twitter
    For Quick Alerts
    ALLOW NOTIFICATIONS  
    For Daily Alerts

    ದೈವದ ಪಾತ್ರ ಮಾಡಿ ಕೋಟಿ ಕೋಟಿ ದುಡ್ಡು ಮಾಡಿಕೊಂಡ ನೀವು ಇದನ್ನು ಹೇಳಬಾರದು; ರಿಷಬ್‌ಗೆ ಚೇತನ್ ಟಾಂಗ್!

    |

    ಇಡೀ ದೇಶವನ್ನೇ ಮೆಚ್ಚಿಸಿ ಬರೋಬ್ಬರಿ 400 ಕೋಟಿ ಕಲೆಕ್ಷನ್ ಮಾಡಿದ ಕಾಂತಾರ ಚಿತ್ರ ಕೆಲ ವಿವಾದಗಳಿಗೂ ಸಹ ಗುರಿಯಾಯಿತು. ಕಾಂತಾರ ಚಿತ್ರಕ್ಕೆ ಎದುರಾದ ವಿವಾದಗಳಲ್ಲಿ ಕನ್ನಡದ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಕುಮಾರ್ ನೀಡಿದ ಹೇಳಿಕೆಗಳೂ ಸಹ ಸೇರಿವೆ. ಚಿತ್ರ ಬಿಡುಗಡೆಗೊಂಡು ಹತ್ತು ದಿನಗಳು ಕಳೆದ ನಂತರ ಚಿತ್ರ ವೀಕ್ಷಿಸಿ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಬರೆದುಕೊಂಡಿದ್ದ ಚೇತನ್ ಕುಮಾರ್ ಚಿತ್ರದಲ್ಲಿ ತಪ್ಪು ಮಾಹಿತಿಯನ್ನು ನೀಡಲಾಗಿದೆ ಎಂದು ರಿಷಬ್ ವಿರುದ್ಧ ಆಕ್ರೋಶ ಹೊರಹಾಕಿದ್ದರು.

    ಕೋಲ ಹಾಗೂ ಭೂತಾರಾಧನೆ ಎರಡೂ ಸಹ ಆದಿವಾಸಿಗಳ ಆಚರಣೆ, ಹಿಂದೂ ಧರ್ಮ ಹುಟ್ಟುವುದಕ್ಕೂ ಮುನ್ನ ಆದಿವಾಸಿಗಳಿದ್ದರು ಹಾಗೂ ಈ ಕೋಲ ಹಾಗೂ ಭೂತರಾಧನೆ ಮಾಡುತ್ತಿದ್ದರು. ಆದರೆ ಕಾಂತಾರ ಚಿತ್ರದಲ್ಲಿ ಈ ಕೋಲ ಹಾಗೂ ಭೂತಾರಾಧನೆಯನ್ನು ಹಿಂದೂ ಧರ್ಮದ ಆಚರಣೆ ಎಂದು ತಪ್ಪಾಗಿ ತೋರಿಸಲಾಗಿದೆ ಎಂದು ಚೇತನ್ ರಿಷಬ್ ಶೆಟ್ಟಿ ವಿರುದ್ಧ ಬರೆದುಕೊಂಡಿದ್ದರು.

    ಚೇತನ್ ಕುಮಾರ್ ಅವರ ಈ ಪೋಸ್ಟ್ ಭಾರೀ ಟೀಕೆಗೆ ಒಳಗಾಗಿತ್ತು. ಚೇತನ್ ಕುಮಾರ್‌ ವಿವಾದದ ಬೆನ್ನಲ್ಲೇ ಸುದ್ದಿಗೋಷ್ಠಿಯನ್ನು ನಡೆಸಿ ತಮ್ಮ ಹೇಳಿಕೆಯನ್ನು ಸಮರ್ಥನೆ ಕೂಡ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೇ ಇಂತಹ ಹೇಳಿಕೆ ನೀಡಿದ ಚೇತನ್ ಅವರನ್ನು ಬಂಧಿಸಿ ಎಂದು ಹಲವಾರು ದೂರುಗಳೂ ಸಹ ದಾಖಲಾಗಿದ್ದವು. ಹೀಗೆ ಅಂದು ದೊಡ್ಡ ಮಟ್ಟದ ವಿವಾದ ಹುಟ್ಟುಹಾಕಿದ್ದ ಚೇತನ್ ಅಹಿಂಸಾ ಇದೇ ವಿಚಾರವನ್ನಿಟ್ಟುಕೊಂಡು ಇದೀಗ ಕಾಂತಾರ ಚಿತ್ರತಂಡವನ್ನು ಮತ್ತೊಮ್ಮೆ ಟೀಕಿಸಿದ್ದಾರೆ.

