'ಯಜಮಾನ' ಕುರಿತು ಕಾಡುತ್ತಿರುವ ದೊಡ್ಡ ಪ್ರಶ್ನೆ?
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ ಯಜಮಾನ ಈಗಾಗಲೇ ಹಾಡುಗಳ ಮೂಲಕ ಅಬ್ಬರಿಸುತ್ತಿದೆ. ಯಜಮಾನನ ಮೂರು ಹಾಡುಗಳು ರಿಲೀಸ್ ಆಗಿದ್ದು, ಒಂದಕ್ಕಿಂತ ಮತ್ತೊಂದು ದಾಖಲೆಗಳನ್ನ ಧೂಳಿಪಟ ಮಾಡ್ತಿದೆ.
ಇದೀಗ, ನಾಲ್ಕನೇ ಹಾಡಿನ ನಿರೀಕ್ಷೆಯಲ್ಲಿರುವ ಅಭಿಮಾನಿಗಳಿಗೆ ದೊಡ್ಡ ಉಡುಗೊರೆ ಸಿಗಲಿದೆ. ಸಾಂಗ್ ಕೇಳಿ ಖುಷಿಯಾಗಿರುವ ಫ್ಯಾನ್ಸ್ ಈಗ ಟ್ರೈಲರ್ ನೋಡುವ ಸಮಯ ಬಂದಿದೆ. ಹೌದು, ಯಜಮಾನ ಚಿತ್ರದ ಟ್ರೈಲರ್ ಅತಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಸದ್ಯಕ್ಕೆ ದಿನಾಂಕ ನಿಗದಿಯಾಗಿಲ್ಲ.

ಈ ಮಧ್ಯೆ 'ಯಜಮಾನ' ಸಿನಿಮಾ ಬಗ್ಗೆ ಕಾಡುತ್ತಿರುವ ಬಹುದೊಡ್ಡ ಪ್ರಶ್ನೆ ಅಂದ್ರೆ, ಸಿನಿಮಾ ಯಾವಾಗ ರಿಲೀಸ್ ಆಗುತ್ತೆ? ಅಂತ. ಯಾಕಂದ್ರೆ, ಬ್ಯಾಕ್ ಟು ಬ್ಯಾಕ್ ಹಾಡು, ಈಗ ಟ್ರೈಲರ್ ಬಿಡ್ತಿದ್ದಾರೆ. ಆದ್ರೆ, ರಿಲೀಸ್ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ.
49 ಸಿನಿಮಾ ಮುಗಿಸಿರುವ 'ಡಿ-ಬಾಸ್' 50ನೇ ಸಿನಿಮಾದ ಘಳಿಗೆಯಲ್ಲಿದ್ದಾರೆ. ಈ ನಡುವೆ 'ಕುರುಕ್ಷೇತ್ರ' 50ನೇ ಚಿತ್ರವಾಗಬಹುದು ಎನ್ನಲಾಗ್ತಿತ್ತು. ಆದ್ರೀಗ, 50 ಸಿನಿಮಾ ಯಜಮಾನ ಆಗುವುದು ಬಹುತೇಕ ಖಚಿತವಾಗಿದೆ.
ಕಳೆದ ವರ್ಷ ದರ್ಶನ್ ಸಿನಿಮಾ ಇಲ್ಲದೇ ಅಭಿಮಾನಿಗಳು ನಿರಾಸೆಯಾಗಿದ್ದರು. ಈಗ ಯಜಮಾನನಿಗಾಗಿ ಕಾಯ್ತಿರುವ ಫ್ಯಾನ್ಸ್ ಶಿವರಾತ್ರಿ ಹಬ್ಬಕ್ಕೆ ಬರುತ್ತಾ, ಯುಗಾದಿ ಹಬ್ಬಕ್ಕೆ ಬರುತ್ತಾ ಅಂತ ಲೆಕ್ಕಚಾರ ಹಾಕ್ತಿದ್ದಾರೆ.


Click it and Unblock the Notifications