ಕನ್ನಡ ವಿರೋಧಿ ಕಟ್ಟಪ್ಪ ಈಗಲಾದರೂ ಬಾಯ್ಬಿಟ್ಟು ಕ್ಷಮೆ ಕೇಳಪ್ಪ.!

By ಒನ್ಇಂಡಿಯಾ ಕನ್ನಡ ವಾರ್ತೆ

'ಬಾಹುಬಲಿ-2' ಚಿತ್ರದ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ವಿರುದ್ಧ ಕನ್ನಡಿಗರು ಗರಂ ಆಗಿ ಸುಮಾರು ತಿಂಗಳುಗಳು ಕಳೆದಿವೆ. ಕಾವೇರಿ ನೀರು ವಿವಾದಕ್ಕೆ ಸಂಬಂಧಪಟ್ಟಂತೆ ಕನ್ನಡಿಗರನ್ನ ನಿಂದಿಸಿರುವ ತಮಿಳು ನಟ ಸತ್ಯರಾಜ್ ವಿರುದ್ಧ ಕನ್ನಡಿಗರ ಹೃದಯದಲ್ಲಿ ರೋಷಾಗ್ನಿ ಹೊತ್ತಿ ಉರಿಯುತ್ತಿದೆ.

'ಕನ್ನಡಿಗರಲ್ಲಿ ಸತ್ಯರಾಜ್ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ, ಸತ್ಯರಾಜ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ 'ಬಾಹುಬಲಿ-2' ಬಿಡುಗಡೆಗೆ ಅವಕಾಶ ನೀಡುವುದಿಲ್ಲ' ಎಂದು ಕನ್ನಡಿಗರು ತೊಡೆ ತಟ್ಟಿ ನಿಂತು ಬಹುಕಾಲವೇ ಆಯ್ತು.[ಕಟ್ಟಪ್ಪ ಕ್ಷಮೆ ಕೇಳುವವರೆಗೂ 'ಬಾಹುಬಲಿ-2' ಬಿಡುಗಡೆ ಇಲ್ಲ.! ಇದು ಕನ್ನಡಿಗರ ಕಟ್ಟಪ್ಪಣೆ.!]

ಆದರೂ, ಸತ್ಯರಾಜ್ ಇನ್ನೂ ತುಟಿ ಎರಡು ಮಾಡಿಲ್ಲ. 'ಬಾಹುಬಲಿ-2' ಬಿಡುಗಡೆಗೆ ಇನ್ನೇನು ದಿನಗಣನೆ ಆರಂಭವಾಗಿದೆ. ಕಟ್ಟಪ್ಪ ಇನ್ಮೇಲಾದರೂ ಕ್ಷಮೆ ಕೇಳಪ್ಪ. ಮುಂದೆ ಓದಿ....

'ಬಾಹುಬಲಿ' ನಿರ್ದೇಶಕ ರಾಜಮೌಳಿ ಮನವಿ ಮಾಡಿದ್ದಾರೆ

'ಬಾಹುಬಲಿ' ನಿರ್ದೇಶಕ ರಾಜಮೌಳಿ ಮನವಿ ಮಾಡಿದ್ದಾರೆ

''ಸತ್ಯರಾಜ್ ಕೊಟ್ಟಿರುವ ಹೇಳಿಕೆಗೂ ನಮಗೂ ಸಂಬಂಧವಿಲ್ಲ. ಅದು ಅವರ ವೈಯುಕ್ತಿಕ ಅಭಿಪ್ರಾಯ. ಸತ್ಯರಾಜ್ ಮೇಲಿರುವ ಕೋಪವನ್ನ 'ಬಾಹುಬಲಿ-2' ಚಿತ್ರದ ಮೇಲೆ ತೋರಿಸಬೇಡಿ. ಸತ್ಯರಾಜ್ 'ಬಾಹುಬಲಿ' ಚಿತ್ರದ ನಿರ್ದೇಶಕ ಅಲ್ಲ, ನಿರ್ಮಾಪಕನೂ ಅಲ್ಲ. ಕೇವಲ ನಟ ಮಾತ್ರ. 'ಬಾಹುಬಲಿ' ಚಿತ್ರದ ಬಿಡುಗಡೆಗೆ ತೊಂದರೆ ಮಾಡಿದರೆ, ಸತ್ಯರಾಜ್ ಗೆ ಆಗುವ ನಷ್ಟ ಏನಿಲ್ಲ'' ಅಂತ ನಿರ್ದೇಶಕ ಎಸ್.ಎಸ್.ರಾಜಮೌಳಿ ಇಂದು ವಿಡಿಯೋ ಮೂಲಕ ಕನ್ನಡಿಗರನ್ನ ಮನವಿ ಮಾಡಿದ್ದಾರೆ.[ತಪ್ಪದೆ ವಿಡಿಯೋ ನೋಡಿ: ರಾಜಮೌಳಿಗೆ 'ಕನ್ನಡ' ನೆನಪಿಸಿದ ಕನ್ನಡಿಗರು]

