ದೀಪಿಕಾ, ಪ್ರಿಯಾಂಕಾ ಮದ್ವೆ ನಂತರ ಕಾಜಲ್ ಅಗರ್ವಾಲ್.?
Recommended Video

ಸಿನಿಜಗತ್ತಿನಲ್ಲಿ ಮದುವೆ ಪರ್ವ ನಡೆಯುತ್ತಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಅವರ ಮದುವೆ ದೊಡ್ಡ ಸುದ್ದಿಯಾಗಿತ್ತು. ಈಗ ಸೌತ್ ನಟಿ ಕಾಜಲ್ ಅಗರ್ವಾಲ್ ಮದುವೆ ಯಾವಾಗ ಎಂಬ ವಿಷ್ಯ ಚರ್ಚೆಗೆ ಬಂದಿದೆ.
33 ವರ್ಷದ ಕಾಜಲ್ ಇತ್ತೀಚಿಗಷ್ಟೆ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ದೀಪಿಕಾ, ಪ್ರಿಯಾಂಕಾ ಮದುವೆ ಆಯ್ತು, ನಿಮ್ಮ ಮದುವೆ ಯಾವಾಗ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಕಾಜಲ್ ನಗುನಗುತ್ತಾ ಉತ್ತರಿಸಿದ್ದಾರೆ.

'ನಿಮಗೆ ನನ್ನ ಮದುವೆ ಬಗ್ಗೆ ತುಂಬಾ ಯೋಚನೆ ಇದೆ ಅನಿಸುತ್ತಿದೆ, ನೀವು ನಮ್ಮ ತಂದೆ ಬಳಿ ಮಾತಾಡಿ' ಎಂದು ಹಾಸ್ಯಚಟಾಕಿ ಹಾರಿಸಿದ ಕಾಜಲ್, 'ಈ ವರ್ಷ ಹಲವರು ಮದುವೆಯಾಗಿದ್ದಾರೆ, ಆಗ್ತಾನೆ ಇದ್ದಾರೆ. ನನಗೂ ಮದುವೆ ಆಗ್ಬೇಕು ಎಂಬ ಪ್ರಚೋದನೆ ಹೆಚ್ಚಾಗ್ತಿದೆ' ಎಂದು ನಕ್ಕರು.
ಆದ್ರೆ, ಮದುವೆ ಯಾವಾಗ ಎಂಬುದರ ಬಗ್ಗೆ ಆಗಲಿ, ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಎಂಬುದರ ಬಗ್ಗೆ ಸುಳಿವು ಬಿಟ್ಟುಕೊಟ್ಟಿಲ್ಲ.
ಸದ್ಯ, ಬಾಲಿವುಡ್ 'ಕ್ವೀನ್' ಚಿತ್ರದ ತಮಿಳು ರೀಮೇಕ್ 'ಪ್ಯಾರೀಸ್ ಪ್ಯಾರೀಸ್' ಚಿತ್ರದಲ್ಲಿ ನಟಿಸಿದ್ದು, ಬಿಡುಗಡೆಯಾಗಬೇಕಿದೆ. ಅದಾದ ಬಳಿಕ 'ಕವಚಂ', ಜಯಂ ರವಿ ಅವರ ಜೊತೆ ಒಂದು ಸಿನಿಮಾ ಹಾಗೂ ಕಮಲ್ ಹಾಸನ್ ಅವರ 'ಇಂಡಿಯನ್ 2' ಚಿತ್ರದಲ್ಲಿ ಕಾಜಲ್ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











