ಈ ನಾಲ್ಕು ಸಂದರ್ಭದಲ್ಲಿ ದರ್ಶನ್-ಸುದೀಪ್ ಭೇಟಿಯಾಗುವ ಸಾಧ್ಯತೆ ಇದೆ.!

By Bharath Kumar

Recommended Video

ದರ್ಶನ ಸುದೀಪ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರಾ? ಅದಕ್ಕೆ ಪೂರಕ ಈ 4 ಸಂದರ್ಭಗಳು | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಅವರ ನಡುವಿನ ಮನಸ್ತಾಪ ಅಂತ್ಯವಾಗಿದೆ ಎಂಬ ಮಾತುಗಳು ಇಂಡಸ್ಟ್ರಿಯಲ್ಲಿ ಕೇಳಿಬರುತ್ತಿದೆ. ಕೆಲ ವೈಯಕ್ತಿಕ ವಿಷ್ಯಗಳಿಗೆ ಇಬ್ಬರು ಬೇರೆ ಬೇರೆಯಾಗಿದ್ದರು. ಆದ್ರೆ, ಚಿತ್ರರಂಗದ ಕೆಲವು ಹಿರಿಯರು ಈ ಇಬ್ಬರನ್ನ ಒಂದು ಗೂಡಿಸುವ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ಹಾಗಿದ್ಮೇಲೆ, ಇಬ್ಬರನ್ನ ಒಟ್ಟಿಗೆ ನೋಡೋದು ಯಾವಾಗ ಎಂಬ ಪ್ರಶ್ನೆ ಇಬ್ಬರು ಅಭಿಮಾನಿಗಳದ್ದು. ಅದಕ್ಕೆ ಸ್ಯಾಂಡಲ್ ವುಡ್ ನಲ್ಲಿ ವೇದಿಕೆ ಕೂಡ ನಿರ್ಮಾಣವಾಗುತ್ತಿದೆ.

ಕನ್ನಡದ ಚಿತ್ರರಂಗದ ಪಾಲಿಗೆ ತುಂಬಾ ಮುಖ್ಯವಾಗಿರುವ ಕೆಲವು ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ನಡೆಯಲಿದೆ. ಈ ವೇದಿಕೆಗಳಲ್ಲಿ ದಾಸ ದರ್ಶನ್ ಮತ್ತು ಕಿಚ್ಚ ಸುದೀಪ್ ಒಂದಾಗಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ, ಈ ಇಬ್ಬರು ಸ್ಟಾರ್ ಗಳು ಒಟ್ಟಿಗೆ ಕಾಣಿಸಿಕೊಳ್ಳುವ ಸಾಧ್ಯತೆಗಳು ಎಲ್ಲಿವೆ.? ಮುಂದೆ ಓದಿ.....

'ಅಂಬಿ ನಿಂಗ್ ವಯಸ್ಸಾಯ್ತೋ' ಆಡಿಯೋ ರಿಲೀಸ್

'ಅಂಬಿ ನಿಂಗ್ ವಯಸ್ಸಾಯ್ತೋ' ಆಡಿಯೋ ರಿಲೀಸ್

ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಕಿಚ್ಚ ಸುದೀಪ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಆಡಿಯೋ ಬಿಡುಗಡೆಗೆ ಕನ್ನಡ ಚಿತ್ರರಂಗದ ಸ್ಟಾರ್ ನಟರು ಹಾಗೂ ಇತರೆ ಇಂಡಸ್ಟ್ರಿಯ ಸೂಪರ್ ಸ್ಟಾರ್ ಗಳು ಬರಲಿದ್ದಾರಂತೆ. ಹೀಗಾಗಿ, ಈ ವೇದಿಕೆಯಲ್ಲಿ ದರ್ಶನ್ ಮತ್ತು ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಕಾಡುತ್ತಿದೆ.

ಅಂಬಿಗೋಸ್ಕರ ಬರ್ತಾರೆ ದಾಸ.!

ಅಂಬಿಗೋಸ್ಕರ ಬರ್ತಾರೆ ದಾಸ.!

ಅಂಬರೀಶ್ ಅವರಿಗೊಸ್ಕರ ರಜನಿಕಾಂತ್, ಚಿರಂಜೀವಿ ಸೇರಿದಂತೆ ಹಲವು ಸ್ಟಾರ್ ಗಳು ಬರುವ ಸಾಧ್ಯತೆ ಇದೆ. ಅದೆ ರೀತಿ ಅಂಬರೀಶ್ ಅವರ ಕಾರ್ಯಕ್ರಮ ಅಂದ್ಮೇಲೆ ದರ್ಶನ್ ಬರಲ್ವಾ ಅಂಬ ನಿರೀಕ್ಷೆ. ಹೇಳಿ ಕೇಳಿ ಅಂಬರೀಶ್ ಅವರ ಮಾತನ್ನ ದರ್ಶನ್ ಮೀರಲ್ಲ. ಇನ್ನು ಅಂಬಿಯ ಸಿನಿಮಾ ಅಂದ್ಮೇಲೆ ದಾಸ ಬರೋದು ಪಕ್ಕಾ ಎನ್ನಲಾಗಿದೆ. ಈ ಸಿನಿಮಾಗೆ ನಿರ್ಮಾಪಕ ಕಿಚ್ಚ ಸುದೀಪ್ ಮತ್ತು ಜಾಕ್ ಮಂಜು. ಒಂದು ವೇಳೆ ದರ್ಶನ್ ಬಂದ್ರೆ, ದರ್ಶನ್ ಸ್ವಾಗತವನ್ನ ಸುದೀಪ್ ಸ್ವತಃ ಸುದೀಪ್ ಅವರೇ ಮಾಡಬಹುದು ಎಂಬ ಲೆಕ್ಕಾಚಾರ ಇದೆ.

