For Quick Alerts
  ALLOW NOTIFICATIONS  
  For Daily Alerts

  ಚಿತ್ರಮಂದಿರದಲ್ಲಾ? ಒಟಿಟಿಯಲ್ಲಾ? '777 ಚಾರ್ಲಿ' ಬಿಡುಗಡೆ ಯಾವಾಗ? ರಕ್ಷಿತ್ ಶೆಟ್ಟಿ ಕೊಟ್ಟ ಉತ್ತರ

  |

  ನಿನ್ನೆಯಷ್ಟೆ (ಜೂನ್ 6)ಕ್ಕೆ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ಅಂಗವಾಗಿ ಅವರ ನಟನೆಯ '777 ಚಾರ್ಲಿ' ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಟೀಸರ್ ಸಖತ್ ವೈರಲ್ ಆಗಿದ್ದು, ಸಿನಿಮಾ ಬಿಡುಗಡೆ ಬೇಗ ಮಾಡುವಂತೆ ಒತ್ತಾಯಗಳು ಸಹ ಚಿತ್ರತಂಡಕ್ಕೆ ಬರುತ್ತಿದೆ.

  ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುತ್ತಾರಾ ಅಥವಾ ಚಿತ್ರಮಂದಿರದಲ್ಲಾ? ಎಂಬ ಚರ್ಚೆಯೂ ಸಹ ಸಾಮಾಜಿಕ ಜಾಲತಾಣದಲ್ಲಿ ನಡೆದಿತ್ತು. ತಮ್ಮ ಸಿನಿಮಾದ ಬಗ್ಗೆ ಮಾತನಾಡಲೆಂದೇ ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದ ರಕ್ಷಿತ್ ಶೆಟ್ಟಿ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

  '777 ಚಾರ್ಲಿ' ಸಿನಿಮಾ ಒಂದು ಅದ್ಭುತ ದೃಶ್ಯಿಕ ಅನುಭವ ಆಗಲಿದೆ. ಬಹಳ ಉತ್ತಮವಾಗಿ ಸಿನಿಮಾ ಮೂಡಿಬಂದಿದೆ. ಈ ಸುಂದರ ಸಿನಿಮಾದ ಅನುಭವವನ್ನು ಚಿತ್ರಮಂದಿರದಲ್ಲಿಯೇ ಪಡೆದುಕೊಳ್ಳಬೇಕು. ಹಾಗಾಗಿ ನಾವು ಚಿತ್ರಮಂದಿರದಲ್ಲಿಯೇ ಸಿನಿಮಾ ಬಿಡುಗಡೆ ಮಾಡಲಿದ್ದೇವೆ ಎಂದಿದ್ದಾರೆ.

  ಸಿನಿಮಾದ ಬಿಡುಗಡೆ ಯಾವಾಗ?

  ಸಿನಿಮಾದ ಬಿಡುಗಡೆ ಯಾವಾಗ?

  ಸಿನಿಮಾದ ಬಿಡುಗಡೆ ಯಾವಾಗ? ಎಂಬ ಪ್ರಶ್ನೆಗೆ ಉತ್ತರಿಸಿರುವ ರಕ್ಷಿತ್ ಶೆಟ್ಟಿ, 'ಸಿನಿಮಾವನ್ನು ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆ ಮಾಡುವ ಇರಾದೆ ನಮಗಿದೆ. ಬಿಡುಗಡೆ ದಿನಾಂಕದ ಮೇಲೆ ಹಲವು ವಿಷಯಗಳು ಪ್ರಭಾವ ಬೀರುತ್ತವೆ ಹಾಗಾಗಿ ಈಗಲೇ ದಿನಾಂಕ ಘೋಷಣೆ ಕಷ್ಟ. ಸೆಪ್ಟೆಂಬರ್ ಅಥವಾ ಅಕ್ಟೋಬರ್‌ ಬಿಡುಗಡೆ ನಮ್ಮ ಆಯ್ಕೆ' ಎಂದಿದ್ದಾರೆ ರಕ್ಷಿತ್ ಶೆಟ್ಟಿ.

  ಬಿಡುಗಡೆ ದಿನಾಂಕ ನಿಗದಿಯಾದ ಮೇಲೆ ಟ್ರೇಲರ್

  ಬಿಡುಗಡೆ ದಿನಾಂಕ ನಿಗದಿಯಾದ ಮೇಲೆ ಟ್ರೇಲರ್

  ಸಿನಿಮಾ ಬಿಡುಗಡೆ ದಿನಾಂಕ ಖಚಿತಗೊಂಡ ಕೂಡಲೇ ಟ್ರೇಲರ್ ಬಿಡುಗಡೆ ಮಾಡುತ್ತೇವೆ. ಆದರೆ ಅದಕ್ಕೆ ಮುನ್ನಾ ಹಾಡೊಂದನ್ನು ಬಿಡುಗಡೆ ಮಾಡಲಿದ್ದೇವೆ. ಟೀಸರ್‌ ಬಿಡುಗಡೆ ಬಳಿಕ ಒಳ್ಳೆ ಪ್ರತಿಕ್ರಿಯೆಗಳು ನಮಗೆ ದೊರೆತಿವೆ. ಸಿನಿಮಾ ಬಿಡುಗಡೆ ವಿಚಾರದಲ್ಲಿ ಕಳೆದ ಬಾರಿ ಆದಂತೆ ತಪ್ಪುಗಳು ಆಗಲು ಬಿಡುವುದಿಲ್ಲ ಎಲ್ಲಾ ಯೋಜಿಸಿ ಮಾಡುತ್ತಿದ್ದೇವೆ' ಎಂದರು ರಕ್ಷಿತ್ ಶೆಟ್ಟಿ.

  ಟೀಸರ್‌ಗೆ ಅದ್ಭುತ ಪ್ರತಿಕ್ರಿಯೆ ದೊರೆತಿದೆ

  ಟೀಸರ್‌ಗೆ ಅದ್ಭುತ ಪ್ರತಿಕ್ರಿಯೆ ದೊರೆತಿದೆ

  ಟೀಸರ್‌ಗೆ ಅದ್ಭುತವಾದ ಪ್ರತಿಕ್ರಿಯೆ ದೊರೆತಿದೆ ಎಂದ ರಕ್ಷಿತ್ ಶೆಟ್ಟಿ. ಚಾರ್ಲಿಯನ್ನು ಪರಿಚಯಿಸುವ ಉದ್ದೇಶದಿಂದಲೇ ಟೀಸರ್ ಬಿಟ್ಟಿದ್ದು, ಸಿನಿಮಾದಲ್ಲಿ ನಾನೂ ಇದ್ದೀನಿ ಎಂದು ತೋರಿಸುವ ಕಾರಣಕ್ಕೆ ನನ್ನದೊಂದು ಸಣ್ಣ ಸೀನ್ ಸೇರಿಸಿದ್ದಾರೆ ಎಂದು ನಕ್ಕರು ರಕ್ಷಿತ್ ಶೆಟ್ಟಿ. ಸಿನಿಮಾದ ಟೀಸರ್ ಐದು ಭಾಷೆಯಲ್ಲಿ ನಿನ್ನೆ ಬಿಡುಗಡೆ ಆಗಿದೆ.

  ಎಲ್ಲಾ ಮುಗಿದು ಹೋದ ಕಥೆ, ಇದನ್ನೆಲ್ಲಾ ನೋಡಿದ್ರೆ ನೋವಾಗುತ್ತೆ | Filmibeat Kannada
  ಸಿನಿಮಾದ ತಂಡವನ್ನು ಶ್ಲಾಘಿಸಿದ ರಕ್ಷಿತ್ ಶೆಟ್ಟಿ

  ಸಿನಿಮಾದ ತಂಡವನ್ನು ಶ್ಲಾಘಿಸಿದ ರಕ್ಷಿತ್ ಶೆಟ್ಟಿ

  ಸಿನಿಮಾದ ತಂಡದ ಬಗ್ಗೆ ಹೇಳಿದ ರಕ್ಷಿತ್ ಶೆಟ್ಟಿ, ನಿರ್ದೇಶಕ ಕಿರಣ್ ರಾಜ್ ಸಿನಿಮಾದ ನಿಜವಾದ ಹೀರೋ ಅದ್ಭುತವಾಗಿ ಅವರು ಸಿನಿಮಾವನ್ನು ರೆಡಿ ಮಾಡಿದ್ದಾರೆ ಎಂದರು. ಜೊತೆಗೆ ಸಂಕಲನಕಾರ, ಸಂಗೀತ ನಿರ್ದೇಶಕ ಹಾಗೂ ಸಿನಿಮಾಟೋಗ್ರಾಫರ್ ಕಾರ್ಯವನ್ನು ಬಹುವಾಗಿ ಶ್ಲಾಘಿಸಿದರು ರಕ್ಷಿತ್ ಶೆಟ್ಟಿ.

  English summary
  Rakshit Shetty talked about '777 Charlie' movie. He said we want to release the movie by September or October.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X