For Quick Alerts
  ALLOW NOTIFICATIONS  
  For Daily Alerts

  'ಗುಳ್ಟು ಮೂಲಕ ವೈರಲ್ ಆಗಿದ್ದ ಉತ್ತರ ಕರ್ನಾಟಕದ ಪ್ರತಿಭೆ ನವೀನ್ ಶಂಕರ್ ಸದ್ಯ ಏನು ಮಾಡ್ತಿದ್ದಾರೆ?

  |

  ಚಂದನವನದಲ್ಲಿ ಮಿಂಚಬೇಕೆಂದು ಕನಸೊತ್ತು ಗಾಂಧಿನಗರಕ್ಕೆ ಬರುವವರು ಹಲವರು. ಈ ಪೈಕಿ ಅವಕಾಶ ಗಿಟ್ಟಿಸಿಕೊಳ್ಳುವವರು ಹಾಗೂ ಸಿಕ್ಕ ಅವಕಾಶದಲ್ಲಿ ಕ್ಲಿಕ್ ಆಗಿ ಚಿತ್ರರಂಗದಲ್ಲಿ ಹೆಚ್ಚು ಕಾಲ ಉಳಿಯುವವರು ಕೆಲವರು ಮಾತ್ರ. ಅದೇ ರೀತಿಯ ಕನಸನ್ನು ಹೊತ್ತು ಚಿತ್ರರಂಗಕ್ಕೆ ಕಾಲಿಟ್ಟು ಹಲವರಲ್ಲಿ ಕೆಲವರಾಗಿ ಉಳಿದುಕೊಂಡಿರುವವರ ಪೈಕಿ ಗುಳ್ಟೂ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ಬಾಲಗಕೋಟೆಯ ಇಳಕಲ್ ಮೂಲದ ನಟ ನವೀನ್ ಶಂಕರ್ ಕೂಡ ಒಬ್ಬರು.

  ಮೊದಲಿಗೆ ಪತ್ರಿಕೋದ್ಯಮವನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡು ಖಾಸಗಿ ಸುದ್ದಿ ವಾಹಿನಿಯಲ್ಲಿ ರಿಪೋರ್ಟರ್ ಆಗಿದ್ದ ನವೀನ್ ಶಂಕರ್ ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ಗುಳ್ಟೂ ಎಂಬ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿ ಸ್ಯಾಂಡಲ್‌ವುಡ್ ಪ್ರವೇಶಿಸಿದರು. 2018ರಲ್ಲಿ ತೆರೆಕಂಡಿದ್ದ ಈ ಚಿತ್ರ ಆಗಿನ ಸಮಯಕ್ಕೆ ಸಿನಿ ಪ್ರೇಕ್ಷಕರಿಂದ 'ಕನ್ನಡದಲ್ಲಿ ಒಳ್ಳೆ ಪ್ರಯೋಗಾತ್ಮಕ ಸಿನಿಮಾ ಬರಲ್ಲ ಅಂತೀರಲ್ಲ ಬಂದಿದೆ ನೋಡಿ' ಎಂಬ ಒಳ್ಳೆಯ ವಿಮರ್ಶೆ ಪಡೆದುಕೊಂಡಿತ್ತು. ಶತದಿನದ ಸಂಭ್ರಮ ಆಚರಿಸಿಕೊಂಡಿದ್ದ ಗುಳ್ಟೂ ಚಿತ್ರವನ್ನು ಇಂದಿಗೂ ಸಹ ಕನ್ನಡ ಸಿನಿ ರಸಿಕರು ಇತರೆ ಪ್ರೇಕ್ಷಕರಿಗೆ ನೋಡಿ ಎಂದು ಸಲಹೆ ನೀಡುವಂತ ಚಿತ್ರವಾಗಿ ಉಳಿದಿದೆ.

  ಯಾರಾದ್ರೂ ಓಕೆ, ಪೂಜಾ ಹೆಗ್ಡೆ ಜೊತೆ ಮಾತ್ರ ಕಿಸ್ ಬೇಡವೇ ಬೇಡ ಎಂದ ಸ್ಟಾರ್ ನಟ! ಯಾರಾದ್ರೂ ಓಕೆ, ಪೂಜಾ ಹೆಗ್ಡೆ ಜೊತೆ ಮಾತ್ರ ಕಿಸ್ ಬೇಡವೇ ಬೇಡ ಎಂದ ಸ್ಟಾರ್ ನಟ!

