗಳು ನೆನಪಿರ್ಬೇಕು. ಬಿಎಸ್ಆರ್ ಕಾಂಗ್ರೇಸ್ ಪಕ್ಷದಿಂದ ಚುನಾವಣೆಗೆ ನಿಂತು ತಿಂಗಳುಗಟ್ಟಲೆ ಬಿರುಬಿಸಿಲಲ್ಲಿ ತಿರುಗಾಡಿದ್ರೂ ಪೂಜಾ ಕರಗಿದ್ದು ಅಷ್ಟೋ ಇಷ್ಟೋ ಅಷ್ಟೆ.

ದಂಡುಪಾಳ್ಯದಲ್ಲಿ ಬಾಳೆದಿಂಡು

ದಂಡುಪಾಳ್ಯದಲ್ಲಿ ಬಾಳೆ ದಿಂಡಿನಂತಿದ್ದ ಪೂಜಾ ಬಳುಕೋ ಬಳ್ಳಿಯಾಗಿ ಎಲ್ಲೂ ನೋಡಿಲ್ಲ. ಆಗ ಇದ್ದ ದಂಡುಪಾಳ್ಯದ ಪೂಜಾಗಾಂಧಿಯನ್ನ ಈಗ ಇರೋ ಅಭಿನೇತ್ರಿಯ ಪೂಜಾಗಾಂಧಿಯನ್ನೂ ಅಕ್ಕಪಕ್ಕಕ್ಕಿಟ್ಟು ನೋಡಿದ್ರೆ ಯಾವ ವ್ಯತ್ಯಾಸಗಳೂ ಸುಳಿದಾಡೋದಿಲ್ಲ.

ಇದ್ಯಾರದ್ದೋ ಕೈಚಳಕಾನಾ?

ಆದ್ರೆ ಈ ಎರಡರ ಗ್ಯಾಪಲ್ಲಿ ಯಾವಾಗ ಪೂಜಾ ಗಾಂಧಿ ತೆಳ್ಳಗಾಗಿ ದಪ್ಪ ಆದ್ರೋ ಗೊತ್ತಿಲ್ಲ. ಆದ್ರೆ ಚಿತ್ರರಸಿಕರಂತೂ ಈ ಫೋಟೋಗಳನ್ನ ಕಣ್ಣಲ್ಲೆ ನೆಕ್ತಿದ್ದಾರೆ. ಆದ್ರೆ ಇವೆಲ್ಲ ಫೋಟೋ ಮಾರ್ಫ್ ಕರಾಮತ್ತು ಅಂತ ಗಾಂಧಿನಗರದಲ್ಲಿ ಗಲ್ಲಿ ಸುದ್ದಿ.

ಡೈರೆಕ್ಟರ್ಸ್ ಸ್ಪೆಷಲ್ ನಲ್ಲೂ ದುಂಡಗಿದ್ರು

'ದಂಡುಪಾಳ್ಯ'ದ ಸಿನಿಮಾ ನಂತರ 2013ರಲ್ಲಿ ಪೂಜಾ ಕುಣಿದಿದ್ದು ಗುರುಪ್ರಸಾದರ 'ಡೈರೆಕ್ಟರ್ಸ್ ಸ್ಪೆಷಲ್' ಸಿನಿಮಾಗೆ. ಅಲ್ಲಿ ಕೂಡ ತುಂಬಿ ತುಳುಕೋ ಸೌಂದರ್ಯ ಪ್ರದರ್ಶಿಸಿದ್ದ ಪೂಜಾ ಎಲ್ಲೂ ಈ ಪರಿ ತೆಳ್ಳಗಾಗಿರ್ಲಿಲ್ವೇ.

ಅಭೀನೇತ್ರಿಯಲ್ಲೂ ಪೂಜಾ ಗಿಮಿಕ್

ಶರಪಂಜರ ಸಿನಿಮಾದ ಕ್ಲೈಮ್ಯಾಕ್ಸ್ ಸೀನ್ ಗಳಲ್ಲಿ ಕಲ್ಪನಾ ಮಾಡಿರೋ ನಟನೆಯನ್ನೇ ಫೋಟೋಶೂಟ್ನಲ್ಲಿ ಮಾಡಿದ್ರೂ ಕಂಪ್ಲೀಟ್ ಕಲ್ಪನಾ ಗೆಟಪ್ಪನ್ನೇ ನಮ್ಮ ಕಲ್ಪನೆಗೆ ತರಿಸಿದ್ರೂ ಇದು ಅವ್ರ ಕಥೆ ಅಲ್ಲ ಅಂತಿದ್ದಾರೆ ಈ ಪೂಜಾಗಾಂಧಿ.

ಒರಿಜಿನಲ್ಲೋ ಡ್ಯೂಪ್ಲಿಕೇಟೋ ಯಾರಿಗ್ಗೊತ್ತು

ಫೋಟೋ ಗಿಮಿಕ್ ಮಾಡೋ ಚೆಲುವೆಯರಲ್ಲಿ ಪೂಜಾಗಾಂಧಿಯವ್ರ ಫೋಟೋಗಳು ಎದ್ದು ಕಾಣ್ತಿವೆ. ಇದ್ರಲ್ಲಿ ಯಾರ್ಯಾರ ಕರಾಮತ್ತಿದೆಯೋ. ಕೈಚಳಕವಿದೆಯೋ. ಆದ್ರೆ ಇದು ಒರಿಜಿನಲ್ಲೋ ಡ್ಯೂಪ್ಲಿಕೇಟೋ ಯಾರಿಗ್ಗೊತ್ತು.

English summary
Is it Kannada actress Pooja Gandhi got an Hourglass Body Shape? it is considered the most ideal body shape! Now the actress is perfect 10/10 figure. Here are unbelevable photos of Pooja Gandhi.
Please Wait while comments are loading...