»   » ಚಿತ್ರಗಳು: ಯಾರ್ಯಾರು ಎಲ್ಲೆಲ್ಲಿ ಹೊಸ ವರ್ಷ ಆಚರಿಸಿಕೊಂಡರು

ಚಿತ್ರಗಳು: ಯಾರ್ಯಾರು ಎಲ್ಲೆಲ್ಲಿ ಹೊಸ ವರ್ಷ ಆಚರಿಸಿಕೊಂಡರು

Posted By:
Subscribe to Filmibeat Kannada

ಹಲವಾರು ಸಿಹಿ-ಕಹಿ ನೆನಪುಗಳನ್ನು ನೀಡಿದ 2015 ಕ್ಕೆ ಟಾ ಟಾ ಬಾಯ್ ಬಾಯ್ ಹೇಳಿದ್ದು, ಆಯ್ತು, ರೆಡ್ ಕಾರ್ಪೆಟ್ ಹಾಕಿ ಹೊಸ ವರ್ಷ 2016ನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದು, ಆಯ್ತು.

ಇನ್ನು ಹೊಸ ವರ್ಷದ ಆಚರಣೆ ಅಂದ್ರೆ ಹೇಗಿರುತ್ತೆ ಅಂತ ನಿಮಗೆ ಗೊತ್ತೇ ಇದೆ. ಈಗಾಗಲೇ ಎಲ್ಲಿ ಹೊಸ ವರ್ಷದ ಸಂಭ್ರಮವನ್ನು ಆಚರಿಸಬೇಕು ಹಾಗೂ ಹೊಸ ವರ್ಷವನ್ನು ಹೇಗೆ ಬರಮಾಡಿಕೊಳ್ಳಬೇಕು ಎಂಬುದನ್ನು ನಮ್ಮ ಸಿನಿ ತಾರೆಯರಂತೂ ಬಹಳ ಭರ್ಜರಿಯಾಗಿಯೇ ಪ್ಲಾನ್ ಮಾಡಿರುತ್ತಾರೆ.

ಇದಕ್ಕೆ ನಮ್ಮ ಸ್ಯಾಂಡಲ್ ವುಡ್ ಸೇರಿದಂತೆ ಬಾಲಿವುಡ್ ನ ಮಂದಿಯೂ ಹೊರತಾಗಿಲ್ಲ. ಅಂದಹಾಗೆ ಈ ಬಾರಿ ನ್ಯೂ ಇಯರ್ ಸೆಲೆಬ್ರೇಷನ್ ಗಾಗಿ ನಮ್ಮ ಚಂದನವನದ ತಾರೆಯರು ಈ ಭೂಮಿಯ ಒಂದೊಂದು ಮೂಲೆಗೆ ಪ್ರಯಾಣಿಸಿ ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ನ ತಾರೆಯರಾದ ರಾಕಿಂಗ್ ಸ್ಟಾರ್ ಯಶ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಿರ್ದೇಶಕ ಯೋಗರಾಜ್ ಭಟ್ರು, ಬಾಲಿವುಡ್ ನ ಸ್ಟಾರ್ ಗಳಾದ ಸೋನಮ್ ಕಪೂರ್, ಐಶ್ವರ್ಯಾ ರೈ ಬಚ್ಚನ್ ಸಲ್ಮಾನ್ ಖಾನ್, ಹೃತಿಕ್ ರೋಷನ್, ದೀಪಿಕಾ ಪಡುಕೋಣೆ, ಮುಂತಾದವರು ಬೇರೆ ಬೇರೆ ಕಡೆಗಳಲ್ಲಿ ಹೊಸ ವರ್ಷವನ್ನು ಆಚರಿಸಿಕೊಂಡಿದ್ದಾರೆ.

ಇವರು ಮಾತ್ರವಲ್ಲದೇ, ಇನ್ನೂ ಅನೇಕ ತಾರೆಯರು ಹೊಸ ವರ್ಷವನ್ನು ಸಂಭ್ರಮವನ್ನು ಆಚರಿಸಿಕೊಂಡಿದ್ದು, ಎಲ್ಲಿ ಯಾರ ಜೊತೆ ಆಚರಿಸಿಕೊಂಡರು ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್

