ದರ್ಶನ್ ಹಾಕಿಸಿಕೊಂಡಿದ್ದ "ಸೆಲೆಬ್ರಿಟಿ" ಟ್ಯಾಟೂ ಎಲ್ಲಿ? ವಿಡಿಯೋ ತೋರ್ಸಿ ದಾಸನ ಫ್ಯಾನ್ಸ್ ಮುಸುಮುಸಿ ನಕ್ಕಿದ್ದೇಕೆ?
ಸಾಮಾನ್ಯವಾಗಿ ಅಭಿಮಾನಿಗಳು ನೆಚ್ಚಿನ ನಟ-ನಟಿಯರ ಮೇಲಿನ ಅಭಿಮಾನವನ್ನು ಬಗೆ ಬಗೆಯಾಗಿ ಪ್ರದರ್ಶಿಸುತ್ತಾ ಇರುತ್ತಾರೆ. ಇತ್ತೀಚೆಗೆ ನೆಚ್ಚಿನ ನಟನ ಚಿತ್ರವನ್ನು, ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ನನ್ನ ಅಭಿಮಾನಿಗಳು ನನ್ನ ಎದೆಯಲ್ಲಿ ಇದ್ದಾರೆ ಎಂದು ಟ್ಯೂಟೂ ಹಾಕಿಸಿಕೊಳ್ಳುವ ಮೂಲಕ ಸಾರಿ ಹೇಳುವ ಪ್ರಯತ್ನ ಮಾಡಿದ್ದರು.
ನಟ ದರ್ಶನ್ ಎದೆ ಮೇಲೆ "ನನ್ನ ಪ್ರೀತಿಯ ಸೆಲೆಬ್ರಿಟೀಸ್" ಎನ್ನುವ ಟ್ಯಾಟೂ ಹಾಕಿಸಿಕೊಂಡಿದ್ದು ಭಾರೀ ಸುದ್ದಿ ಆಗಿತ್ತು. ಈ ವರ್ಷ ಹುಟ್ಟುಹಬ್ಬದ ಸಂಭ್ರಮದಲ್ಲೇ ದರ್ಶನ್ ಈ ರೀತಿ ಅಭಿಮಾನಿಗಳಿಗೆ ಗೌರವ ಸಮರ್ಪಿಸಿದ್ದರು. ದರ್ಶನ್ ಟ್ಯಾಟೂ ಹಾಕಿಸಿಕೊಂಡಿದ್ದ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಇದನ್ನು ನೋಡಿ ಅಭಿಮಾನಿಗಳು ಕೂಡ ಖುಷಿ ಆಗಿತ್ತು. ನೆಚ್ಚಿನ ನಟನ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಗಿತ್ತು. ಸದ್ಯ ದರ್ಶನ್ ತಮ್ಮ ಮನೆಯ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವೊಂದು ರಿಲೀಸ್ ಆಗಿದೆ.

ವರ್ಕೌಟ್ ವಿಡಿಯೋದಲ್ಲಿ ದರ್ಶನ್ ಡೆಡಿಕೇಷನ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಫ್ರೀ ಎಕ್ಸರ್‌ಸೈಸ್‌ನಿಂದ ಆರಂಭಿಸಿ ಕೊನೆಗೆ ವರ್ಕೌಟ್ ಮುಗಿಸಿ ಸುಧಾರಿಸಿಕೊಳ್ಳುವುದರವರೆಗೆ ಸಂಪೂರ್ಣ ಝಲಕ್ ಈ ವಿಡಿಯೋದಲ್ಲಿದೆ. ಇದೇ ವಿಡಿಯೋ ಕೊನೆಯಲ್ಲಿ ದರ್ಶನ್ ಟೀಶರ್ಟ್ ಬಿಚ್ಚಿ ಪೋಸ್ ಕೊಟ್ಟಿದ್ದಾರೆ. ಇದರಲ್ಲಿ ದರ್ಶನ್ ಎದೆ ಮೇಲೆ ಯಾವುದೇ ಟ್ಯಾಟೂ ಕಾಣಿಸುತ್ತಿಲ್ಲ. ಇದೇ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಕೆಲವರು ದರ್ಶನ್ ಟ್ಯೂಟೂ ಎಲ್ಲಿ ಮಾಯವಾಯ್ತು? ಹಾಗಾದ್ರೆ, ಅದೆಲ್ಲಾ ಫೇಕಾ? ದರ್ಶನ್ ಪರ್ಮನೆಂಟ್ ಟ್ಯಾಟೂ ಹಾಕಿಸಿಕೊಳ್ಳಿಲ್ವಾ? ಟೆಂಪರರಿ ಟ್ಯಾಟೂನಾ? ಅದು ಎಂದು ಅನುಮಾನ ವ್ಯಕ್ತಪಡಿಸ್ತಿದ್ದಾರೆ.
ಇದೀಗ ದರ್ಶನ್ ಟ್ಯಾಟೂ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸ್ಕ್ರೀನ್‌ಶಾಟ್ ತೆಗೆದು ಕಾಮೆಂಟ್ ಮಾಡುವವರಿಗೆ ದಾಸನ ಫ್ಯಾನ್ ತಿರುಗೇಟು ನೀಡಿದ್ದಾರೆ. ಅಸಲಿ ಸಂಗತಿ ಏನು ಎನ್ನುವುದನ್ನು ಹೇಳುತ್ತಿದ್ದಾರೆ. ಹೌದು ದರ್ಶನ್ ಅವರ ಹೊಸ ವರ್ಕೌಟ್ ವಿಡಿಯೋದಲ್ಲಿ ಅವರ ಎದೆಮೇಲೆ ಟ್ಯಾಟೂ ಕಾಣಿಸುತ್ತಿಲ್ಲ. ಆದರೆ ಅದು ಹೊಸ ವರ್ಕೌಟ್ ವಿಡಿಯೋನೇ ಅಲ್ಲ ಎಂದಿದ್ದಾರೆ. ಇದು ಫೆಬ್ರವರಿಗೂ ಮುನ್ನ ದರ್ಶನ್ ವರ್ಕೌಟ್ ಮಾಡಿರುವ ವಿಡಿಯೋ. ದರ್ಶನ್ ಪ್ರತಿದಿನ ವರ್ಕೌಟ್ ಮಾಡುತ್ತಾರೆ. ಅದೇ ರೀತಿ ಅಂದು ಮಾಡಿದ್ದ ವಿಡಿಯೋ ಶೂಟ್ ಮಾಡಲಾಗಿತ್ತು. ಅದನ್ನು ಈಗ ರಿಲೀಸ್ ಮಾಡಿದ್ದಾರೆ.