    ನೀವು ಮಾಡಿದ್ರೆ ಸರಿ, ಬೇರೆಯವರು ಮಾಡಿದ್ರೆ ತಪ್ಪಾ?

    ನೀವು ಮಾಡಿದ್ರೆ ಸರಿ, ಬೇರೆಯವರು ಮಾಡಿದ್ರೆ ತಪ್ಪಾ?

    ಕಾಂತಾರ ಚಿತ್ರದಲ್ಲಿ ಬರುವ ದೈವದ ದೃಶ್ಯಗಳಿಗೆ ರೀಲ್ಸ್ ಮಾಡಬೇಡಿ ಎಂಬ ರಿಷಬ್ ಶೆಟ್ಟಿ ಅವರ ಹೇಳಿಕೆಗೆ ಚೇತನ್ ಅಹಿಂಸಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೈವದ ವೇಷ ಹಾಕಿ, ಆದಿವಾಸಿಗಳ ಆಚರಣೆಯನ್ನು ಹೈಜಾಕ್ ಮಾಡಿ ನೀವು ಕೋಟಿ ಕೋಟಿ ಹಣ ಮಾಡಿಕೊಂಡು ಇತರರು ದೈವದ ವೇಷದಲ್ಲಿ ರೀಲ್ ಮಾಡುವಂತಿಲ್ಲ ಎನ್ನುವುದು ತಪ್ಪು ಎಂಬರ್ಥದಲ್ಲಿ ಚೇತನ್ ಅಹಿಂಸಾ ರಿಷಬ್ ಶೆಟ್ಟಿಗೆ ಟಾಂಗ್ ನೀಡಿದ್ದಾರೆ.

    ಚೇತನ್ ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಬರೆದುಕೊಂಡಿದ್ದಾರೆ: "ಕೋಟಿಗಟ್ಟಲೆ ದುಡ್ಡು ಮತ್ತು ಆರ್ಥಿಕ ಲಾಭಕ್ಕಾಗಿ ನಮ್ಮ ಆದಿವಾಸಿ ಸಂಸ್ಕೃತಿಯನ್ನು ಹೈಜಾಕ್ ಮಾಡಿ ಉಪಯೋಗಿಸಿಕೊಂಡು, ನಮ್ಮ ಮೂಲನಿವಾಸಿಗಳನ್ನು ಯಾವುದೇ ರೀತಿಯಲ್ಲೂ ಎತ್ತಿ ಹಿಡಿಯುವ ಕೆಲಸ ಮಾಡದೇ ಇರುವವರು, ಬೇರೆಯವರು ಇತರೆ ವಯಕ್ತಿಕ ಕ್ಷೇತ್ರಗಳಲ್ಲಿ ಆ ರೀತಿ ತೋರಿಸಬಾರದು ಎಂದು ಆದೇಶಿಸುವುದು ವಿಪರ್ಯಾಸ. ನೀವು ಅದನ್ನು ತೋರಿಸಬಹುದಾದರೆ, ಇತರರು ಕೂಡ ತೋರಿಸಬಹುದು. ಪ್ರಜಾಪ್ರಭುತ್ವಕ್ಕೆ ಸ್ವಾಗತ"