'ಕುರುಕ್ಷೇತ್ರ' ಆಡಿಯೋ ರಿಲೀಸ್

'ಕುರುಕ್ಷೇತ್ರ' ಆಡಿಯೋ ರಿಲೀಸ್

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಸಿನಿಮಾ 'ಕುರುಕ್ಷೇತ್ರ'. ಕನ್ನಡದ ಹಲವು ಹಿರಿಯ ನಟರು ಅಭಿನಯಿಸಿರುವ ಬಹುಕೋಟಿ ವೆಚ್ಚದ ಸಿನಿಮಾ. ಈ ಚಿತ್ರದಲ್ಲೂ ಅಂಬರೀಶ್ ಕಾಣಿಸಿಕೊಂಡಿದ್ದಾರೆ. ಮುನಿರತ್ನ ನಿರ್ಮಾಣ ಮಾಡುತ್ತಿರುವ ಈ ಚಿತ್ರ ಸ್ಯಾಂಡಲ್ ವುಡ್ ಪಾಲಿಗೆ ತುಂಬಾ ವಿಶೇಷವಾದ ಚಿತ್ರವಾಗಿರಲಿದೆ. ಹೀಗಾಗಿ, ಈ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ಶೀಘ್ರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರಿಗೆ ಆಹ್ವಾನ ನೀಡಬಹುದು. ಇದು ಸಾಧ್ಯವಾದ್ರೆ, ದರ್ಶನ್ ಸಿನಿಮಾಗಾಗಿ ಸುದೀಪ್ ಬರ್ತಾರೆ.

'ಕೆಸಿಸಿ' ಕ್ರಿಕೆಟ್ ಟೂರ್ನಿ

'ಕೆಸಿಸಿ' ಕ್ರಿಕೆಟ್ ಟೂರ್ನಿ

ಕನ್ನಡದ ಸ್ಟಾರ್ ನಟರು ಹಾಗೂ ಅಂತರಾಷ್ತ್ರೀಯ ಕ್ರಿಕೆಟ್ ಆಟಗಾರರು ಸೇರಿ ಆಡುತ್ತಿರುವ ಕ್ರಿಕೆಟ್ ಟೂರ್ನಮೆಂಟ್ ಕೆಸಿಸಿ. ಸುದೀಪ್ ಮಾರ್ಗದರ್ಶನದಲ್ಲಿ ಈ ಟೂರ್ನಿ ಆಯೋಜನೆ ಆಗುತ್ತಿದೆ. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಗಣೇಶ್, ಉಪೇಂದ್ರ, ದಿಗಂತ್, ರಕ್ಷಿತ್ ಶೆಟ್ಟಿ, ಯಶ್ ಸೇರಿದಂತೆ ಎಲ್ಲರು ಆಡುತ್ತಿದ್ದಾರೆ. ಆದ್ರೆ, ದರ್ಶನ್ ಒಬ್ಬರು ಭಾಗಿಯಾಗಿಲ್ಲ. ಹೀಗಾಗಿ, ದರ್ಶನ್ ಮತ್ತು ಸುದೀಪ್ ಸ್ನೇಹ ಮತ್ತೆ ಒಂದಾಗಿರುವುದು ನಿಜವಾದರೇ ಈ ಟೂರ್ನಿಯನ್ನ ನೋಡುವುದಕ್ಕಾದರೂ ದಾಸ ಬರಬಹುದು.

ಸುದೀಪ್ ಬರ್ತಡೇ

ಸುದೀಪ್ ಬರ್ತಡೇ

ಇಷ್ಟೆಲ್ಲಾ ದೊಡ್ಡ ದೊಡ್ಡ ಕಾರ್ಯಕ್ರಮಗಳ ಮಧ್ಯೆ ಸೆಪ್ಟಂಬರ್ 1 ರಂದು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ. ಈ ಹಿಂದಿನ ಬರ್ತಡೇಗಳಿಗೆ ದರ್ಶನ್ ಮತ್ತು ಸುದೀಪ್ ಭೇಟಿ ಮಾಡುತ್ತಿದ್ದರು. ಆದ್ರೆ, ಕಳೆದ ವರ್ಷದಿಂದ ಆ ಭೇಟಿಯಾಗುತ್ತಿಲ್ಲ. ಈ ವರ್ಷವಾದರೂ ಸುದೀಪ್ ಗೆ ದರ್ಶನ್ ಶುಭಕೋರುವುದಾಗಲಿ ಅಥವಾ ಭೇಟಿ ಮಾಡುವುದಾಗಲಿ ಆಗುತ್ತಾ ಎಂದು ಕಾದುನೋಡಬೇಕಿದೆ.

More from Filmibeat

English summary
Kannada actor darshan and kiccha sudeep will meet in ambi ninge vayassaytho movie audio release event. the movie starrer rebel star ambareesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X