ರಾಜಮೌಳಿ ಹೇಳಿದರೆ ಸಾಕೇ.?

ರಾಜಮೌಳಿ ಹೇಳಿದರೆ ಸಾಕೇ.?

ಇಡೀ ಭಾರತವೇ ಬೆರಗಾಗುವಂತೆ 'ಬಾಹುಬಲಿ' ಚಿತ್ರವನ್ನ ತಯಾರು ಮಾಡಿರುವ ಪ್ರತಿಭಾವಂತ ನಿರ್ದೇಶಕ ಎಸ್.ಎಸ್.ರಾಜಮೌಳಿ, ಕನ್ನಡಿಗರ ಮನಸ್ಸಿಗೆ ಆಗಿರುವ ಘಾಸಿಯನ್ನ ಅರ್ಥ ಮಾಡಿಕೊಂಡು ವಿಡಿಯೋ ಸಂದೇಶ ನೀಡಿದ್ದಾರೆ. ಈ ಬುದ್ದಿ ಕಟ್ಟಪ್ಪನಿಗೆ ಇನ್ನೂ ಬಂದಿಲ್ಲವೇ ಎನ್ನುವುದು ಕನ್ನಡಿಗರ ಪ್ರಶ್ನೆ.[ಕರ್ನಾಟಕದಲ್ಲಿ 'ಬಾಹುಬಲಿ' ಬಿಡುಗಡೆ ಡೌಟ್: ಏಪ್ರಿಲ್ 28 ರಂದು ಬೆಂಗಳೂರು ಬಂದ್!]

ಕನ್ನಡದಲ್ಲಿಯೇ ಮಾತನಾಡಿರುವ ರಾಜಮೌಳಿ

ಕನ್ನಡದಲ್ಲಿಯೇ ಮಾತನಾಡಿರುವ ರಾಜಮೌಳಿ

ಕರ್ನಾಟಕದ ರಾಯಚೂರಿನಲ್ಲಿಯೇ ಹುಟ್ಟಿ ಬೆಳೆದರೂ, ರಾಜಮೌಳಿಗೆ ಕನ್ನಡ ಸರಿಯಾಗಿ ಬರಲ್ಲ. ಆದರೂ, ಏನು ಹೇಳಬೇಕು ಎಂಬುದನ್ನ ಕನ್ನಡದಲ್ಲಿ ಕಲಿತು ಕೋಟ್ಯಾಂತರ ಕನ್ನಡಿಗರ ಮುಂದೆ ತಮ್ಮ ಕೋರಿಕೆ ಇಟ್ಟಿದ್ದಾರೆ.

ಒಬ್ಬರಿಂದ ಇತರರಿಗೆ ನಷ್ಟ ಆಗುವುದು ಸರಿಯಿಲ್ಲ

ಒಬ್ಬರಿಂದ ಇತರರಿಗೆ ನಷ್ಟ ಆಗುವುದು ಸರಿಯಿಲ್ಲ

''ಸತ್ಯರಾಜ್ ಎಂದೋ ಮಾಡಿರುವ ಕಾಮೆಂಟ್ ನಿಂದ 'ಬಾಹುಬಲಿ' ನಿರ್ಮಾಪಕರಿಗೆ ನಷ್ಟ ಆಗುವುದು ಸರಿಯಲ್ಲ'' ಅಂತ ಸ್ವತಃ ರಾಜಮೌಳಿ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ. ತಮ್ಮಿಂದ ಇಷ್ಟೊಂದು ತೊಂದರೆ ಆಗುತ್ತಿದ್ದರೂ, ಕ್ಷಮೆ ಕೇಳುವ ದೊಡ್ಡಗುಣ ಕಟ್ಟಪ್ಪನಿಗಿನ್ನೂ ಬಂದಿಲ್ಲ.

