ದರ್ಶನ್ ಜೈಲಿನಿಂದ ಹೊರ ಬರೋದು ಯಾವಾಗ..? ಇಲ್ಲಿದೆ ಉತ್ತರ..!
ದರ್ಶನ್ ರಂಥ ನಂ.1 ಹೀರೋ ಸುಮ್ಮನೇ ಕೂತರೆ ಅವರಿಗೆ ಮಾತ್ರವಲ್ಲ, ಇಡೀ ಚಿತ್ರರಂಗಕ್ಕೇ ನಷ್ಟ ಗ್ಯಾರೆಂಟಿ. ಈ ಹಿನ್ನೆಲೆಯಲ್ಲಾದರೂ ಬಾಸ್ ಇಮೀಡಿಯೆಟ್ಟಾಗಿ ಬಣ್ಣ ಹಚ್ಚಲೇಬೇಕಿರುವ ಅನಿವಾರ್ಯತೆ ಇದೆ ಹೀಗಾಗಿಯೇ ಅವರನ್ನು ಜೈಲಿಂದ ಬಿಡುಗಡೆ ಮಾಡಬೇಕು ಅನ್ನುವುದು ಅಭಿಮಾನಿಗಳ ಹಕ್ಕೋತ್ತಾಯ.
ಆದರೆ. ಆ ಕಾಲಕ್ಕೆ ಕರುನಾಡು ಯಾವತ್ತು ಸಾಕ್ಷಿಯಾಗಲಿದೆ ಅನ್ನುವುದು ಇನ್ನೂ ಗೊತ್ತಿಲ್ಲ. ಹೀಗಿರುವಾಗ ಕೊಪ್ಪಳದ ಕೌಡೇಪಿರ ಲಾಲಸಾಬ ದೇವರು ನುಡಿದ ಭವಿಷ್ಯ ಸದ್ಯಕ್ಕೆ ದರ್ಶನ್ ಅವರ ಅಸಂಖ್ಯಾತ.. ಅಗಣಿತ.. ಅಭಿಮಾನಿಗಳಿಗೆಅಲ್ಪಮಟ್ಟಿಗೆ ಸಮಾಧಾನವನ್ನೂ ನೀಡಿದೆ.