'ಕಿಲ್ಲಿಂಗ್ ವೀರಪ್ಪನ್' ಮತ್ತು 'ಶಿವಲಿಂಗ' ಎರಡು ಸಿನಿಮಾಗಳ ಕೆಲಸ ಮುಗಿಸಿರುವ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಕುಟುಂಬ ಸಮೇತರಾಗಿ ಹಾಯಾಗಿ ಬ್ಯಾಂಕಾಕ್ ಗೆ ವಿಮಾನ ಏರಿದ್ದು, ಅಲ್ಲೇ ನ್ಯೂ ಇಯರ್ ಸೆಲೆಬ್ರೆಟ್ ಮಾಡಿಕೊಂಡಿದ್ದಾರೆ. ಅಂದಹಾಗೆ ವರ್ಮಾ ನಿರ್ದೇಶನದ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಇಂದು ಭರ್ಜರಿಯಾಗಿ ತೆರೆ ಕಂಡಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೂ ಇಂದು ಸಿನಿಮಾ ಬಿಡುಗಡೆ ಆಗುವಾಗ ಅಭಿಮಾನಿಗಳ ಜೊತೆ ಸಂಭ್ರಮ ಹಂಚಿಕೊಳ್ಳಲು ಶಿವಣ್ಣ ಅವರು ಇರಲಿಲ್ಲ.

ನಿರ್ದೇಶಕ ರಾಮ್ ಗೋಪಾಲ್ ವರ್ಮಾ

ಹೊಸ ವರ್ಷದ ದಿನವೇ ರಾಮ್ ಗೋಪಾಲ್ ವರ್ಮಾ ಮತ್ತು ಶಿವಣ್ಣ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಬಿಡುಗಡೆಯಾಗಿರುವುದರಿಂದ ವರ್ಮಾ ಅವರು ಎಲ್ಲೂ ಹೋಗದೇ ಹೈದರಾಬಾದಿನಲ್ಲೇ ಉಳಿದುಕೊಂಡು ಚಿತ್ರ ಯಾವ ರೀತಿ ರೆಸ್ಪಾನ್ಸ್ ಗಳಿಸುತ್ತಿದೆ ಎಂದು ಅವಲೋಕನ ಮಾಡುತ್ತಿದ್ದಾರೆ. ಚಿತ್ರ ಬಿಡುಗಡೆ ದಿನ ಇಲ್ಲಿ ಇರೋದು ಮುಖ್ಯ ಅಂತ ನಿರ್ಧರಿಸಿದಂತಿದೆ ವರ್ಮಾ ಸಾಹೇಬರು.

ನಟಿ ಪಾರುಲ್ ಯಾದವ್

ತಮ್ಮ ಅಭಿನಯದ ಬಹುನಿರೀಕ್ಷಿತ ಸಿನಿಮಾ ಹೊಸ ವರ್ಷದ ದಿನವೇ ಬಿಡುಗಡೆ ಇದ್ದರೂ ನಟಿ ಪಾರುಲ್ ಅವರು ನ್ಯೂ ಇಯರ್ ಸೆಲೆಬ್ರೇಟ್ ಮಾಡಲು ಮುಂಬೈಗೆ ಹಾರಿದ್ದಾರೆ. ಆದರೂ ತಮ್ಮ ಚಿತ್ರ ಹಾಗೂ ನಟನೆಯ ಬಗ್ಗೆ ಯಾವ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ ಎಂಬುದನ್ನು ಟ್ವಿಟ್ಟರ್ ಮೂಲಕ ತಿಳಿದುಕೊಳ್ಳುತ್ತಿದ್ದಾರೆ. ಅಂದಹಾಗೆ ಪಾರುಲ್ ಅವರಿಗೆ ಬಾಲಿವುಡ್ ಕಡೆ ಸ್ವಲ್ಪ ಒಲವು ಜಾಸ್ತಿ ಇರುವುದರಿಂದ ಮುಂಬೈ ಟ್ರಿಪ್ ಇಟ್ಟುಕೊಂಡಿರಬಹುದು ಅನ್ನೋದು ಒಂದು ಅನುಮಾನ.

ಯೋಗರಾಜ್ ಭಟ್ರು

ಸದ್ಯಕ್ಕೆ ದುನಿಯಾ ವಿಜಿ ಮತ್ತು ಪ್ರಿಯಾಮಣಿ ಅಭಿನಯಿಸಿರುವ 'ದನಕಾಯೋನು' ಮುಗಿಸಿರುವ ನಿರ್ದೇಶಕ ಯೋಗರಾಜ್ ಭಟ್ರು ಹೊಸ ವರ್ಷವನ್ನು ಆಚರಿಸಲು ಫ್ಯಾಮಿಲಿ ಸಮೇತರಾಗಿ ದುಬೈಗೆ ಹಾರಿದ್ದು, ಅಲ್ಲಿನ ಶೇಖ್ ಗಳ ನಡುವೆ ಹೊಸ ವರ್ಷವನ್ನು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ಅಂತೂ ಅಲ್ಲಿಂದ ವಾಪಸ್ ಬರುವಾಗ ಅವರ ಹೊಸ ಚಿತ್ರ 'ನನ್ನ ಹೆಸರೇ ಅನುರಾಗಿ'ಗೆ ಹೊಸ ಐಡಿಯಾ ಬಂದರೂ ಬರಬಹುದು.

