"ನೀರಿನ ಒಳಗೆ ಒಬ್ಬ ಪ್ರಪೋಸ್ ಮಾಡಿದ್ದ. ಅವನ್ಯಾರು ಅನ್ನೋದು ಗೊತ್ತಿಲ್ಲ"; ಸಂಯುಕ್ತಾ ಹೆಗ್ಡೆ
ಕಿರಿಕ್ ಬೆಡಗಿ ಸಂಯುಕ್ತಾ ಹೆಗ್ಡೆ ಇತ್ತೀಚೆಗೆ 'ಕ್ರೀಂ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಚೆಲುವೆ ವರ್ಕ್‌ಔಟ್, ಡ್ಯಾನ್ಸ್ ವಿಡಿಯೋಗಳನ್ನು ಆಗಾಗ್ಗೆ ಶೇರ್ ಮಾಡುತ್ತಿರುತ್ತಾರೆ. ಹಳೇ ತೆಲುಗು ಸಂದರ್ಶನವೊಂದರಲ್ಲಿ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದರು. ಅದು ಈಗ ವೈರಲ್ ಆಗ್ತಿದೆ.
ಸದ್ಯ ಸಂಯುಕ್ತಾ ಹೆಗ್ಡೆ ಕೈಯಲ್ಲಿ ಯಾವುದೇ ದೊಡ್ಡ ಸಿನಿಮಾಗಳಿಲ್ಲ. ರಿಷಬ್ ಶೆಟ್ಟಿ ನಿರ್ದೇಶನದ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಆರ್ಯ ಪಾತ್ರದಲ್ಲಿ ಆಕೆ ಮೋಡಿ ಮಾಡಿದ್ದರು. ತಮಗಾಗಿಯೇ ಡಿಸೈನ್ ಮಾಡಿದ ಪಾತ್ರ ಎನ್ನುವಂತೆ ಅದಕ್ಕೆ ಒಗ್ಗಿಕೊಂಡಿದ್ದರು. ಬಳಿಕ 'ಕಿರಿಕ್ ಪಾರ್ಟಿ' ಸಿನಿಮಾ ತೆಲುಗಿಗೆ ರೀಮೆಕ್ ಆದಾಗ ಆ ಪಾತ್ರವನ್ನು ಆಕೆಯೇ ನಿಭಾಯಿಸುವಂತಾಯಿತು.

ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಸಿನಿಮಾಗಳಲ್ಲಿ ಸಂಯುಕ್ತಾ ಹೆಗ್ಡೆ ನಟಿಸಿದ್ದಾರೆ. ಶ್ರೇಯಸ್ ಮಂಜು ನಟನೆಯ 'ರಾಣ' ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಕೂಡ ಹೆಜ್ಜೆ ಹಾಕಿದ್ದರು. ಬಿಗ್ ಸ್ಕ್ರೀನ್ ಮಾತ್ರವಲ್ಲ ಸ್ಮಾಲ್ ಸ್ಕ್ರೀನ್‌ನಲ್ಲಿ ಕೂಡ ಸಂಯುಕ್ತಾ ಕಾಣಿಸಿಕೊಂಡಿದ್ದಾರೆ. ಎಂಟಿವಿ ರೋಡಿಸ್ 15 ಶೋನಲ್ಲಿ ಸೆಮಿಫೈನಲ್‌ವರೆಗೂ ಹೋಗಿದ್ದರು. ಬಳಿಕ ಕನ್ನಡ ಬಿಗ್‌ಬಾಸ್ ಶೋನಲ್ಲೂ ಕಾಣಿಸಿಕೊಂಡಿದ್ದರು.
ಎಂಟಿವಿ ಸ್ಪ್ಲಿಟ್‌ವಿಲ್ಲಾ ಸೀಸನ್ 11ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ರನ್ನರ್ ಅಪ್ ಆಗಿದ್ದರು. ಸಂದರ್ಶನದಲ್ಲಿ ನೀವು ನೋಡೊಕೆ ಟಾಮ್‌ಬಾಯ್. ನಿಮಗೆ ಯಾರಾದರೂ ಪ್ರಪೋಸ್ ಮಾಡುವ ಧೈರ್ಯ ಮಾಡಿದ್ದಾರಾ ಎನ್ನುವ ಪ್ರಶ್ನೆಗೆ ಸಂಯುಕ್ತಾ ಉತ್ತರಿಸಿದ್ದಾರೆ. "ಸಾಕಷ್ಟು ಜನ ಹುಡುಗರು ನನಗೆ ಪ್ರಪೋಸ್ ಮಾಡಿದ್ದಾರೆ. ಎಲ್ಲಾ ಹುಡುಗಿಯರಿಗೂ ಪ್ರಪೋಸಲ್ ಬರುತ್ತದೆ ಅದು ಕಾಮನ್" ಎಂದಿದ್ದಾರೆ.