    ಚೇತನ್ ವಾದಕ್ಕೆ ಸೈ ಎಂದವರೂ ಉಂಟು

    ಚೇತನ್ ವಾದಕ್ಕೆ ಸೈ ಎಂದವರೂ ಉಂಟು

    ಇನ್ನು ಕಳೆದ ಬಾರಿ ದೈವಾರಾಧನೆ ಹಿಂದೂ ಸಂಸ್ಕೃತಿಯದ್ದಲ್ಲ ಎಂದು ಪೋಸ್ಟ್ ಮಾಡಿದ್ದಾಗ ಭಾರೀ ವಿರೋಧ ಹಾಗೂ ಟೀಕೆಗೆ ಒಳಗಾಗಿದ್ದ ಚೇತನ್ ಅಹಿಂಸಾ ಈ ಬಾರಿ ರೀಲ್ಸ್ ವಿರುದ್ಧ ದನಿ ಎತ್ತಿದ್ದಕ್ಕೆ ಕೆಲ ನೆಟ್ಟಿಗರಿಂದ ಬೆಂಬಲವನ್ನೂ ಸಹ ಪಡೆದುಕೊಂಡಿದ್ದಾರೆ. ಹೌದು, ಚೇತನ್ ಹೇಳುತ್ತಿರುವುದರಲ್ಲಿ ಅರ್ಥವಿದೆ, ರಿಷಬ್ ಶೆಟ್ಟಿ ಮಾತ್ರ ದೈವದ ವೇಷ ಹಾಕಿ ನಟಿಸಬಹುದು, ಉಳಿದವರು ಅದೇ ರೀತಿ ವೇಷ ಹಾಕಿ ನಟಿಸಿದರೆ ತಪ್ಪೇನು ಎಂದು ಕಾಮೆಂಟ್ ಮಾಡಿ ಚೇತನ್ ಪರ ಬ್ಯಾಟ್ ಬೀಸಿದ್ದಾರೆ. ಇನ್ನೂ ಕೆಲವರು ಆ ರೀತಿ ಸುಖಾಸುಮ್ಮನೆ ರೀಲ್ಸ್ ಮಾಡಿದ್ರೆ ಒಳ್ಳೆಯದಾಗುವುದಿಲ್ಲ ಎಂದೂ ಸಹ ಕಾಮೆಂಟ್ ಮಾಡಿದ್ದಾರೆ.

    ರಿಷಬ್ ಶೆಟ್ಟಿ ಹೇಳಿದ್ದಿಷ್ಟು

    ರಿಷಬ್ ಶೆಟ್ಟಿ ಹೇಳಿದ್ದಿಷ್ಟು

    ಇನ್ನು ಚೇತನ್ ಈ ರೀತಿ ಹೇಳಿಕೆ ನೀಡಲು ಕಾರಣವಾಗಿದ್ದು ರೀಲ್ಸ್ ಮಾಡಬೇಡಿ ಎಂದು ರಿಷಬ್ ಶೆಟ್ಟಿ ಎಂದು ಹೇಳಿದ್ದು. ರೀಲ್ಸ್ ಮಾಡಬೇಡಿ ಎನ್ನುವ ರಿಷಬ್ ಶೆಟ್ಟಿ ತಾನು ದೈವದ ಪಾತ್ರ ಮಾಡುವಾಗ ಅದರದ್ದೇ ಆದ ಹಲವಾರು ಕಠಿಣ ನಿಯಮಗಳನ್ನು ಅನುಸರಿಸಿದ್ದೆ, ತಿಂಗಳುಗಳ ಕಾಲ ಮಾಂಸಹಾರ ಸೇವಿಸಿರಲಿಲ್ಲ, ಕಾಲಿಗೆ ಚಪ್ಪಲಿಯನ್ನೂ ಸಹ ಹಾಕಿರಲಿಲ್ಲ, ಆದರೆ ರೀಲ್ಸ್ ಮಾಡುವವರು ದೈವದ ನಿಯಮಗಳನ್ನು ಅನುಸರಿಸದೇ ದೈವವನ್ನು ಅನುಕರಿಸುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

    English summary
    When Rishab made money by doing daiva role in Kantara why others shouldn't do says Chethan Ahimsa. Read on
    Saturday, December 3, 2022, 13:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X