For Quick Alerts
ALLOW NOTIFICATIONS  
For Daily Alerts

ಅದ್ದೂರಿಯಾಗಿ ಬಂದ ಬಹಾದ್ದೂರ್ ಈಗೇನ್ಮಾಡ್ತಿದ್ದಾರೆ?

By ಜೀವನರಸಿಕ
|

ಈ ನಟನ ಬಗ್ಗೆ ನಾವು ಅದೆಷ್ಟು ಸಾರಿ ನಿಮ್ಗೆ ಹೇಳಿದ್ದೀವೋ ಗೊತ್ತಿಲ್ಲ. ವರ್ಷಕ್ಕೆ ಎರಡು ಮೂರು ಸಿನಿಮಾ ಮಾಡೋರ ನಡುವೆ, ಎರಡು ಮೂರು ವರ್ಷಕ್ಕೊಮ್ಮೆ ಸಿನಿಮಾ ಮಾಡೋದು ಈ ನಟನ ವಿಶೇಷತೆ! ಅದು ಒಳ್ಳೇದೂ ಅಂತಲಾದ್ರು ಅಂದುಕೊಳ್ಳಿ, ಅಭಿಮಾನಿಗಳಾಗಿದ್ರೆ ಒಂದೆರೆಡು ಬೈಗುಳವನ್ನಾದ್ರೂ ಬೈದು ಬಿಡಿ.

ಇದು ಕನ್ನಡದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ಕಥೆ. ನಾಲ್ಕು ವರ್ಷಗಳಲ್ಲಿ ಈ ನಟ ಕೊಟ್ಟಿರೋದು ಎರಡೇ ಎರಡು ಸಿನಿಮಾಗಳನ್ನ ಮಾತ್ರ. ಅದ್ಧೂರಿ ರಿಲೀಸ್ ಆಗಿ ಎಳೆಂಟು ತಿಂಗಳು ಧ್ರುವ ಎಲ್ಲಿಯೂ ಕಾಣಿಸಿರಲಿಲ್ಲ. ಈಗಲೂ ಅದೇ ಕಥೆ...

ಬಹಾದ್ದೂರ್ ಹಿಟ್ಟಾಗಿ ಆರೇಳು ತಿಂಗಳು ಮುಗೀತಾ ಇದೆ. ಧ್ರುವಾ ಸರ್ಜಾ ಎಲ್ಲಿದ್ದಾರೆ? ಜಿಮ್ನಲ್ಲಿದ್ದಾರೆ ಆಂತಾರೆ ಆತ್ಮೀಯರು. ಯಾವ ಸಿನಿಮಾ ಶುರು ಮಾಡ್ತಿದ್ದಾರೆ ಅಂದ್ರೆ ಅವರೀಗ ರೀಮೇಕ್ ಮಾಡ್ತಾರೆ. ನಂದಕಿಶೋರ್ 'ರನ್ನ' ಮುಗಿಸಿದ ನಂತ್ರ ಧ್ರುವ ಸರ್ಜಾಗೆ ಆಕ್ಷನ್ ಕಟ್ ಹೇಳ್ತಾರೆ ಅಂತಿದೆ ಗಾಂಧಿನಗರ. [ರೀಮೇಕ್ ಗೆ ಕೈಹಾಕಿದರೆ ಸ್ವಮೇಕ್ ಕಿಂಗ್]

ಫಾರ್ಮನಲ್ಲಿ ಇರೋವಾಗ್ಲೇ ಹೆಚ್ಚು ಮ್ಯಾಚ್ ಅಡಿ ಸ್ಕೋರ್ ಮಾಡಿದ್ರೆ ಒಳ್ಳೆಯದ್ದಲ್ವಾ? ಫಾರ್ಮ್ ಫಿಟ್ನೆಸ್ ಅನ್ನೋದು ಯಾವಾಗ ಕಳೆದು ಹೋಗುತ್ತೋ ಗೊತ್ತಿಲ್ಲ. ಧ್ರುವ ಸರ್ಜಾಗೆ ಇದರ ಅರಿವಿಲ್ವಾ.. ಅಥ್ವಾ ಮಾಮ ಅರ್ಜುನ್ ಸರ್ಜಾರಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ವಾ? ಅಥವಾ ಅದ್ಧೂರಿ ಮತ್ತು ಬಹಾದ್ದೂರ್ ನಲ್ಲಿ ನಾಯಕಿ ಪಟ್ಟ ಧರಿಸಿದ್ದ ಕನ್ನಡದ ನಂ.1 ನಟಿ ರಾಧಿಕಾ ಪಂಡಿತ್ ಡೇಟ್ಸ್ ಸಿಗತಿಲ್ವಾ?

English summary
There is an idiom - make hay while the sun shines. Most actors follow this and sign as many movies when they taste success. But, where is Dhruv Sarja? What is he doing? He has taken a long gap after the success of Addhuri and Bahaddur. Insiders of Sandalwood tell that he is preparing for a remake movie to be directed by Nanda Kishor.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more