  ಸೈಬರ್ - ಥ್ರಿಲ್ಲರ್ ಚಿತ್ರವಾಗಿರುವ ಗುಳ್ಟೂ ಮೂಲಕ ನಟನಾಗಿ ನವೀನ್ ಶಂಕರ್ ಮೊದಲ ಬಾಲ್ ಸಿಕ್ಸರ್ ಚಚ್ಚಿದ್ದರು. ಈತನಿಗೆ ಅನೇಕ ಅವಕಾಶಗಳು ಲಭಿಸಲಿವೆ ಎಂಬ ಅಭಿಪ್ರಾಯಗಳನ್ನು ಚಿತ್ರ ವೀಕ್ಷಿಸಿದ್ದವರು ವ್ಯಕ್ತಪಡಿಸಿದ್ದರು. ಆದರೆ ನವೀನ್ ಶಂಕರ್ ಗುಳ್ಟೂ ಬಳಿಕ ನಾಯಕ ನಟನಾಗಿ ಯಾವ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಸದ್ಯ ಗುಳ್ಟೂ ಬಿಡುಗಡೆಯಾಗಿ ನಾಲ್ಕು ವರ್ಷ ಕಳೆದರೂ ನವೀನ್ ಶಂಕರ್ ಸದ್ಯ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಹಲವರಲ್ಲಿದ್ದು ಈ ಪ್ರಶ್ನೆಗೆ ಉತ್ತರ ಈ ಕೆಳಕಂಡಂತಿದೆ..

  ಇದೇ ತಿಂಗಳು 'ಧರಣಿ ಮಂಡಲ ಮಧ್ಯದೊಳಗೆ' ಬಿಡುಗಡೆ

  ಇದೇ ತಿಂಗಳು 'ಧರಣಿ ಮಂಡಲ ಮಧ್ಯದೊಳಗೆ' ಬಿಡುಗಡೆ

  ಗುಳ್ಟೂ ಬಳಿಕ ನಾಲ್ಕೈದು ಚಿತ್ರಗಳಲ್ಲಿ ನಟ ನವೀನ್ ಶಂಕರ್ ಅಭಿನಯಿಸಿದ್ದು ಮೊದಲಿಗೆ 'ಧರಣಿ ಮಂಡಲ ಮಧ್ಯದೊಳಗೆ' ಚಿತ್ರ ಬಿಡುಗಡೆಯಾಗಲಿದೆ. ಈ ಮೂಲಕ ಇದು ನವೀನ್ ಶಂಕರ್ ಸಿನಿ ವೃತ್ತಿ ಜೀವನದ ಎರಡನೇ ಚಿತ್ರವಾಗಲಿದೆ. ಚಿತ್ರದಲ್ಲಿ ನವೀನ್ ಶಂಕರ್ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಬಿಡುಗಡೆಯಾಗಲಿರುವ ಚಿತ್ರದ ಟೀಸರ್ ನೋಡುಗರಲ್ಲಿ ನಿರೀಕ್ಷೆ ಮೂಡಿಸಿದೆ. ಈ ಕ್ರೈಮ್ ಥ್ರಿಲ್ಲರ್‌ನಲ್ಲಿ ನವೀನ್ ಶಂಕರ್‌ಗೆ ನಟಿಯಾಗಿ ಐಶಾನಿ ಶೆಟ್ಟಿ ಕಾಣಿಸಿಕೊಂಡಿದ್ದು, ಶ್ರೀಧರ್ ಶಣ್ಮುಖ ನಿರ್ದೇಶನ ಚಿತ್ರಕ್ಕಿದೆ. ಚಿತ್ರ ಇದೇ ತಿಂಗಳ 25ರಂದು ಬಿಡುಗಡೆಯಾಗಲಿದೆ.