ಈ ವಿಡಿಯೋ ಶೂಟ್ ಮಾಡಿರುವುದು ಫೆಬ್ರವರಿಗೂ ಮುನ್ನ. ಆದ್ರೆ ದರ್ಶನ್ ಅವರು "ನನ್ನ ಪ್ರೀತಿಯ ಸೆಲೆಬ್ರಿಟೀಸ್" ಎಂದು ಹಚ್ಚೆ ಹಾಕಿಸಿಕೊಂಡಿದ್ದು ಫೆಬ್ರವರಿ 2ನೇ ವಾರದಲ್ಲಿ. ಹಾಗಾಗಿ ವಿಡಿಯೋದಲ್ಲಿ ದರ್ಶನ್ ಎದೆಮೇಲೆ ಟ್ಯಾಟೂ ಇಲ್ಲ. ವಿಡಿಯೋ ಶೂಟ್ ಮಾಡಿದ್ದ ದಿನ ಕೋಚ್ ಹೇಮಂತ್ ಜೊತೆ ದರ್ಶನ್ ಅವ್ರು ಕ್ಲಿಕ್ಕಿಸಿದ್ದ ಫೋಟೊ ಕೂಡ ಇದೆ. ಅದನ್ನು ಅಭಿಮಾನಿಗಳು ಆಗಲೇ ಶೇರ್ ಮಾಡಿದ್ದರು ನೋಡಿ ಬೇಕಿದ್ದರೆ ಎಂದು ಹಳೇ ಪೋಸ್ಟ್ ಸ್ಕ್ರೀನ್ ಶಾಟ್ ತೋರಿಸುತ್ತಿದ್ದಾರೆ.
ಒಟ್ನಲ್ಲಿ ನಟ ದರ್ಶನ್ ಎದೆ ಮೇಲೆ ಟ್ಯಾಟು ಹಾಕಿಸಿಕೊಂಡಿದ್ದೆಲ್ಲಾ ಸುಳ್ಳು ಎಂದವರಿಗೆ ದರ್ಶನ್ ಫ್ಯಾನ್ಸ್ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಇನ್ನು ದರ್ಶನ್ ಸಿನಿಮಾಗಳ ವಿಚಾರಕ್ಕೆ ಬಂದರೆ ಈಗ 'ಕಾಟೇರ' ಶೂಟಿಂಗ್ ನಡೀತಿದೆ. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡ್ತಿದ್ದಾರೆ. ಇನ್ನು ಮೂರ್ನಾಲ್ಕು ಸಿನಿಮಾಗಳಿಗೆ ನಿರ್ಮಾಪಕರು ಫಿಕ್ಸ್ ಆಗಿದ್ದಾರೆ. ಸದ್ಯ 'ಕಾಟೇರ' ಸಿನಿಮಾ ಚಿತ್ರೀಕರಣದಿಂದ ಬಿಡುವು ಪಡೆದು ಚುನಾವಣ ಪ್ರಚಾರದಲ್ಲಿ ದರ್ಶನ್ ನಿರತರಾಗಿದ್ದಾರೆ.
ಅಂದಹಾಗೆ ದರ್ಶನ್ ಯಾವುದೋ ಒಂದು ಪಕ್ಷದ ಪರ ಪ್ರಚಾರ ಮಾಡುತ್ತಿಲ್ಲ. ಬದಲಿಗೆ ತಮ್ಮ ಆತ್ಮೀಯರ ಪರ ಮತಯಾಚನೆ ಮಾಡುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳ ಅಭ್ಯರ್ಥಿಗಳ ಪರ ಮತ ಕೇಳುತ್ತಿದ್ದಾರೆ. ದರ್ಶನ್ ಪ್ರಚಾರಕ್ಕೆ ಹೋದಕಡೆ ಅಭಿಮಾನಿಗಳಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.


Click it and Unblock the Notifications