ಸತ್ಯರಾಜ್ ಗೆ ವಿಷಯ ತಲುಪಿದೆ.!

ಸತ್ಯರಾಜ್ ಗೆ ವಿಷಯ ತಲುಪಿದೆ.!

''ಕರ್ನಾಟಕದಲ್ಲಿ ಎದ್ದಿರುವ ವಿವಾದದ ಕುರಿತು ಸತ್ಯರಾಜ್ ಅವರಿಗೆ ಫೋನ್ ಮಾಡಿ ವಿಷಯ ತಲುಪಿಸಿದ್ದೇವೆ'' ಎಂದಿದ್ದಾರೆ ಎಸ್.ಎಸ್.ರಾಜಮೌಳಿ. ಇಷ್ಟಾದರೂ ಸತ್ಯರಾಜ್ ಕನ್ನಡಿಗರ ಮುಂದೆ ತಲೆಬಾಗುತ್ತಿಲ್ಲ.

ರಜನಿಕಾಂತ್ ರವರೇ ಕ್ಷಮೆ ಕೋರಿದ್ದರು.!

ರಜನಿಕಾಂತ್ ರವರೇ ಕ್ಷಮೆ ಕೋರಿದ್ದರು.!

ಕನ್ನಡಿಗರ ಬಗ್ಗೆ ಕೇವಲವಾಗಿ ಮಾತನಾಡಿದ ನಂತರ ಅದರಿಂದಾದ ವ್ಯತಿರಿಕ್ತ ಪರಿಣಾಮಗಳನ್ನು ಗಮನಿಸಿ ಸೂಪರ್ ಸ್ಟಾರ್ ರಜನಿಕಾಂತ್ ರವರೇ ಕ್ಷಮೆ ಕೇಳಿದ್ದರು. ಆ ಉದಾರತನ ಸತ್ಯರಾಜ್ ರವರಿಗೆ ಬರುವುದು ಯಾವಾಗ.?

ಇದೆಲ್ಲವೂ ಗಮನದಲ್ಲಿ ಇರಲಿ

ಇದೆಲ್ಲವೂ ಗಮನದಲ್ಲಿ ಇರಲಿ

ಕಾರಣ ಏನೇ ಇರಬಹುದು... 'ಬಾಹುಬಲಿ-2' ಚಿತ್ರದ ವಿತರಣೆ ಹಕ್ಕು ಕರ್ನಾಟಕದಲ್ಲಿ ಇನ್ನೂ ಸೇಲ್ ಆಗಿಲ್ಲ. ಬಿಕರಿ ಆಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಮೇಲಾಗಿ ಬಿಡುಗಡೆ ಆಗುವ ದಿನ ಬೆಂಗಳೂರು ಬಂದ್ ಆಗಲಿದೆ. ಇದರಿಂದ ನಿರೀಕ್ಷೆ ಮಟ್ಟದ ಕಲೆಕ್ಷನ್ ಆಗುವುದಿಲ್ಲ ಎಂಬುದು ಸುಳ್ಳಲ್ಲ. ಕಟ್ಟಪ್ಪ ನಿಂದ ಇಷ್ಟೆಲ್ಲ ಸಮಸ್ಯೆ ಆಗುತ್ತಿರುವಾಗ ಸ್ವಾಭಿಮಾನಿ ಕಟ್ಟಪ್ಪ ಈಗಲಾದರೂ ಬಾಯ್ಬಿಟ್ಟು ಕ್ಷಮೆ ಕೇಳಪ್ಪ.

More from Filmibeat

English summary
When will Kattappa aka Satyaraj apologize Kannadigas?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X