'ಕುರುಕ್ಷೇತ್ರ' ಮಿಡ್ ನೈಟ್ ಶೋ, ಮಾರ್ನಿಂಗ್ ಶೋ ಎಲ್ಲೆಲ್ಲಿದೆ?
ಸಹಜವಾಗಿ ದರ್ಶನ್ ಸಿನಿಮಾಗಳು ಅಂದ್ರೆ ಮಿಡ್ ನೈಟ್ ಶೋ ಆಯೋಜನೆ ಮಾಡುವುದು ಟ್ರೆಂಡ್. ಚಿತ್ರಮಂದಿರದವರು ಅಧಿಕೃತವಾಗಿ ಶೋ ಇಟ್ಟಿಲ್ಲ ಅಂದ್ರೂ ಸ್ಥಳಿಯ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಅಭಿಮಾನಿಗಳಿಗೋಸ್ಕರ ಮಧ್ಯರಾತ್ರಿ ವಿಶೇಷವಾದ ಶೋ ಇಡ್ತಾರೆ.
ನಿರೀಕ್ಷೆಯಂತೆ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರಕ್ಕೂ ಮಿಡ್ ನೈಟ್ ಶೋ ಆಯೋಜಿಸಿದ್ದಾರೆ. ನಿನ್ನೆಯವರೆಗೂ ಮಧ್ಯರಾತ್ರಿ ಶೋ ಮತ್ತು ಮುಂಜಾನೆ ಶೋಗಳ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.
ಹಾಗಾಗಿ, ಬಹುಶಃ ಕುರುಕ್ಷೇತ್ರ ಸಿನಿಮಾ ಮಿಡ್ ನೈಟ್ ಶೋ ಇರುವುದಿಲ್ಲ ಎಂದುಕೊಂಡಿದ್ದರು. ಆದ್ರೀಗ, ರಾಜ್ಯದ ಕೆಲವು ಚಿತ್ರಮಂದಿರದಲ್ಲಿ ಮಧ್ಯರಾತ್ರಿಯಿಂದಲೇ ದುರ್ಯೋಧನನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ಹಾಗಿದ್ರೆ, ಯಾವ ಥಿಯೇಟರ್ ನಲ್ಲಿ ಕುರುಕ್ಷೇತ್ರ ಮಿಡ್ ನೈಟ್ ಶೋ ಇದೆ? ಮುಂದೆ ಓದಿ.....

ಸಿದ್ದಲಿಂಗೇಶ್ವರದಲ್ಲಿ ಮಧ್ಯರಾತ್ರಿ ಶೋ
ಬೆಂಗಳೂರಿನ ಜೆಪಿ ನಗರದಲ್ಲಿರುವ ಸಿದ್ದಲಿಂಗೇಶ್ವರ (4k ಮತ್ತು 3D) ಚಿತ್ರಮಂದಿರದಲ್ಲಿ ಕುರುಕ್ಷೇತ್ರ ಸಿನಿಮಾ ಮಧ್ಯರಾತ್ರಿ ಬಿಡುಗಡೆಯಾಗುತ್ತಿದೆ. ರಾತ್ರಿ 12.5ಕ್ಕೆ ಕುರುಕ್ಷೇತ್ರ ಮೊದಲ ಶೋ ಕಾಣ್ತಿದೆ. ಬಹುಶಃ ಬೆಂಗಳೂರಿನಲ್ಲಿ ಕುರುಕ್ಷೇತ್ರ ಚಿತ್ರದ ಮೊಟ್ಟ ಮೊದಲ ಶೋ ಇದೇ ಇರಬಹುದು.

'ವೈಭವ್'ನಲ್ಲೂ ಮಿಡ್ ನೈಟ್ ಶೋ
ಸಂಜಯ್ ನಗರದಲ್ಲಿರುವ ವೈಭವ್ ಚಿತ್ರಮಂದಿರದಲ್ಲೂ ಕುರುಕ್ಷೇತ್ರ ಮಧ್ಯರಾತ್ರಿ ಬಿಡುಗಡೆಯಾಗುತ್ತಿದೆ. ಮಧ್ಯರಾತ್ರಿ 1 ಒಂದು ಗಂಟೆಗೆ ವೈಭವ್ ಥಿಯೇಟರ್ ನಲ್ಲಿ 3ಡಿಯಲ್ಲಿ ಸಿನಿಮಾ ರಿಲೀಸ್ ಆಗ್ತಿದೆ. 300 ಮತ್ತು 400 ರೂಪಾಯಿ ಬೆಲೆ ಹೊಂದಿರುವ ಈ ಶೋನ ಟಿಕೆಟ್ ಸೋಲ್ಡ್ ಔಟ್ ಆಗಿದೆ.

'ರಾಕ್ ಲೈನ್'ನಲ್ಲಿ 3 ಗಂಟೆಗೆ
ಸಿದ್ದಲಿಂಗೇಶ್ವರದಲ್ಲಿ 12 ಗಂಟೆಗೆ, ವೈಭವ್ ಚಿತ್ರಮಂದಿರದಲ್ಲಿ 1 ಗಂಟೆಗೆ ಮೊದಲ ಶೋ ಇದ್ದರೆ, ರಾಕ್ ಲೈನ್ ಮಾಲ್ ನಲ್ಲಿ ಮುಂಜಾನೆ 3 ಗಂಟೆಗೆ ಮೊದಲ ಶೋ ನಡೆಯಲಿದೆ. ಈ ಮೂರು ಚಿತ್ರಮಂದಿರಗಳನ್ನ ಬಿಟ್ಟರೇ ಉಳಿದ ಎಲ್ಲ ಕಡೆ ಮೊದಲ ಶೋ 5 ಮತ್ತು 6 ಗಂಟೆ ಮೇಲೆ ನಿಗಧಿಯಾಗಿದೆ.

ಮಾರ್ನಿಂಗ್ ಶೋ ಎಲ್ಲೆಲ್ಲಿದೆ
ಭಾರತಿ (ಪೀಣ್ಯ), ಕಾವೇರಿ (ಸ್ಯಾಂಕಿ ರಸ್ತೆ), ಮೋಹನ್ (ಸುಂಕದಕಟ್ಟೆ), ರವಿ (ಈಜಿಪುರ), ಈಶ್ವರಿ (ಬನಶಂಕರಿ), ಲಕ್ಷ್ಮಿ (ತಾವರೆಕೆರೆ), ವೈನಿಧಿ (ಸಿಂಗಾಪುರ), ಮಹಾದೇಶ್ವರ (ಬನಶಂಕರಿ), ಎಚ್.ಎಂ.ಟಿ (ಜಾಲಹಳ್ಳಿ), ಕಿನೋ (ಕಾಡುಗೋಡಿ), ಶ್ರೀವೆಂಕಟೇಶ್ವರ (ಕೆಂಗೇರಿ) ಸೇರಿದಂತೆ ಹಲವು ಚಿತ್ರಮಂದಿರದಲ್ಲಿ ಬೆಳಿಗ್ಗೆ 5.30ಕ್ಕೆ ಮತ್ತು 6 ಗಂಟೆಗೆ ಶೋ ಆರಂಭವಾಗಲಿದೆ.


Click it and Unblock the Notifications











