For Quick Alerts
  ALLOW NOTIFICATIONS  
  For Daily Alerts

  ಏನಾಯ್ತು ದರ್ಶನ್ - ದಿನಕರ್ ಕಾಂಬಿನೇಶನ್ 'ಸರ್ವಾಂತರ್ಯಾಮಿ' ಚಿತ್ರ?

  |
  ದರ್ಶನ್ ದಿನಕರ್ ತೂಗುದೀಪ ಕಾಂಬಿನೇಶನ್ ನ ಸಿನಿಮಾ ಕಥೆ ಏನಾಯ್ತು?

  'ಸರ್ವಾಂತರ್ಯಾಮಿ' ಟೈಟಲ್ ನಲ್ಲಿ ದರ್ಶನ್ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಬಹಳ ವರ್ಷಗಳಿಂದ ಇದೆ. ದಿನಕರ್ ತೂಗುದೀಪ್ ಹಾಗೂ ದರ್ಶನ್ ಕಾಂಬಿನೇಶನ್ ನಲ್ಲಿ ಈ ಸಿನಿಮಾದ ತಯಾರಿ ಶುರು ಆಗಿತ್ತು. ಆದರೆ, ಸದ್ಯದವರೆಗೆ ಈ ಸಿನಿಮಾ ಪ್ರಾರಂಭ ಆಗಿಲ್ಲ.

  'ಯಜಮಾನ' ಸಿನಿಮಾವನ್ನು ಮುಗಿಸಿರುವ ದರ್ಶನ್ ಅವರ ಮುಂದಿನ ಸಿನಿಮಾಗಳ ಪಟ್ಟಿ ದೊಡ್ಡದಾಗಿದೆ. 'ಕುರುಕ್ಷೇತ್ರ' ಸಿನಿಮಾದ ಕೆಲಸ ಮುಗಿದಿದ್ದು, 'ಒಡೆಯ' 'ರಾಬರ್ಟ್', 'ಗಂಡುಗಲಿ ವೀರಮದಕರಿ ನಾಯಕ' ಹೀಗೆ ಅವರ ಸಿನಿಮಾಗಳ ಪಟ್ಟಿ ಬೆಳೆಯುತ್ತಿದೆ.

  'ದಾಸ' ದರ್ಶನ್ ಸೆರೆ ಹಿಡಿದ ಫೋಟೋಗಳಿಂದ ಬಂತು 3.75 ಲಕ್ಷ ಹಣ.! 'ದಾಸ' ದರ್ಶನ್ ಸೆರೆ ಹಿಡಿದ ಫೋಟೋಗಳಿಂದ ಬಂತು 3.75 ಲಕ್ಷ ಹಣ.!

  ದರ್ಶನ್ ಒಂದರ ನಂತರ ಒಂದು ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಿದ್ದು, 'ಸರ್ವಾಂತರ್ಯಾಮಿ' ಚಿತ್ರ ಯಾವಾಗ ಶುರು ಎಂಬ ಪ್ರಶ್ನೆ ಇದೆ. ಮತ್ತೊಂದು ಕಡೆ ದಿನಕರ್ ಇದೀಗ ತಮ್ಮ ಹೊಸ ಸಿನಿಮಾವನ್ನು ಪ್ರಾರಂಭ ಮಾಡಿದ್ದಾರೆ. ಹೀಗಿರುವಾಗ 'ಸರ್ವಾಂತರ್ಯಾಮಿ' ಕಥೆ ಏನಾಯ್ತು? ಎನ್ನುವುದು ದೊಡ್ಡ ಕುತೂಹಲಕ್ಕೆ ಕಾರಣವಾಗಿದೆ. ಮುಂದೆ ಓದಿ...

  ದಿನಕರ್ ಹೊಸ ಸಿನಿಮಾ

  ದಿನಕರ್ ಹೊಸ ಸಿನಿಮಾ

  ನಿರ್ದೇಶಕ ದಿನಕರ್ ತೂಗುದೀಪ್ ಇದೀಗ ಹೊಸ ಸಿನಿಮಾ ಶುರು ಮಾಡುತ್ತಿದ್ದಾರೆ. ಸದ್ಯ, ಆ ಸಿನಿಮಾದ ಕಥೆ ಕೆಲಸದಲ್ಲಿ ಅವರ ತೊಡಗಿದ್ದಾರೆ. ಈ ಸಿನಿಮಾ ಸ್ಕ್ರಿಪ್ಟ್ ಸಿದ್ಧವಾದ ಮೇಲೆ ಯಾವ ಹೀರೋ ಜೊತೆಗೆ ಈ ಸಿನಿಮಾ ಎಂಬುದನ್ನು ತಿಳಿಸಲಿದ್ದಾರೆ. ಹೀಗಿರುವಾಗ, ದಿನಕರ್ ತಮ್ಮ 'ಸರ್ವಾಂತರ್ಯಾಮಿ' ಸಿನಿಮಾದಿಂದ ಮತ್ತಷ್ಟು ದೂರಕ್ಕೆ ಹೋಗಿದ್ದಾರೆ.

