ಅದಿತಿ ಪ್ರಭುದೇವಗೆ ಪದೇ ಪದೇ ಎದುರಾಗುತ್ತಿರುವ ಪ್ರಶ್ನೆ ಇದು
ನಟಿ ಅದಿತಿ ಪ್ರಭುದೇವ ಇದೀಗ 'ಬ್ರಹ್ಮಚಾರಿ' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಇದೇ ಶುಕ್ರವಾರ (ನವೆಂಬರ್ 29) ಬಿಡುಗಡೆ ಆಗುತ್ತಿದೆ.
ಅದಿತಿ ಪ್ರಭುದೇವಗೆ ಪದೇ ಪದೇ ಒಂದು ಪ್ರಶ್ನೆ ಎದುರಾಗುತ್ತಿದೆ. ಒಂದರ ನಂತರ ಒಂದು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಯಾವುದೇ ಚಿತ್ರದ ಸುದ್ದಿಗೋಷ್ಟಿ ಕಾರ್ಯಕ್ರಮಗಳಿಗೆ ಅದಿತಿ ಹೋದರೂ, ಒಂದು ಕಾಮನ್ ಪ್ರಶ್ನೆ ಬಂದೇ ಬರುತ್ತಿದೆ.
ಅದಿತಿ ಮಾತ್ರವಲ್ಲ ಆಗಾಗ ಅನೇಕ ನಟಿಯರಿಗೆ ಈ ಪ್ರಶ್ನೆ ಬರುತ್ತವೆ. ಆದರೆ, ಇದೀಗ ಅದಿತಿ ಪ್ರಭುದೇವ ಕಾಲ ಬಂದಿದೆ. ಎಲ್ಲೇ ಹೋದ್ರು ಈ ಪ್ರಶ್ನೆ ಅವರ ಮುಂದೆ ಬರುತ್ತಿದೆ. ಏನಿದು ಪ್ರಶ್ನೆ, ಏನಿದು ವಿಷಯ ಮುಂದೆ ಓದಿ...

ನಿಮ್ಮ ಮದುವೆ ಯಾವಾಗ?
ನಿಮ್ಮ ಮದುವೆ ಯಾವಾಗ?, ಯಾವಾಗ ಮದುವೆ ಆಗುತ್ತಿದ್ದೀರಿ, ನೀವು ಮದುವೆ ಆಗುವ ಹುಡುಗ ಹೇಗಿರಬೇಕು? ಇಂತಹ ಪ್ರಶ್ನೆಗಳು ಅದಿತಿಗೆ ಪದೇ ಪದೇ ಬರುತ್ತಿದೆ. ಯಾವುದೇ ಸಿನಿಮಾ ಕಾರ್ಯಕ್ರಮ ಇದ್ದರೂ ಅದಿತಿ ಈ ಪ್ರಶ್ನೆಯನ್ನು ಎದುರಿಸಬೇಕಾಗಿದೆ. ಸುಮಾರು ಬಾರಿ ಈ ಪ್ರಶ್ನೆ ಅವರ ಮುಂದೆ ಬರುತ್ತಿದೆ. ಅದಕ್ಕೆ ಅವರು ನಗುತ್ತಾ ಪ್ರತಿಕ್ರಿಯಿಸುತ್ತಾರೆ.

ಸಿನಿಮಾ ಹಿಟ್ ಆದ್ರೆ ಮದುವೆ
ಯಾವಾಗ ಈ ಪ್ರಶ್ನೆ ಕೇಳಿದರೂ ನಗುತ್ತಾ ಅದಿತಿ ಪ್ರಭುದೇವ ಉತ್ತರ ನೀಡುತ್ತಾರೆ. ಪದೇ ಪದೇ ಈ ಪ್ರಶ್ನೆ ಬಂದರೂ, ಯಾವುದೇ ಬೇಸರ ಇಲ್ಲದೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಿನ್ನೆ (ನವೆಂಬರ್ 26) 'ಬ್ರಹ್ಮಚಾರಿ' ಸಿನಿಮಾದ ಪ್ರೆಸ್ ಮೀಟ್ ನಲ್ಲಿ ಅದಿತಿಗೆ ನಿಮ್ಮ ಮದುವೆ ಯಾವಾಗ? ಎನ್ನುವ ಪ್ರಶ್ನೆ ಮತ್ತೆ ಬಂತು. ಆಗ ''ಬ್ರಹ್ಮಚಾರಿ ಸಿನಿಮಾ ಹಿಟ್ ಆದರೆ, ನಾನು ಮದುವೆ ಆಗಿ ಬಿಡುತ್ತೇನೆ'' ಎಂದು ಅದಿತಿ ನಕ್ಕರು.

ಕನ್ನಡದ ಹುಡುಗ ಆಗಿರಬೇಕು
ಈ ಹಿಂದೆ ಮದುವೆ ಬಗ್ಗೆ ಮಾತನಾಡಿದ್ದ ಅದಿತಿ ಪ್ರಭುದೇವ ''ಎಲ್ಲರೂ ಮದುವೆ ಆಗಬೇಕು. ಮದುವೆ ಆಗದೆ ಇದ್ದರೆ ಜೀವನ ಪೂರ್ಣ ಅಂತ ಅನಿಸುವುದಿಲ್ಲ. ಆಗುವ ಟೈಮ್ ನಲ್ಲಿ ಮದುವೆ ಆಗುತ್ತೇನೆ. ನಾನು ಮದುವೆ ಆಗುವ ಹುಡುಗ ಸಂಸ್ಕಾರ ಇರುವ ಒಳ್ಳೆಯ ಹುಡುಗ ಆಗಬೇಕು. ಅಚ್ಚ ಕನ್ನಡದ ಸ್ವಚ್ಚ ಮನಸ್ಸಿನ ಹುಡುಗ ಆಗಿರಬೇಕು.'' ಎಂದು ಹೇಳಿದ್ದರು.

ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ
ಅದಿತಿ ಪ್ರಭುದೇವ ನಟನೆಯ 'ಬ್ರಹ್ಮಚಾರಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಜೊತೆಗೆ 'ತೋತಾಪುರಿ', 'ದಿಲ್ಮಾರ್', 'ಒಂಬತ್ತನೇ ದಿಕ್ಕು' ಸಿನಿಮಾಗಳಲ್ಲಿ ಅದಿತಿ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ನಟಿಸಿದ 'ರಂಗನಾಯಕಿ' ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಈ ಚಿತ್ರದಲ್ಲಿ ಅತ್ಯಾಚಾರಕ್ಕೆ ಒಳಗಾದ ಹುಡುಗಿ ಪಾತ್ರದಲ್ಲಿ ಅದಿತಿ ನಟಿಸಿದ್ದರು.


Click it and Unblock the Notifications











