»   » ನಟಿ ರಮ್ಯಾ ನಾಪತ್ತೆ.! ಇಡೀ ದೇಶ ಕೇಳುತ್ತಿದೆ ಕಾಂಗ್ರೆಸ್ ಯುವರಾಣಿ ಈಗೆಲ್ಲಿ.?

ನಟಿ ರಮ್ಯಾ ನಾಪತ್ತೆ.! ಇಡೀ ದೇಶ ಕೇಳುತ್ತಿದೆ ಕಾಂಗ್ರೆಸ್ ಯುವರಾಣಿ ಈಗೆಲ್ಲಿ.?

Posted By: ಒನ್ಇಂಡಿಯಾ ಸಿಬ್ಬಂದಿ
Subscribe to Filmibeat Kannada

ಪಾಕಿಸ್ತಾನದ ಪರ ಹೇಳಿಕೆ ನೀಡಿ ರಾಷ್ಟ್ರ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಸ್ಯಾಂಡಲ್ ವುಡ್ ಕ್ವೀನ್... ಕಾಂಗ್ರೆಸ್ ಯುವರಾಣಿ ರಮ್ಯಾ ಈಗ ಎಲ್ಲೂ ಕಾಣ್ತಲೇ ಇಲ್ಲ. ಯಾಕೆ.?

ಕಾವೇರಿ ವಿವಾದ ಭುಗಿಲೆದ್ದಾಗ, ಮಂಡ್ಯ ರೈತರ ಪರ ದನಿ ಎತ್ತಿದ್ದ ರಮ್ಯಾ ಈಗ ಎಲ್ಲಿ ಹೋಗಿದ್ದಾರೆ.?[ಪಾಕ್ ಬಗ್ಗೆ ಹೇಳಿಕೆ ವಿವಾದ: ಟ್ವಿಟ್ಟರ್ ನಲ್ಲಿ ಮೌನ ಮುರಿದ ರಮ್ಯಾ]

500, 1000 ಮುಖಬೆಲೆಯ ನೋಟುಗಳು ಬ್ಯಾನ್ ಆದಾಗ ಪ್ರಧಾನಿ ಮೋದಿ ನಡೆ ವಿರುದ್ಧ ಟ್ವಿಟ್ಟರ್ ನಲ್ಲಿ ಸಮರ ಸಾರಿದ್ದ ಮಾಜಿ ಸಂಸದೆ ರಮ್ಯಾ ಈಗ ಸೈಲೆಂಟ್ ಆಗಿದ್ದಾರಾ.? ಇಂತಹ ಪ್ರಶ್ನೆಗಳು ಸಹಜವಾಗಿ ಮೂಡಿ ಬರಲು ಕಾರಣ ರಾಜ್ಯ ರಾಜಕಾರಣದಲ್ಲಿ ನಟಿ ರಮ್ಯಾ ರವರ ಅನುಪಸ್ಥಿತಿ.!

ರಮ್ಯಾ ಬಗ್ಗೆ ಸುದ್ದಿನೇ ಇಲ್ಲ

ಸಿನಿಮಾ ಕ್ಷೇತ್ರ ಬಿಟ್ಟು ರಾಜಕೀಯದಲ್ಲಿ ಸಕ್ರಿಯಗೊಂಡು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ರಮ್ಯಾ ಬಗ್ಗೆ ಈಗ ಸುದ್ದಿನೇ ಇಲ್ಲ.! ಸದ್ಯ ಅವರು ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ ಎಂಬ ಕುರಿತು ಯಾವುದೇ ಮಾಹಿತಿ ಇಲ್ಲ.

ಟ್ವಿಟ್ಟರ್ ಕಡೆ ಮುಖ ಮಾಡಿಲ್ಲ

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟೀವ್ ಆಗಿರುತ್ತಿದ್ದ ರಮ್ಯಾ ಮೇಡಂ ಕಳೆದ ಎರಡು ತಿಂಗಳಿನಿಂದ ಟ್ವಿಟ್ಟರ್ ಕಡೆ ಮುಖ ಮಾಡಿಲ್ಲ ಅಂದ್ರೆ ನೀವು ನಂಬಲೇಬೇಕು.