  ಹಂಪಿ ಉತ್ಸವದಲ್ಲಿ ಲವರ್ಸ್ ಗೆ ಕಿವಿಮಾತು ಹೇಳಿದ ದಾಸ ಹಂಪಿ ಉತ್ಸವದಲ್ಲಿ ಲವರ್ಸ್ ಗೆ ಕಿವಿಮಾತು ಹೇಳಿದ ದಾಸ

  ಸಿನಿಮಾ ಬರುತ್ತಾ, ಇಲ್ವಾ?

  ಸಿನಿಮಾ ಬರುತ್ತಾ, ಇಲ್ವಾ?

  'ಸರ್ವಾಂತರ್ಯಾಮಿ' ಸಿನಿಮಾ ಬರುತ್ತಾ, ಇಲ್ವಾ? ಎನ್ನುವುದು ಇದುವರೆಗೆ ತಿಳಿದಿಲ್ಲ. 'ಸರ್ವಾಂತರ್ಯಾಮಿ' ಚಿತ್ರ ಮಾಡಬೇಕಿದ್ದ ದಿನಕರ್ 'ಲೈಫ್ ಜೊತೆ ಒಂದ್ ಸೆಲ್ಫಿ' ಚಿತ್ರವನ್ನು ನಿರ್ದೇಶನ ಮಾಡಿದರು. ಈ ಸಿನಿಮಾ ಮುಗಿದ ಮೇಲಾದರೂ 'ಸರ್ವಾಂತರ್ಯಾಮಿ' ಶುರು ಆಗುತ್ತದೆಯೇ ಎಂದುಕೊಂಡವರಿಗೆ ಮತ್ತೆ ನಿರಾಸೆಯಾಗಿದೆ.

  5 ವರ್ಷಗಳಿಂದ ಸುದ್ದಿ ಇದೆ

  5 ವರ್ಷಗಳಿಂದ ಸುದ್ದಿ ಇದೆ

  ಹಾಗೆ ನೋಡಿದರೆ, ದರ್ಶನ್ ಅವರ 50ನೇ ಸಿನಿಮಾವೇ 'ಸರ್ವಾಂತರ್ಯಾಮಿ' ಆಗಬೇಕಿತ್ತು. ಆದರೆ, ಈ ಚಿತ್ರ ಮುಂದೆ ಹೋದ ಕಾರಣ 'ಕುರುಕ್ಷೇತ್ರ' ಹಾಫ್ ಸೆಂಚುರಿ ಸಿನಿಮಾ ಆಗಿದೆ. 5 ವರ್ಷಗಳ ಹಿಂದಿನಿಂದಲೂ ಈ ಸಿನಿಮಾದ ಸುದ್ದಿ ಇದೆ. ಆದರೆ, ಚಿತ್ರ ಯಾವಾಗ ಎನ್ನುವುದನ್ನು ದಿನಕರ್ ಅವರೇ ಉತ್ತರ ನೀಡಬೇಕು.

  ದರ್ಶನ್ ಸಿಕ್ಕಾಪಟ್ಟೆ ಬ್ಯುಸಿ

  ದರ್ಶನ್ ಸಿಕ್ಕಾಪಟ್ಟೆ ಬ್ಯುಸಿ

  'ಒಡೆಯ' 'ರಾಬರ್ಟ್', 'ಗಂಡುಗಲಿ ವೀರಮದಕರಿ ನಾಯಕ' ಬಳಿಕ ಮಿಲನ ಪ್ರಕಾಶ್, ಎಂ ಜಿ ರಾಮಮೂರ್ತಿ ಹಾಗೂ ಶೈಲಜಾ ನಾಗ್ ಅವರಿಗೆ ಒಂದೊಂದು ಸಿನಿಮಾವನ್ನು ದರ್ಶನ್ ಮಾಡಿಕೊಡಬೇಕಿದೆ. ಇಷ್ಟೊಂದು ಸಿನಿಮಾಗಳ ನಡುವೆ 'ಸರ್ವಾಂತರ್ಯಾಮಿ' ಏನಾಗುತ್ತದೆಯೋ ಗೊತ್ತಿಲ್ಲ.

  ದರ್ಶನ್ - ದಿನಕರ್ ಕಾಂಬಿನೇಶನ್ ಚಿತ್ರಗಳು

  ದರ್ಶನ್ - ದಿನಕರ್ ಕಾಂಬಿನೇಶನ್ ಚಿತ್ರಗಳು

  ನಟ ದರ್ಶನ್ ತಮ್ಮ ಸಹೋದರ ದಿನಕರ್ ಕಾಂಬಿನೇಶನ್ ನಲ್ಲಿ ಈಗಾಗಲೇ ನಟಿಸಿದ್ದಾರೆ. 'ಜೊತೆ ಜೊತೆಯಲಿ' ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದ ದರ್ಶನ್ 'ನವಗ್ರಹ' ಹಾಗೂ 'ಸಾರಥಿ' ಚಿತ್ರಗಳಲ್ಲಿ ಹೀರೋ ಆಗಿದ್ದರು. ಈ ಮೂರು ಚಿತ್ರಗಳಿಗೆ ದಿನಕರ್ ಡೈರೆಕ್ಷನ್ ಇತ್ತು.

  English summary
  When will Dinakar Thoogudeepa and Darshan's 'Sarvantaryami' kannada movie launch?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X