ಹೌದು.. ಮೊಹರಂ ಸಂದರ್ಭದಲ್ಲಿ ದೇವರನ್ನು ಕೂರಿಸೋ ಪದ್ಧತಿ ಮುಸ್ಲಿಂ ಧರ್ಮದಲ್ಲಿ ಇದೆ. ಅದೇ ರೀತಿ ಕೊಪ್ಪಳದಲ್ಲಿ ಕೌಡೇಪಿರ ಲಾಲಸಾಬ ದೇವರನ್ನು ಪ್ರತಿಷ್ಠಾಪಿಸಿದ್ದರು. ಇದೇ ಸಮಯದಲ್ಲಿ ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದ 10ನೇ ವಾರ್ಡಿನಲ್ಲಿ ಇರಿಸಲಾಗಿದ್ದ ಕೌಡೇಪಿರ ಲಾಲಸಾಬ ದೇವರು ಎದುರು, ದರ್ಶನ್ ಅವರ ಅಭಿಮಾನಿಗಳು ಪ್ರಶ್ನೆಯನ್ನು ಇಟ್ಟಿದ್ದರು. 'ದರ್ಶನ್ ಬಿಡುಗಡೆ ಯಾವಾಗ' ಎನ್ನುವ ಪ್ರಶ್ನೆ ಕೇಳಿದ್ದರು.
ಅಭಿಮಾನಿಗಳ ಈ ಪ್ರಶ್ನೆಗೆ ಕೆಲ ಸಮಯ ಯಾವುದೇ ಉತ್ತರ ನೀಡಿದೇ ಮೌನ ವಹಿಸಿದ್ದ ಕೌಡೇಪಿರ ದೇವರು, ಆ ನಂತರ ಉತ್ತರ ನೀಡಿದ್ದಾರೆ. ಮೂರೇ ತಿಂಗಳಲ್ಲಿ ದರ್ಶನ್ ಹೊರಕ್ಕೆ ಬರುತ್ತಾರೆ' ಎಂದು ದೇವರು ಭವಿಷ್ಯ ನುಡಿದಿದ್ದಾರೆ. ದೇವರು ನುಡಿದ ಈ ಭವಿಷ್ಯವನ್ನೂ ಕೇಳಿ ಸದ್ಯಕ್ಕೆ ಕೊಪ್ಪಳದಲ್ಲಿನ ಅಭಿಮಾನಿಗಳು ಸೇರಿ ರಾಜ್ಯದ ನಾನಾ ಭಾಗದಲ್ಲಿರುವ ದರ್ಶನ್ ಅವರ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಯಾಕೆಂದರೆ ಹಿಂದೊಮ್ಮೆ 2019ರಲ್ಲಿ ಅಕ್ರಮ ಹಣವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ಮತ್ತು ಪ್ರಸ್ತುತ ಉಪಮುಖ್ಯಮಂತ್ರಿಯಾಗಿರುವ ಡಿಕೆ ಶಿವಕುಮಾರ್ ಅರೆಸ್ಟ್ ಆಗಿದ್ದರು. ಆ ಸಂದರ್ಭದಲ್ಲೂ ಕೂಡ ಕೌಡೇಪಿರ ಲಾಲಸಾಬ ದೇವರು ಭವಿಷ್ಯ ನುಡಿದಿದ್ದರು. ಅವತ್ತು ಡಿ.ಕೆ.ಶಿವರಾಜ್ ಕುಮಾರ್ ಅವರ ವಿಚಾರದಲ್ಲಿ ನುಡಿದ ಭವಿಷ್ಯ ನಿಜವೂ ಆಗಿತ್ತು.
ಅಂದ್ಹಾಗೇ ಇನ್ನೊಂದು ಹದಿನೈದು ದಿನ ಉರುಳಿದರೆ, ದರ್ಶನ್ ಕಂಬಿ ಹಿಂದೆ ಹೋಗಿ ಎರಡು ತಿಂಗಳಾಗಲಿವೆ. ಇನ್ನೂ.. ದರ್ಶನ್ ಅವರಿಗೆ ಸದ್ಯಕ್ಕೆ ಜೈಲೂಟ ಹೊಂದುತ್ತಿಲ್ಲ. ಚಾರ್ಜ್ಶೀಟ್ ಸಲ್ಲಿಕೆ ಮಾಡದೆ ಜಾಮೀನಿಗೆ ಅರ್ಜಿ ಹಾಕಲು ಕೂಡ ಸಾಧ್ಯ ಇಲ್ಲ. ಹೀಗಾಗಿ, ಮುಂದೇನು ಎಂದು ದರ್ಶನ್ ದಿಕ್ಕು ತೋಚದ ಪರಿಸ್ಥಿತಿಯಲ್ಲಿದ್ದಾರೆ. ಇತ್ತ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಹೇಗಾದರೂ ಮಾಡಿ ತಮ್ಮ ಪತಿ ದರ್ಶನ್ ಅವರನ್ನು ಜೈಲಿಂದ ಹೊರಗಡೆ ಕರೆತರಬೇಕು ಎಂದು ಹೋರಾಡುತ್ತಿದ್ದಾರೆ. ಆದರೆ ವಿಜಯಲಕ್ಷ್ಮೀ ದರ್ಶನ್ ಅವರಿಗೆ ಪದೇ ಪದೇ ಹಿನ್ನೆಡೆ ಆಗುತ್ತಿದೆ. ಮನೆಯೂಟ ಬೇಕೆಂದು ದರ್ಶನ್ ಸಲ್ಲಿಸಿದ್ದ ಅರ್ಜಿ ಕೂಡ ವಜಾ ಆಗಿದೆ.

ಹೌದು. ಜೈಲೂಟ ಒಗ್ಗದ ಕಾರಣ, ಮನೆಯೂಟಕ್ಕೆ ದರ್ಶನ್ ಬೇಡಿಕೆ ಇಟ್ಟಿದ್ದರು. ಬಟ್ಟೆ ಮತ್ತು ಹಾಸಿಗೆಯನ್ನೂ ಮನೆಯಿಂದ ತರಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಜುಲೈ 22ರಂದು ಅರ್ಜಿ ವಿಚಾರಣೆ ಮಾಡಲಾಗಿತ್ತು. ಇಂದು ಆದೇಶ ಕಾಯ್ದಿರಿಸಲಾಗಿತ್ತು. ಅದರಂತೆ ಇಂದು 24ನೇ ಎಸಿಎಂಎಂ ಕೋರ್ಟ್ ಇಂದು ಆದೇಶ ನೀಡಿದೆ. ಜೈಲು ನಿಯಮಾವಳಿ 728ರಲ್ಲಿ ಮನೆಯ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶವಿಲ್ಲ. ಹೀಗಾಗಿ ದರ್ಶನ್ ಕೊಲೆ ಆರೋಪಿ ಆಗಿರುವುದರಿಂದ ಈ ಸೌಲಭ್ಯ ಕೊಡಲಾಗುವುದಿಲ್ಲ ಎಂದಿದೆ.ಈ ಕಾರಣಕ್ಕೆ ಹೈಕೋರ್ಟ್ ಮೊರೆ ಹೋಗಿರುವ ದರ್ಶನ್ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಜುಲೈ 29 ಕ್ಕೆ ನಿಗದಿಯಾಗಿದೆ.


Click it and Unblock the Notifications