ರಾಕಿಂಗ್ ಸ್ಟಾರ್ ಯಶ್

ಇನ್ನು ರಾಕಿಂಗ್ ಸ್ಟಾರ್ ಯಶ್ ಅವರು ಮಾತ್ರ 'ಮಾಸ್ಟರ್ ಪೀಸ್' ಸೂಪರ್ ಡೂಪರ್ ಹಿಟ್ ಆದ ಖುಷಿಯಲ್ಲಿ ಸುಂಯ್ ಅಂತ ಥೈಲಾಂಡ್ ಗೆ ಫ್ಲೈ ಮಾಡಿದ್ದಾರೆ. ಇದೊಂಥರ ಶೂಟಿಂಗ್ ವಿತ್ ನ್ಯೂ ಇಯರ್ ಸೆಲೆಬ್ರೇಷನ್. ಕೆ.ಮಂಜು ನಿರ್ಮಾಣದಲ್ಲಿ ಮೂಡಿಬರುತ್ತಿರುವ ಇನ್ನೂ ಹೆಸರಿಡದ ಚಿತ್ರವೊಂದರ ಶೂಟಿಂಗ್ ಕೂಡ ಅಲ್ಲಿ ಜರುಗಲಿರುವುದರಿಂದ ಒಂದು ಕಡೆ ಶೂಟಿಂಗ್ ಕೂಡ ಆಗುತ್ತೆ ಮತ್ತೊಂದೆಡೆ ಹೊಸ ವರ್ಷದ ಆಚರಣೆ ಕೂಡ ಆಗುತ್ತೆ ಅಂತ ಯಶ್ ಅವರು ಎರಡನ್ನೂ ಬ್ಯಾಲೆನ್ಸ್ ಮಾಡಿದ್ದಾರೆ.

ಬಾಲಿವುಡ್ ನಟಿ ಸೋನಮ್ ಕಪೂರ್ ಮತ್ತು ಅರ್ಜುನ್ ಕಪೂರ್

ಬಾಲಿವುಡ್ ನಟಿ ಅನಿಲ್ ಕಪೂರ್ ಪುತ್ರಿ ನಟಿ ಸೋನಮ್ ಕಪೂರ್ ಮತ್ತು ನಟ ಅರ್ಜುನ್ ಕಪೂರ್ ಅವರು ವಿದೇಶದ ಮಾಲ್ಡೀವ್ಸ್ ನಲ್ಲಿ ಹೊಸ ವರ್ಷದ ಸಂಭ್ರಮವನ್ನು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ಜೊತೆಗೆ ಸಂಭ್ರಮದ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ನಟಿ ಐಶ್ವರ್ಯಾ ರೈ ಬಚ್ಚನ್

ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಅವರು ತಮ್ಮ ಮುದ್ದು ಮಗಳು ಆರಾಧ್ಯ ಹಾಗೂ ಪತಿ ಅಭಿಷೇಕ್ ಬಚ್ಚನ್ ಅವರೊಂದಿಗೆ ಅಮೇರಿಕದಲ್ಲಿ ಹೊಸ ವರ್ಷವನ್ನು ಗಡದ್ದಾಗಿ ಆಚರಿಸಿಕೊಂಡಿದ್ದಾರೆ.

ಕಿಂಗ್ ಖಾನ್ ಶಾರುಖ್ ಖಾನ್

ಬಾಲಿವುಡ್ ನ ಬಾದ್ ಷಾ ಕಿಂಗ್ ಖಾನ್ ಶಾರುಖ್ ಖಾನ್ ಅವರು ದುಬೈ ಶೇಖ್ ವಿಲಾದಲ್ಲಿ 2016 ಹೊಸ ವರ್ಷವನ್ನು ಬಹಳ ಸಂಭ್ರಮದಿಂದ ಸ್ವಾಗತಿಸಿಕೊಂಡಿದ್ದಾರೆ.

ಬಾಲಿವುಡ್ ನಟ ಅಮೀರ್ ಖಾನ್

ಬಾಲಿವುಡ್ ನಟ ಅಮೀರ್ ಖಾನ್ ಅವರು ಈ ಬಾರಿ ಸ್ವಿಜರ್ ಲ್ಯಾಂಡಿನಲ್ಲಿ ಹೊಸ ವರ್ಷವನ್ನು ಬರಮಾಡಿಕೊಂಡಿರುವುದರ ಜೊತೆಗೆ ಖಾನ್ ದಂಪತಿಗಳು ಮದುವೆ ವಾರ್ಷಿಕೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.

English summary
Bollywood and Sandalwood stars have already flown out of the country to usher in the new year with their loved ones.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada