ರಿಯಲ್ ಸ್ಟಾರ್ ಗೆ ಕ್ರೇಜಿಸ್ಟಾರ್ ಡೈರೆಕ್ಷನ್ : ಇದಕ್ಕೆ ಏನು ರವಿ ರಿಯಾಕ್ಷನ್?
Recommended Video

ನಟ ಉಪೇಂದ್ರ ಹಾಗೂ ರವಿಚಂದ್ರನ್ ಇಬ್ಬರು ಕೂಡ ನಿರ್ದೇಶಕರು. ಈ ಇಬ್ಬರು ನಟರು ಒಂದು ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ ಅಂದರೆ ಆ ಚಿತ್ರದ ಕ್ರೇಜ್ ದುಪ್ಪಟ್ಟಾಗುತ್ತದೆ. ಇಂತಹ ದೊಡ್ಡ ನಟ ಹಾಗೂ ನಿರ್ದೇಶಕರು ಈಗ 'ರವಿಚಂದ್ರ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಒಂದೇ ಸಿನಿಮಾದಲ್ಲಿ ಅಭಿನಯ ಮಾಡುತ್ತಿರುವ ಈ ನಟರು ಒಬ್ಬರಿಗೊಬ್ಬರು ಯಾವಾಗ ನಿರ್ದೇಶನ ಮಾಡುತ್ತಾರೆ ಎಂಬ ಕುತೂಹಲ, ಆಸೆ ಎಲ್ಲರಿಗೂ ಇರುತ್ತದೆ. ಅಂತಹ ಪ್ರಶ್ನೆಗೆ ಈಗ ನಟ ರವಿಚಂದ್ರನ್ ಉತ್ತರ ನೀಡಿದ್ದಾರೆ.
ಉಪೇಂದ್ರ ಅವರಿಗೆ ನೀವು ಒಂದು ಸಿನಿಮಾ ನಿರ್ದೇಶನ ಮಾಡುತ್ತೀರಾ? ಅಥವಾ ಉಪ್ಪಿ ನಿರ್ದೇಶನದಲ್ಲಿ ನೀವು ನಟನೆ ಮಾಡುತ್ತೀರಾ? ಎಂಬ ಪ್ರಶ್ನೆಗಳಿಗೆ ಕ್ರೇಜಿ ಸ್ಟಾರ್ ಉತ್ತರ ನೀಡಿದ್ದಾರೆ.

''ನಾನು ಮತ್ತು ಉಪೇಂದ್ರ ಯಾವಗ ಸಿಕ್ಕರು ಬರೀ ಸಿನಿಮಾ ಬಗ್ಗೆಯೇ ಮಾತನಾಡುತ್ತೇವೆ. ಟೈಂ ಯಾವಗ ಯಾರ ಜೊತೆಗೆ ಸೇರಿಸುತ್ತದೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಸಮಯ ಬಂದರೆ ಖಂಡಿತ ಸಿನಿಮಾ ಆಗುತ್ತದೆ'' ಎಂದಿದ್ದಾರೆ. ಈ ಮೂಲಕ ಸಮಯ ಬಂದರೆ ಉಪ್ಪಿಗೆ ನಿರ್ದೇಶನ ಮಾಡಲು ರವಿಮಾಮ ಸಿದ್ಧರಾಗುತ್ತಾರೆ.

ಉಪೇಂದ್ರ ಹಾಗೂ ರವಿಚಂದ್ರನ್ ಇಬ್ಬರ ಸಿನಿಮಾ ಮೇಕಿಂಗ್ ಸ್ಟೈಲ್ ಬೇರೆ ಬೇರೆ. ಸೋ, ಮುಂದೆ ಉಪೇಂದ್ರ ಅವರಿಗೆ ರವಿಚಂದ್ರನ್ ನಿರ್ದೇಶನ ಅಥವಾ ರವಿಚಂದ್ರನ್ ಅವರಿಗೆ ಉಪೇಂದ್ರ ನಿರ್ದೇಶನ ಮಾಡಿದರೆ ಆ ಚಿತ್ರ ನಿಜಕ್ಕೂ ಅಭಿಮಾನಿಗಳ ಮನ ತಣಿಸಲಿದೆ.


Click it and Unblock the Notifications