  ಡಿಸೆಂಬರ್‌ಗೆ ಹೊಂದಿಸಿ ಬರೆಯಿರಿ

  ಡಿಸೆಂಬರ್‌ಗೆ ಹೊಂದಿಸಿ ಬರೆಯಿರಿ

  ಇನ್ನು ನವೀನ್ ಶಂಕರ್ ಅಭಿನಯದ ಮೂರನೇ ಚಿತ್ರ ಹೊಂದಿಸಿ ಬರೆಯಿರಿ ಡಿಸೆಂಬರ್ ತಿಂಗಳು ತೆರೆಗೆ ಬರಲಿದೆ. ರಾಮೇನಹಳ್ಳಿ ಜಗನ್ನಾಥ ನಿರ್ದೇಶನದ ಈ ಚಿತ್ರದಲ್ಲಿ ನವೀನ್ ಶಂಕರ್ ಜತೆಗೆ ಪ್ರವೀಣ್ ತೇಜ್, ಐಶಾನಿ ಶೆಟ್ಟಿ ಹಾಗೂ ಅರ್ಚನಾ ಜೋಯಿಸ್ ನಟಿಸಿದ್ದಾರೆ. ಚಿತ್ರದಲ್ಲಿ ಪ್ರವೀಣ್ ತೇಜ್ ಹಾಗೂ ಐಶಾನಿ ಶೆಟ್ಟಿ ಜೋಡಿಯಾದರೆ, ನವೀನ್ ಶಂಕರ್‌ಗೆ ಅರ್ಚನಾ ಜೋಯಿಸ್ ಜೋಡಿಯಾಗಿ ಕಾಣಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಪಾತ್ರಗಳ ಹನ್ನೆರಡು ವರ್ಷಗಳ ಕತೆ ಇರಲಿದ್ದು ಇದೊಂದು ಫೀಲ್ ಗುಡ್ ಮೂವಿ ಆಗಿರಲಿದೆ.

  ಉತ್ತರ ಕರ್ನಾಟಕದ ಸೊಗಡಿನ ಕ್ಷೇತ್ರಪತಿ

  ಉತ್ತರ ಕರ್ನಾಟಕದ ಸೊಗಡಿನ ಕ್ಷೇತ್ರಪತಿ

  ಹೊಂದಿಸಿ ಬರೆಯಿರಿ ಜೋಡಿ ನವೀನ್ ಶಂಕರ್ ಹಾಗೂ ಅರ್ಚನಾ ಜೋಯಿಸ್ ಕ್ಷೇತ್ರಪತಿ ಎಂಬ ಚಿತ್ರದಲ್ಲಿ ಮತ್ತೆ ಒಂದಾಗಿದೆ. 'ಎ ರೈಟ್ ಫೈಟ್ ಫಾರ್ ದ ರೈಟ್' ಎಂದರೆ ಹಕ್ಕಿಗಾಗಿ ಒಂದೊಳ್ಳೆ ಹೋರಾಟ ಎಂದರ್ಥ. ಚಿತ್ರದ ಪೋಸ್ಟರ್‌ನಲ್ಲಿ ಈ ಸಾಲುಗಳಿದ್ದು ಇದೊಂದು ಹೋರಾಟದ ಕತೆಯಾಗಿರಲಿದೆ. ಶ್ರೀಕಾಂತ್ ಕಟಗಿ ನಿರ್ದೇಶನ ಕ್ಷೇತ್ರಪತಿ ಚಿತ್ರಕ್ಕಿದ್ದು, ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಈ ಚಿತ್ರ ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರ ಸಂಪೂರ್ಣವಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ನಡೆಯಲಿದೆ.

  ಧನಂಜಯ್ ಹೊಯ್ಸಳದಲ್ಲೂ ನವೀನ್ ಶಂಕರ್ ನಟನೆ

  ಧನಂಜಯ್ ಹೊಯ್ಸಳದಲ್ಲೂ ನವೀನ್ ಶಂಕರ್ ನಟನೆ

  ಗುಳ್ಟೂ ಚಿತ್ರದ ನಂತರ ನವೀನ್ ಶಂಕರ್ ಅಭಿನಯಿಸಲಿರುವ ಈ ಮೂರೂ ಚಿತ್ರಗಳಲ್ಲೂ ನವೀನ್ ಶಂಕರ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದು, ಮೊದಲ ಬಾರಿಗೆ ನೆಗೆಟಿವ್ ಪಾತ್ರದಲ್ಲಿ ಡಾಲಿ ಧನಂಜಯ್ ಅಭಿನಯದ ಹೊಯ್ಸಳ ಚಿತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲೂ ನವೀನ್ ಶಂಕರ್ ಸಂಭಾಷಣೆ ಉತ್ತರ ಕರ್ನಾಟಕದ ಕನ್ನಡ ಶೈಲಿಯಲ್ಲೇ ಇರಲಿದೆ. ಈ ಚಿತ್ರಕ್ಕೆ ವಿಜಯ್ ಎನ್ ನಿರ್ದೇಶನವಿದ್ದು, ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಚಿತ್ರ ತಯಾರಾಗುತ್ತಿದೆ.

  English summary
  Where is Gultoo fame Naveen Shankar, What is he doing now? Checkout his movies list. Take a look.
  Tuesday, November 8, 2022, 13:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X