ಡಿಸೆಂಬರ್ 5 ರಂದೇ ಕೊನೆ.!

ಡಿಸೆಂಬರ್ 5 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದಾಗ ನಟಿ ರಮ್ಯಾ ಒಂದು ಟ್ವೀಟ್ ಮಾಡಿದ್ದರು. ಅವತ್ತೇ ಕೊನೆ. ಅದಾದ ಬಳಿಕ ಟ್ವಿಟ್ಟರ್ ಲೋಕದಲ್ಲಿ ರಮ್ಯಾ ಕಾಣಿಸಿಕೊಂಡಿದ್ದೇ ಇಲ್ಲ.[ಮೋಹಕ ತಾರೆ ರಮ್ಯಾ ಆಸ್ವತ್ರೆಗೆ ದಾಖಲು!]

ಅಂದು ಜ್ವರದಿಂದ ಬಳಲುತ್ತಿದ್ದರು ರಮ್ಯಾ

ನೆಗಡಿ, ವೈರಲ್ ಫೀವರ್ ನಿಂದ ಬಳಲಿದ್ದ ರಮ್ಯಾ ಡಿಸೆಂಬರ್ ತಿಂಗಳಲ್ಲಿ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಅನಾರೋಗ್ಯದಿಂದ ಚೇತರಿಸಿಕೊಂಡು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಅಭಿಮಾನಿಗಳಿಗೆ ಟ್ವಿಟ್ಟರ್ ಮೂಲಕ ರಮ್ಯಾ ಸಂದೇಶ ನೀಡಿದ್ದರು.[ನಟಿ ರಮ್ಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್]

ಈಗ ಹೇಗಿದ್ದಾರೆ.? ಎಲ್ಲಿದ್ದಾರೆ.?

''ಅಂದು ಹುಷಾರಾಗಿದ್ದೇನೆ'' ಎಂದು ಟ್ವೀಟ್ ಮಾಡಿದ್ದ ರಮ್ಯಾ ಈಗ ಹೇಗಿದ್ದಾರೆ, ಎಲ್ಲಿದ್ದಾರೆ ಅಂತ ತಿಳಿದು ಬಂದಿಲ್ಲ.

ವಿದೇಶದಲ್ಲಿ ಇದ್ದಾರಾ.?

ರಮ್ಯಾ ಮತ್ತೆ ವಿದೇಶಕ್ಕೆ ಹಾರಿದ್ದಾರೆ ಅಂತ ಕೆಲವರು ಹೇಳುತ್ತಾರೆ. ಆದ್ರೆ, ಖಚಿತ ಮಾಹಿತಿ ಇಲ್ಲ.

ಎಸ್.ಎಂ.ಕೃಷ್ಣ ಬಗ್ಗೆ ಮಾತಿಲ್ಲ, ಕಥೆಯಿಲ್ಲ.!

ರಮ್ಯಾ ರವರ ರಾಜಕೀಯ ಗುರುಗಳಾದ ಎಸ್.ಎಂ.ಕೃಷ್ಣ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಬಗ್ಗೆ ಕೂಡ ರಮ್ಯಾ ಪ್ರತಿಕ್ರಿಯೆ ನೀಡಿಲ್ಲ.

ಮತ್ತೆ ಪ್ರತ್ಯಕ್ಷವಾಗುವುದು ಯಾವಾಗ್ಲೋ.?

ಎರಡು ತಿಂಗಳಿನಿಂದ ನಾಪತ್ತೆ ಆಗಿರುವ ರಮ್ಯ ಮೇಡಂ ಮತ್ತೆ ಯಾವಾಗ, ಎಲ್ಲಿ ಪ್ರತ್ಯಕ್ಷವಾಗುತ್ತಾರೋ, ನಮಗಂತೂ ಗೊತ್ತಿಲ್ಲ. ಕಾದು ನೋಡೋಣ.

English summary
Sandalwood Actress, Congress Politician, EX MP Ramya aka Divya Spandana is not in news from past 2 months. Where is Ramya now.?

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X