ಈವರೆಗೆ ಬಂದಿರುವ ಬೆಸ್ಟ್ ಪ್ರಪೋಸಲ್ ಯಾವುದು? ಎನ್ನುವ ಪ್ರಶ್ನೆಗೆ "ಅದನ್ನು ಹೇಳುವುದು ಕಷ್ಟ. ನಾನು ಒಬ್ಬರ ಹೆಸರು ಹೇಳಿದರೆ ಮತ್ತೊಬ್ಬರು ಬೇಸರ ಮಾಡಿಕೊಳ್ಳುತ್ತಾರೆ. ಒಬ್ಬ ಹುಡುಗ ನನಗೆ ನೀರಿನ ತಳದಲ್ಲಿ ಪ್ರಪೋಸ್ ಮಾಡಿದ್ದ. ಆತ ಯಾರು ಎನ್ನುವುದು ನನಗೆ ಗೊತ್ತಿಲ್ಲ. ಸಂಪೂರ್ಣವಾಗಿ ಅಪರಿಚಿತ. ಸ್ಕೂಬಾ ಡೈವ್ ಮಾಡಿದ ವೇಳೆ ಪ್ರಪೋಸ್ ಮಾಡಿದ್ದ."
"ಶ್ರೀಲಂಕಾದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಹೋಗಿದ್ದೆ. ಆಗ ನಟನೆಗ ಘಟನೆ ಅದು. ಸಮುದ್ರದ ನೀರಿನ ಆಳದಲ್ಲಿ ಇದ್ದಾಗ ಆತ ಐ ಲವ್ ಯು ಎಂದು ಪ್ರಪೋಸ್ ಮಾಡಿದ್ದ. ಅದು ನಿಜಕ್ಕೂ ಬಹಳ ಬ್ಯೂಟಿಫುಲ್. ಬಳಿಕ ಮೇಲೆ ಬಂದಮೇಲೆ ಆತನನ್ನು ಭೇಟಿ ಮಾಡಿದ್ದೆ. ಅದನ್ನು ಲವ್ ಅನ್ನೋಕೆ ಆಗಲ್ಲ. ನನಗೆ ಲವ್ ಅಲ್ಲಿ ನಂಬಿಕೆ ಇದೆ. ಆದರೆ ಅದಕ್ಕೆಲ್ಲಾ ಈಗ ಸಮಯ ಇಲ್ಲ" ಎಂದು ಸಂಯುಕ್ತಾ ಹೆಗ್ಡೆ ಹೇಳಿದ್ದಾರೆ.
"ಪಿಯುಸಿಯಲ್ಲಿ ಇದ್ದಾಗಲೇ ನನಗೆ 'ಕಿರಿಕ್ ಪಾರ್ಟಿ' ಸಿನಿಮಾ ಅವಕಾಶ ಬಂದಿತ್ತು. ರಕ್ಷಿತ್ ಶೆಟ್ಟಿ ಜೊತೆ ನಟಿಸಬೇಕು ಎಂದಿದ್ದರು. ನಾನು ಯಾವುದೇ ಫೇಕ್ ಕಾಲ್, ಸುಮ್ನೆ ತಮಾಷೆ ಮಾಡೋಕೆ ಮಾಡಿದ್ದಾರೆ ಎಂದುಕೊಂಡಿದ್ದೆ. ನನಗೆ ಇಷ್ಟವಿಲ್ಲ ಎಂದು ಹೇಳಿ ಕರೆ ಕಟ್ ಮಾಡಿದ್ದೆ. ಚಿತ್ರರಂಗಕ್ಕೆ ಬಂದಮೇಲೆ ಸಾಕಷ್ಟು ಟೀಕೆಗಳು ಬರುತ್ತವೆ. ಅದನ್ನೆಲ್ಲಾ ಎದುರಿಸಲು ನಾನು ಆಗ ಸಿದ್ಧಳಿರಲಿಲ್ಲ. ಆದರೆ ಚಿತ್ರತಂಡ ಒಪ್ಪಿದರು. ಬಳಿಕ ನಟಿಸಿದೆ" ಎಂದು ವಿವರಿಸಿದ್ದಾರೆ.
ಸಂಯುಕ್ತಾ ಹೆಗ್ಡೆಗೆ ಇನ್‌ಸ್ಟಾಗ್ರಾಮ್‌ನಲ್ಲಿ 13 ಲಕ್ಷ ಫಾಲೋವರ್ಸ್ ಇದ್ದಾರೆ. ಹಾಟ್ ಹಾಟ್ ಫೋಟೋಶೂಟ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಟ್ರೋಲ್‌ಗಳಿಗಳಿಗೆಲ್ಲಾ ಆಕೆ ಕಿವಿಗೊಡಲ್ಲ. ತಾನಾಯ್ತು ತನ್ನ ಕೆಲಸ ಆಯ್ತು ಎಂದು ಇರುತ್ತಾರೆ.


Click it and Unblock the Notifications











